ಬಸವನಬಾಗೇವಾಡಿ: ಇಲ್ಲಿಯ ತಾಲ್ಲೂಕು ಪಂಚಾಯಿತಿ ಎರಡನೇ ಅವಧಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಬುಧವಾರ ನಡೆದ ಚುನಾ ವಣೆಯಲ್ಲಿ ಅಧ್ಯಕ್ಷರಾಗಿ ಶಿಕಳವಾಡಿ ಮತಕ್ಷೇತ್ರದ ರೇಣುಕಾ ವಾಲೀಕಾರ ಹಾಗೂ ಉಪಾಧ್ಯಕ್ಷರಾಗಿ ಕೊಲ್ಹಾರ ಮತಕ್ಷೇತ್ರದ ಕಲ್ಲಪ್ಪ ಸೊನ್ನದ ಅವಿರೋಧವಾಗಿ ಆಯ್ಕೆಯಾದರು.

ಒಟ್ಟು 28 ಸದಸ್ಯ ಬಲ ಹೊಂದಿರುವ ತಾ.ಪಂ ಯಲ್ಲಿ ಕಾಂಗ್ರೆಸ್ 15, ಬಿಜೆಪಿ 8, ಪಕ್ಷೇತರರು 4, ಜೆಡಿಎಸ್ 1 ಸದಸ್ಯರಿದ್ದಾರೆ. ಅಧ್ಯಕ್ಷ ಸ್ಥಾನ ಅನುಸೂಚಿತ ಪಂಗಡ ಮಹಿಳೆಗೆ ಮೀಸಲಾಗಿದ್ದರಿಂದ ಬಿಜೆಪಿಯ ರೇಣುಕಾ ವಾಲೀಕರ ಒಬ್ಬರೆ ನಾಮಪತ್ರ ಸಲ್ಲಿಸಿದ್ದರು.

ಸಾಮಾನ್ಯ ಅಭ್ಯರ್ಥಿಗೆ ಮೀಸಲಾಗಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ಕಲ್ಲಪ್ಪ ಸೋನ್ನದ (ಪಕ್ಷೇತರ), ನಾಗಪ್ಪ ಮೇಟಿ (ಬಿಜೆಪಿ) ನಾಮಪತ್ರ ಸಲ್ಲಿಸಿದ್ದರು. ಬಿಜೆಪಿಯ ನಾಗಪ್ಪ ಮೇಟಿ ನಾಮಪತ್ರ ಹಿಂದಕ್ಕೆ ಪಡೆದಿದ್ದರಿಂದ ಚುನಾವಣಾ ಅಧಿಕಾರಿಗಳಾದ ಉಪವಿಭಾಗಾಧಿಕಾರಿ ಡಾ. ಎಚ್.ಬಿ. ಬೂದೆಪ್ಪ ಇಬ್ಬರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಘೋಷಿಸಿದರು.

ಈ ಸಂದರ್ಭದಲ್ಲಿ ತಹಸೀಲ್ದಾರ ಮಹಾದೇವಪ್ಪ ಮುರಗಿ, ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ರಾಜ ಕುಮಾರ ತೊರವಿ ಉಪಸ್ಥಿತರಿದ್ದರು. ಕಳೆದ ತಿಂಗಳು 20 ರಂದು ನಿಗದಿಯಾಗಿದ್ದ ಚುನಾವಣೆಯಲ್ಲಿ ಕೋರಂ ಭರ್ತಿಯಾಗದೇ ಇದ್ದುದ್ದರಿಂದ ಚುನಾವಣೆ ಮೂಂದುಡಲಾಗಿತ್ತು.

ಬುಧವಾರ ನಡೆದ ಚುನಾವಣೆಯಲ್ಲಿ ಒಟ್ಟು 28 ಸದಸ್ಯರಲ್ಲಿ 27 ಸದಸ್ಯರು ಪಾಲ್ಗೊಂಡಿದ್ದರು. ಸಾಸನೂರ ಮತಕ್ಷೇತ್ರದ ಸದಸ್ಯೆ ವಿರೂಪಾಕ್ಷಮ್ಮ ಲಿಂಗದಳ್ಳಿ ಗೈರು ಉಳಿದಿದ್ದರು. ಕಾಂಗ್ರೆಸ್ ಅಧಿಕ ಸಂಖ್ಯಾಬಲ ಹೊಂದಿದ್ದೂರು ಅನುಸೂಚಿತ ಪಂಗಡ ಮಹಿಳೆಗೆ ಮೀಸಲಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿಯ ಏಕೈಕ ಅಭ್ಯರ್ಥಿಯಾಗಿದ್ದ ರೇಣುಕಾ ವಾಲೀಕರ ಅಧ್ಯಕ್ಷರಾಗಿ ಆಯ್ಕೆಯಾದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.