ಮಂಗಳವಾರ, ಏಪ್ರಿಲ್ 20, 2021
29 °C

ಬಸವಲಿಂಗ ಪಟ್ಟದ್ದೇವರಿಗೆ ನಾಗರಿಕ ಸನ್ಮಾನ ನಾಳೆ

.ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೀದರ್: ಮಹಾರಾಷ್ಟ್ರದಲ್ಲಿ 36 ದಿನಗಳ ಕಾಲ ಬಸವಜ್ಯೋತಿ ಸಂದೇಶ ಯಾತ್ರೆ ಕೈಗೊಂಡ ಹಾಗೂ ಪ್ರಸಕ್ತ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಪಾತ್ರರಾದ ಹಿನ್ನೆಲೆಯಲ್ಲಿ ಹಿರೇಮಠ ಸಂಸ್ಥಾನದ ಬಸವಲಿಂಗ ಪಟ್ಟದ್ದೇವರಿಗೆ ಡಿಸೆಂಬರ್ 1 ರಂದು ಸಾಯಂಕಾಲ 5 ಗಂಟೆಗೆ ಭಾಲ್ಕಿ ಪಟ್ಟಣದ ಚನ್ನಬಸವಾಶ್ರಮದಲ್ಲಿ  ನಾಗರಿಕ ಸನ್ಮಾನ ನಡೆಯಲಿದೆ.ಗುರುವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಸ್ವಾಗತ ಸಮಿತಿ ಅಧ್ಯಕ್ಷರೂ ಆದ ಮಾಜಿ ಶಾಸಕ ಪ್ರಕಾಶ ಖಂಡ್ರೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಗೋವಿಂದ ಕಾರಜೋಳ್ ಸಮಾರಂಭ ಉದ್ಘಾಟಿಸುವರು. ಹಾರಕೂಡದ ಚನ್ನವೀರ ಶಿವಾಚಾರ್ಯರು ಸಾನ್ನಿಧ್ಯ ವಹಿಸುವರು ಎಂದರು.36 ದಿನದ ಬಸವಜ್ಯೋತಿ ಸಂದೇಶ ಯಾತ್ರೆಯ ಬಳಿಕ ಬಸವಲಿಂಗ ಪಟ್ಟದ್ದೇವರು ಶುಕ್ರವಾರ(ನ.30) ಮಹಾರಾಷ್ಟ್ರದ ಮಂಗಳವೇಡೆಯಿಂದ ಔರಾದ್ ತಾಲ್ಲೂಕಿನ ಕಮಲನಗರಕ್ಕೆ ತಲುಪಲಿದ್ದು, ಅಲ್ಲಿಂದ ಭಾಲ್ಕಿ ಆಗಮಿಸಲಿದ್ದಾರೆ ಎಂದು ತಿಳಿಸಿದರು.ಬಸವಲಿಂಗ ಪಟ್ಟದ್ದೇವರು ಜಿಲ್ಲೆಯಲ್ಲಿ ಶೈಕ್ಷಣಿಕ ಕ್ರಾಂತಿಗೆ ನಾಂದಿ ಹಾಡಿದ್ದಾರೆ. ಅನಾಥ ಮಕ್ಕಳಿಗೆ ಉಚಿತ ಊಟ, ವಸತಿ, ಶಿಕ್ಷಣ ನೀಡಿ ನೆರವಾಗುತ್ತಿದ್ದಾರೆ. ಬಸವತತ್ವ ಪ್ರಚಾರಕ್ಕೆ ತೊಡಗಿದ್ದಾರೆ. ಮಹಾರಾಷ್ಟ್ರದಲ್ಲಿ ಬಸವಜ್ಯೋತಿ ಯಾತ್ರೆ ಕೈಗೊಂಡಿರುವುದು ಸಂತಸ ಉಂಟು ಮಾಡಿದೆ. ಶ್ರೀಗಳಿಗೆ ರಾಜ್ಯೋತ್ಸವ ಪ್ರಶಸ್ತಿ ಸಂದಿರುವುದು ಹೆಮ್ಮೆಯ ಸಂಗತಿ ಎಂದರು.ಮಹಾರಾಷ್ಟ್ರದಲ್ಲಿ ಬಸವತತ್ವ ಪ್ರಚಾರದ ಶ್ರೇಯ ಭಾಲ್ಕಿ ಹಿರೇಮಠಕ್ಕೆ ಸಲ್ಲುತ್ತದೆ. ಬಸವಲಿಂಗ ಪಟ್ಟದ್ದೇವರು 60 ಜನರ ತಂಡದೊಂದಿಗೆ ಮಹಾರಾಷ್ಟ್ರದ 36 ಜಿಲ್ಲೆಗಳಲ್ಲಿ ಬಸವತತ್ವದ ಕಂಪು ಹರಡಿಸಿದ್ದಾರೆ.ನಾಗರಿಕ ಸನ್ಮಾನ ಸಂದರ್ಭದಲ್ಲಿ ಬಸವತತ್ವ ಪ್ರಚಾರದ ವಿಡಿಯೋ, ಛಾಯಾಚಿತ್ರ ಪ್ರದರ್ಶನವು ಇರುತ್ತದೆ ಭಾಲ್ಕಿ ಸಂಸ್ಥಾನದ ಗುರುಬಸವ ದೇವರು ತಿಳಿಸಿದರು.ಕರ್ನಾಟಕ ರಕ್ಷಣಾ ವೇದಿಕೆಯ ಶಶಿಧಕರ ಕೋಸಂಬೆ, ಉಪನ್ಯಾಸಕ ಚಂದ್ರಕಾಂತ್ ಬಿರಾದಾರ್ ಉಪಸ್ಥಿತರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.