ಭಾನುವಾರ, ಏಪ್ರಿಲ್ 18, 2021
30 °C

ಬಸವೇಶ್ವರ ಜಾತ್ರಾ ಮಹೋತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಾಲೂರು: ತಾಲ್ಲೂಕಿನ ಚೂಡಗೊಂಡನಹಳ್ಳಿಯಲ್ಲಿ ಬಸವೇಶ್ವರನ ಜಾತ್ರಾ ಮಹೋತ್ಸವದ ಅಂಗವಾಗಿ ಮಂಗಳವಾರ ಸಿಡಿ ಉತ್ಸವಕ್ಕೆ ಆರತಿ ತಂಬಿಟ್ಟು ದೀಪೋತ್ಸವ ನಡೆಯಿತು. 

ಕಾರ್ಯಕ್ರಮದ ಅಂಗವಾಗಿ ಗ್ರಾಮದ ಪ್ರಮುಖ ಕುಟುಂಬಗಳು ದೇವರಿಗೆ ಆರತಿ ತಂಬಿಟ್ಟು ನೈವೇದ್ಯದೊಂದಿಗೆ ಮಂಗಳ ವಾಧ್ಯಗಳ ಜೊತೆ ಗ್ರಾಮದ ಮಧ್ಯಭಾಗಕ್ಕೆ ತೆರಳಿ ಸಿಡಿರಣ್ಣನಿಗೆ ತಂಬಿಟ್ಟು ಆರತಿ ಅರ್ಪಿಸಿದರು.ನಂತರ ಸಿಡಿರಣ್ಣನನ್ನು ಸಿಡಿ ಉತ್ಸವದಲ್ಲಿ ಕುಳ್ಳಿರಿಸಿ ಪೂಜೆ ಸಲ್ಲಿಸಿದ ನಂತರ ಸಿಡಿ ಉತ್ಸವಕ್ಕೆ ಚಾಲನೆ ನೀಡಲಾಯಿತು. ಸಿಡಿರಣ್ಣನಿಗೆ ವಿಶೇಷ ಹೂವಿನ ಅಲಂಕಾರದೊಂದಿಗೆ ಉತ್ಸವಕ್ಕೆ ಕಟ್ಟಿ ತಿರುಗಿಸಲಾಯಿತು. ಈ ಸಂದರ್ಭದಲ್ಲಿ ಭಕ್ತರು ಬಾಳೆಹಣ್ಣು, ದವನ ಹೂಗಳೊಂದಿಗೆ ಗೋವಿಂದ ನಾಮ ಸ್ಮರಣೆ ಮಾಡಿ ಸಿಡಿರಣ್ಣನ ಮೇಲೆ ಎಸೆಯುವ ಮೂಲಕ ತಮ್ಮ ಭಕ್ತಿ ಪ್ರದರ್ಶಿಸಿದರು.

ಸುಂಕ ಸಂಗ್ರಹ ಹರಾಜುತಾಲ್ಲೂಕಿನ ಚಿಕ್ಕತಿರುಪತಿಯ ವೆಂಕಟರಮಣಸ್ವಾಮಿ ಜಾತ್ರಾ ಮಹೋತ್ಸವ ಹಾಗೂ ರಥೋತ್ಸವ ಪ್ರಯುಕ್ತ ಭಾಗವಹಿಸುವ ಅಂಗಡಿ ಮುಂಗಟ್ಟು ಮತ್ತು ವಾಹನಗಳಿಂದ ಸುಂಕ ಸಂಗ್ರಹಿಸಲು ಹರಾಜು ಪ್ರಕ್ರಿಯೆ ನಡೆಯಿತು.ಪ್ರತಿ ವರ್ಷದಂತೆ ಈ ವರ್ಷವೂ ನಡೆಯುವ ಜಾತ್ರಾ ಮಹೋತ್ಸವ ಹಾಗೂ ರಥೋತ್ಸವಕ್ಕೆ ಬರುವ ಅಂಗಡಿಗಳಿಗೆ 70 ಸಾವಿರ, ದೇವರಿಗೆ ತೆಂಗಿನಕಾಯಿ ಹೊಡೆಯಲು 35,300 ರೂಪಾಯಿ, ತಲೆ ಕೂದಲು ತೆಗೆಯಲು 22,600, ಪಾದರಕ್ಷೆ ಬಿಡುವ ಸ್ಥಳಕ್ಕೆ 48,500 ಹಾಗೂ ವಿವಿಧ ಹರಾಜನ್ನು 10 ದಿನಗಳಿಗೆ ಅನ್ವಯವಾಗುವಂತೆ ಹರಾಜು ಪ್ರಕ್ರಿಯೆಯಲ್ಲಿ ಶಿರಸ್ತೇದಾರ್ ಸುಭಾನ್, ದೇವಾಲಯದ ನಿರ್ವಹಣಾಧಿಕಾರಿ ಮಲ್ಲೇಶಾಚಾರ್, ಪೇಷ್ಕರ್ ಪದ್ಮಾವತಿ, ಸಿಬ್ಬಂದಿ ಗೋವಿಂದು ಭಾಗವಹಿಸಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.