ಸೋಮವಾರ, ಮೇ 17, 2021
25 °C

ಬಸವಜಯಂತಿ ಆಚರಣೆ: ಸಭೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸೋಮವಾರಪೇಟೆ: ಬಸವಜಯಂತಿ ಆಚರಣೆಯನ್ನು ಅದ್ದೂರಿಯಾಗಿ ನಡೆಸಲು ತಾಲೂಕು ಕಚೇರಿ ಆವರಣದಲ್ಲಿ ಗುರುವಾರ  ತಹಶೀಲ್ದಾರ್ ಕೆ.ಆರ್ ಭಾಸ್ಕರ್ ಅಧ್ಯಕ್ಷತೆಯಲ್ಲಿ ನಡೆದ ಪೂರ್ವಬಾವಿ ಸಭೆಯಲ್ಲಿ ನಿರ್ಧರಿಸಲಾಯಿತು.ಬಸವ ಜಯಂತಿ ಆಚರಿಸಲು ಆರಂಭಿಸಿ 100 ವರ್ಷಗಳು ಕಳೆದಿರುವುದರಿಂದ ಈ ಬಾರಿ ರಚನಾತ್ಮಕವಾಗಿ ಬಸವಜಯಂತಿ ಆಚರಿಸಲು ಎಲ್ಲರೂ ಗಮನ ಹರಿಸಬೇಕೆಂದು ವಿರಕ್ತ ಮಠದ ವಿಶ್ವೇಶ್ವರ ಸ್ವಾಮೀಜಿ ತಿಳಿಸಿದರು. ಏ. 24 ರಂದು  ಬೆಳಿಗ್ಗೆ 7 ಕ್ಕೆ ವಿರಕ್ತ ಮಠದಿಂದ ಕಕ್ಕೆಹೊಳೆ ಬಳಿಯಿರುವ ಬಸವೇಶ್ವರ ಪ್ರತಿಮೆಯವರೆಗೆ ಮೆರವಣಿಗೆ ತೆರಳಿ ಪ್ರತಿಮೆಗೆ ಮಾಲಾರ್ಪಣೆ ಮಾಡಲು ತೀರ್ಮಾನಿಸಲಾಯಿತು.ಅಂದು ಬೆಳಿಗ್ಗೆ 11 ಕ್ಕೆ ಬಸವೇಶ್ವರ ದೇವಾಲಯದ ಬಳಿ ಸಾರ್ವಜನಿಕ ಸಮಾರಂಭ ಹಾಗೂ ಸಂಜೆ 5ಕ್ಕೆ ವಿವಿಧ ಕಲಾ ತಂಡಗಳೊಂದಿಗೆ ನಗರದ ಪ್ರಮುಖ ಬೀದಿಗಳಲ್ಲಿ ನಡೆಯುವ ಮೆರವಣಿಗೆಯಲ್ಲಿ ಎ್ಲ್ಲಲ ಇಲಾಖೆ ಅಧಿಕಾರಿಗಳು, ಸಂಘ ಸಂಸ್ಥೆಗಳು ಪಾಲ್ಗೊಳ್ಳಲು ಸೂಚಿಸಬೇಕೆಂದು ಸಭೆ ನಿರ್ಧರಿಸಿತು. ಬಸವ ಜಯಂತಿ ಅಂಗವಾಗಿ ಏ. 23ರಂದು ನಡೆಯಲಿರುವ ವಚನಗಾಯನ, ರಂಗೋಲಿ ಹಾಗೂ ಛದ್ಮವೇಷ ಸ್ಪರ್ಧೆಗಳಿಗೆ ಸೋಮವಾರಪೇಟೆ ನಗರ ವ್ಯಾಪ್ತಿಯ ಶಾಲೆಗಳಿಗೆ ಮಾಹಿತಿ ನೀಡಿ ಸ್ಪರ್ಧೆಗಳಲ್ಲಿ ಮಕ್ಕಳು ಪಾಲ್ಗೊಳ್ಳುವಂತೆ ಸೂಚಿಸುವುದಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ರಾಮಚಂದ್ರರಾಜೇ ಅರಸ್ ತಿಳಿಸಿದರು.ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ತಾಲೂಕು ಮಟ್ಟದಲ್ಲಿ ಹೆಚ್ಚಿನ ಅಂಕಗಳಿಸಿದ  ಒಬ್ಬೊಬ್ಬ ವಿದ್ಯಾರ್ಥಿಗೆ  ಪ್ರೋತ್ಸಾಹ ಧನ ನೀಡಿ ಗೌರವಿಸುವ ಮೂಲಕ ಬಸವಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸುವಂತೆ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿ ಪಿ.ಚಂದ್ರಶೇಖರ್ ಸಲಹೆ ನೀಡಿದರು.ಬಸವ ಜಯಂತಿಯಂದು ಮಾಂಸ ಮಾರಾಟ ನಿಷೇಧಿಸಬೇಕು ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾದ್ದರಿಂದ ಪಟ್ಟಣ ಪಂಚಾಯಿತಿ ಹಾಗೂ ಚೌಡ್ಲು ಗ್ರಾಮ ಪಂಚಾಯಿತಿಗೆ ಈ ಕುರಿತು ಸುತ್ತೋಲೆ ಕಳುಹಿಸುವಂತೆ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ್‌ಗೆ  ಸೂಚಿಸಲಾಯಿತು.ಸಭೆಯಲ್ಲಿ ಬಸವೇಶ್ವರ ಯುವಕ ಸಂಘದ ಅಧ್ಯಕ್ಷ ಡಿ.ಎಸ್. ಗಿರೀಶ್, ಅಕ್ಕನ ಬಳಗದ ಅಧ್ಯಕ್ಷೆ  ಭಗವತಿ ದೇಶಮುಖ್, ಪದಾಧಿಕಾರಿಗಳು ಮತ್ತು ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.