ಬೆಂಗಳೂರು: ಕನ್ನಡ ನುಡಿ ಭಾಷಾ ಅಭಿವೃದ್ಧಿಗೆ ಬಸವಣ್ಣನವರ ಕೊಡುಗೆ ಅಪಾರ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ `ಮುಖ್ಯಮಂತ್ರಿ~ ಚಂದ್ರು ಹೇಳಿದರು.

ವಿಶ್ವಕಲ್ಯಾಣ ಮಿಷನ್ ಟ್ರಸ್ಟ್ ಸೋಮವಾರ ಪುರಭವನದಲ್ಲಿ ಏರ್ಪಡಿಸಿದ್ದ ವಿಶ್ವಗುರು ಬಸವಣ್ಣನವರ 871ನೇಯ ಲಿಂಗಕ್ಯ ಸಂಸ್ಮರಣೆ ಸಮಾರಂಭದಲ್ಲಿ ಬಸವ ವಚನಾಮೃತ ಭಾಗ -8 ಪುಸ್ತಕವನ್ನು ಬಿಡುಗಡೆ ಮಾಡಿ ಮಾತನಾಡಿದರು.

`ಪ್ರಸ್ತುತ ದಿನಗಳ ರಾಜಕೀಯ ಸ್ಥಿತಿಯನ್ನು ನೋಡಿದ್ದರೆ ಬಸವಣ್ಣನವರು ಬೇಸರ ವ್ಯಕ್ತಪಡಿಸುತ್ತಿದ್ದರು. ಇಂದು ಬಸವಣ್ಣನವರ ಸಿದ್ದಾಂತಗಳಿಗೆ ಬೆಲೆ ಕೊಟ್ಟು ನಡೆಯುವರ ಸಂಖ್ಯೆ ಕಡಿಮೆಯಾಗಿದೆ~ ಎಂದು ವಿಷಾದಿಸಿದರು.

ವಿಧಾನ ಪರಿಷತ್ ಸಭಾಪತಿ ಡಿ.ಎಚ್. ಶಂಕರ್ ಮೂರ್ತಿ ಮಾತನಾಡಿ, `ಬಸವಣ್ಣನವರು ತತ್ವಗಳು ಪ್ರಸ್ತುತವಾಗಿದ್ದು, ಅಂದಿನ ದಿನಗಳಲ್ಲಿ ಅಂತರ್ಜಾತಿ ವಿವಾಹಕ್ಕೆ ಹೆಚ್ಚು ಒತ್ತನ್ನು ನೀಡಿ, ಸಮಾನತೆಯ ತತ್ವಗಳನ್ನು ಜನರಿಗೆ ಸಾರಿದರು. ಆದರೇ ಇಂದಿನ ರಾಜಕಾರಣಿಗಳಲ್ಲಿ ಬಸವ ತತ್ವವನ್ನು ಕಾಣುವುದೇ ಅಪರೂಪವಾಗಿದೆ~ ಎಂದು ನುಡಿದರು.

ಬಸವ ಕಲ್ಯಾಣದ ಬಸವ ಧರ್ಮ ಪೀಠದ ಪೀಠಾಧ್ಯಕ್ಷರಾದ ಮಾತೆ ಮಹಾದೇವಿ ಮಾತನಾಡಿ, `ಬಸವಣ್ಣನವರ ಸಾವಿನ ಬಗ್ಗೆ ಬುದ್ದಿ ಜೀವಿಗಳು ತಪ್ಪು ಮಾಹಿತಿಯನ್ನು ನೀಡಿದ್ದಾರೆ. ಬಸವಣ್ಣ ಆತ್ಮಹತ್ಯೆ ಮಾಡಿಕೊಂಡಿಲ್ಲ, ಬದಲು ಇಚ್ಛಾಮರಣ ಹೊಂದಿದ್ದು, ಇದರ ಬಗ್ಗೆ ಅವರ ವಚನಗಳಲ್ಲಿ ಸರಿಯಾದ ಮಾಹಿತಿಯನ್ನು ಕಾಣಬಹುದಾಗಿದೆ~ ಎಂದರು.

ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಎ.ಎಸ್.ಸದಾಶಿವಯ್ಯ, ಹೃದಯ ತಜ್ಞೆ ಡಾ.ವಿಜಯಲಕ್ಷ್ಮಿ ಬಾಳೇಕುಂದ್ರಿ ಮತ್ತಿತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.