ಬಸವನಬಾಗೇವಾಡಿ: ಪಟ್ಟಣದ ಐತಿಹಾಸಿಕ ಬಸವೇಶ್ವರ (ನಂದಿ) ಜಾತ್ರಾ ಮಹೋತ್ಸವದ ಮೂರನೇ ದಿನವಾದ ಬುಧವಾರ ಬಸವೇಶ್ವರ ದೇವಾಲಯದ ತೋಟದ ಮೈದಾನದಲ್ಲಿ ಭಾರ ಎತ್ತುವ ಕಸರತ್ತಿನ ಸ್ಫರ್ಧೆಗಳು ನಡೆದವು.

ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಜಟ್ಟಿಗಳು ಸಂಗ್ರಾಣಿ ಕಲ್ಲು, ಗುಂಡು, ಉಸುಕಿನ ಚೀಲ, ಜೋಳದ ಚೀಲ, ಭಾರವಾದ ಚೀಲವನ್ನು ಹಲ್ಲಿನಿಂದ ಎತ್ತುವುದು, ಭಾರದ ಚೀಲವನ್ನು ಬೆನ್ನಿಗೆ ಕಟ್ಟಿಕೊಂಡು ಪಲ್ಟಿ ಹೊಡೆಯುವುದು, ತಲೆಕೂದಲು ಮತ್ತು ಮೀಸೆಯಿಂದ ಭಾರವಾದ ಕಲ್ಲು ಎತ್ತುವ ಸ್ಪರ್ಧೆಗಳು ನೋಡಗರನ್ನು ಮಂತ್ರಮುಗ್ದರನ್ನಾಗಿ ಮಾಡಿತ್ತು.

ಸ್ಪರ್ಧೆಯಲ್ಲಿ ವಿಜಾಪುರದ ಅಬ್ಬಾಸ್ ಜಾಮದಾರ ಮತ್ತು ಮುತ್ತಗಿಯ ಆನಂದ ದೇವಣಗಾವ 50 ಕೆ.ಜಿ ತೂಕದ ಚೀಲವನ್ನು ಬೆನ್ನಿಗೆ ಕಟ್ಟಿಕೊಂಡು ಪಲ್ಟಿ ಹೊಡೆದರು. ವಿಜಾಪುರದ ಅಬ್ಬಾಸ್ ಅವರು 50 ಕೆ.ಜಿ ತೂಕದ ಚೀಲವನ್ನು ಹಲ್ಲಿನಿಂದ ಎತ್ತಿದರು. ಕರಿಭಂಟನಾಳ ಗ್ರಾಮದ ಮಹಮ್ಮದಸಾ ವಾಲೀಕಾರ ಅವರ ಎತ್ತು ದಿಡ ನಮಸ್ಕಾರ ಹಾಕಿತು.

ಈ ಸಂದರ್ಭದಲ್ಲಿ ಸ್ಥಳೀಯ ವಿರಕ್ತಮಠದ ಸಿದ್ಧಲಿಂಗದೇವರು ಶಿವಾನಂದ ಈರಕಾರ ಮುತ್ಯಾ, ಪುರಸಭೆ ಅಧ್ಯಕ್ಷ ಜಗದೀಶ ಕೊಟ್ರಶೆಟ್ಟಿ, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಈರಣ್ಣ ಪಟ್ಟಣಶೆಟ್ಟಿ, ಬಸಪ್ಪ ಹಾರಿವಾಳ, ಮಲ್ಲಿಕಾರ್ಜುನ ಗುಂದಗಿ, ಶೇಖರ ಗೊಳಸಂಗಿ, ಬಸವರಾಜ ಗೊಳಸಂಗಿ, ನಾಗರಾಜ ಗುಂದಗಿ, ಅನಿಲ ಪವಾರ, ಜೆ.ಎಸ್. ಉಪ್ಪಿನ, ರಾಜುಗೌಡ ಚಿಕ್ಕೊಂಡ, ಸಂಗಪ್ಪ ವಾಡೇದ, ಸುಭಾಷ ಚಿಕ್ಕೊಂಡ, ಸಂಗಣ್ಣ ಕಲ್ಲೂರ ಉಪಸ್ಥಿತರಿದ್ದರು.
ಬಹುಮಾನ ವಿತರಣೆ: ಭಾರ ಎತ್ತುವ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಣೆ ಮಾಡಿ ಸನ್ಮಾನಿಸಿ ಗೌರವಿಸಲಾಯಿತು.

ಮೂರು ಕ್ವಿಂಟಲ್ ತೂಕದ ಉಸುಕಿನ ಚೀಲ ಎತ್ತಿವ ಸ್ಪರ್ಧೆ: ಯಳಗಲ್ಲ ಗ್ರಾಮದ ಗಂಗಾಧರ ಹಣಮಂತ ಶಿರೂರ (ಪ್ರಥಮ), ಗೋನಾಳ ಗ್ರಾಮದ ವಿಠ್ಠಲ ರಾಮಣ್ಣ ಹಡಗಲಿ (ದ್ವಿತೀಯ), ಬೀಳಗಿಯ ಲಕ್ಷ್ಮಣ ಮೇಲಕುರ (ತೃತೀಯ).

ಸಂಗ್ರಾಣಿ ಕಲ್ಲು ಸಾಗು ಎತ್ತುವ ಸ್ಪರ್ಧೆ: ಕುಂಟೋಜಿಯ ಮಲ್ಲಿಕಾರ್ಜುನ ಸಿದ್ದಪ್ಪ ತಳವಾರ (ಪ್ರಥಮ), ಮುತ್ತಗಿಯ ಸುರೇಶ ಹಣಮಂತ ನಾಯಕರ (ದ್ವಿತೀಯ), ಗುಳೇದಗುಡ್ಡದ ಮಂಜುನಾಥ ಸಂಗೊಂದಿ (ತೃತೀಯ).
ಸಂಗ್ರಾಣಿ ಕಲ್ಲು ವತ್ತು ಎತ್ತುವ ಸ್ಪರ್ಧೆ: ಬಾಡಗಿ ಗ್ರಾಮದ ಗಿರಮಲ್ಲ ಚಮಕೇರಿ (ಪ್ರಥಮ), ಹ್ಲ್ಲಾಲೊಳ್ಳಿಯ ಮಾದೇವ ಕುಡಚಿ (ದ್ವಿತೀಯ), ಜಗದಾಳೆ ಗ್ರಾಮದ ರಮೇಶ ದಡ್ಡಿಮನಿ (ತೃತೀಯ).

ಗುಂಡು ಎತ್ತುವ ಸ್ಪರ್ಧೆ: ಹಳ್ಳೂರ ಗ್ರಾಮದ ಚಂದ್ರಶೇಖರ ಯಾಳವಾರ (ಪ್ರಥಮ), ಸಾತಿಹಾಳದ ಕೆಂಚಪ್ಪ ಪೂಜಾರಿ (ದ್ವಿತೀಯ), ಶಶಿಧರ ರಾಯಚೂರ (ತೃತೀಯ) ಸ್ಥಾನ ಪಡೆದುಕೊಂಡರು. ಭಾರ ಎತ್ತುವ ಸ್ಫರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದವರಿಗೆ ಐದು ತೊಲೆ ಬೆಳ್ಳಿ ಕಡೆ ಯೊಂದಿಗೆ ನೆನಪಿನ ಕಾಣಿಕೆ ನೀಡಲಾಯಿತು. ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದ ಸ್ಪರ್ಧಿಗಳಿಗೆ ನೆನಪಿನ ಕಾಣಿಕೆ ನೀಡಿ ಸನ್ಮಾನಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.