ಬಸ್ ಡಿಕ್ಕಿ: 31 ಜನರಿಗೆ ಗಾಯ
ಮಲೇಬೆನ್ನೂರು: ಗ್ರಾಮದ ಹೊರವಲಯದಲ್ಲಿನ ರಾಜ್ಯ ಹೆದ್ದಾರಿ-25ರಲ್ಲಿ ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆಗೆ ಸೇರಿದ ಎರಡು ಬಸ್ಗಳು ಗುರುವಾರ ಪರಸ್ಪರ ಡಿಕ್ಕಿ ಹೊಡೆದ ಕಾರಣ 31 ಪ್ರಯಾಣಿಕರು ಗಾಯಗೊಂಡ ಘಟನೆ ಸಂಭವಿಸಿದೆ.
ಹರಿಹರದ ಕಡೆ ಪ್ರಯಾಣಿಕರನ್ನು ಸಾಗಿಸುತ್ತಿದ್ದ ಆಟೋ ವೇಗವಾಗಿ ಬಸ್ಸನ್ನು ಹಿಂದಕ್ಕೆ ಹಾಕಿ ಮುಂದೆ ಹೋಗಿದೆ. ಅಪಘಾತ ತಪ್ಪಿಸುವ ವೇಳೆ ಎದುರುಗಡೆಯಿಂದ ಬಂದ ಬಸ್ಗೆ ಡಿಕ್ಕಿ ಹೊಡೆದಿದೆ.
ಬ್ರೇಕ್ ಹಾಕಿದ ರಭಸಕ್ಕೆ ಎರಡೂ ಬಸ್ನಲ್ಲಿದ್ದ ಒಟ್ಟು 31 ಜನರಿಗೆ ತೀವ್ರವಾಗಿ ಪೆಟ್ಟುಬಿದ್ದಿದೆ. ಬಹುತೇಕರಿಗೆ ಹಲ್ಲು ಮುರಿದಿವೆ, ಮೂಗಿಗೆ ಪೆಟ್ಟು ಬ್ದ್ದಿದಿದೆ.
ತುರ್ತು ಚಿಕಿತ್ಸಾ ವಾಹನ ಆಗಮಿಸಿ ಗಾಯಗೊಂಡವರನ್ನು ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆತಂದಿತು. 3 ಪ್ರಯಾಣಿಕರಿಗೆ ಕೈ ಕಾಲು ಮೂಳೆ ಮುರಿದಿದ್ದು ದಾವಣಗೆರೆಗೆ ಕಳುಹಿಸಲಾಯ್ತು.
ಬಸ್ಗಳು ಹೊಸಪೇಟೆಯಿಂದ ಧರ್ಮಸ್ಥಳಕ್ಕೆ ಹಾಗೂ ಸಕಲೇಶಪುರದಿಂದ ಹುಬ್ಬಳ್ಳಿ ಕಡೆಗೆ ಹೊರಟಿದ್ದ ಬಸ್ ಪ್ರಯಾಣಿಕರಿಂದ ತುಂಬಿದ್ದವು.
ಗಾಯಗೊಂಡವರನ್ನು ಹಾಗೂ ಉಳಿದ ಪ್ರಯಾಣಿಕರನ್ನು ಬೇರೆ ಬಸ್ಗಳಲ್ಲಿ ಕಳುಹಿಸಿಕೊಟ್ಟರು. ಜಿ.ಪಂ. ಸದಸ್ಯ ಬೆಣ್ಣೆಹಳ್ಳಿ ಹಾಲೇಶಪ್ಪ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದರು. ಸಮುದಾಯ ಆರೋಗ್ಯ ಕೇಂದ್ರದಲ್ಲಿ ಗಾಯಗೊಂಡವರಿಗೆ ಸಾಂತ್ವನ ಹೇಳಿದರು.
ಸುಮಾರು ಒಂದು ಗಂಟೆಕಾಲ ಸಂಚಾರ ಅಸ್ತವ್ಯಸ್ತವಾಗಿತ್ತು. ಪರ್ಯಾಯ ಮಾರ್ಗದಲ್ಲಿ ವಾಹನ ಸಂಚರಿಸಿದವು. ಘಟನಾ ಸ್ಥಳಕ್ಕೆ ಪೊಲೀಸರು ಹಾಗೂ ರಾಜ್ಯ ಸಾರಿಗೆ ಸಂಸ್ಥೆ ಅಧಿಕಾರಿಗಳು ಭೇಟಿ ನೀಡಿದ್ದರು. ತನಿಖೆ ಮುಂದುವರಿದಿದೆ.
ಆಟೋ ನಿಷೇಧಕ್ಕೆ ಆಗ್ರಹ: ಪ್ರತಿನಿತ್ಯ ಹರಿಹರಕ್ಕೆ ತ್ರಿಚಕ್ರ ವಾಹನ ಗಳಲ್ಲಿ ಹೆಚ್ಚಿನ ಪ್ರಯಾಣಿಕರನ್ನು ತುಂಬಿಕೊಂಡು ಹೋಗುತ್ತಿವೆ. ಸಾರಿಗೆ ಇಲಾಖೆ ನಿರ್ಲಕ್ಷದಿಂದ ಅಪಘಾತ ಸಂಭವಿಸುತ್ತಿದೆ ಎಂದು ಬಸ್ ಚಾಲಕರು ಆಟೋ ನಿಷೇಧ ಮಾಡಲು ಆಗ್ರಹಿಸಿದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.