ಭಾನುವಾರ, ಮೇ 22, 2022
26 °C

ಬಸ್ ಮರಕ್ಕೆ ಡಿಕ್ಕಿ: ಐದು ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೀರೂರು: ಬೆಂಗಳೂರಿನಿಂದ ಶಿವಮೊಗ್ಗಕ್ಕೆ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ಶಿವಪುರ ಗೇಟ್ ಬಳಿ ಅಪಘಾತಕ್ಕೀಡಾಗಿ ಐವರು ಪ್ರಯಾಣಿಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.ಬೀರೂರು ಹೊರವಲಯದ ಶಿವಪುರ ಗೇಟ್‌ನ ಸಿದ್ದರಾಮೇಶ್ವರ ದೇವಾಲಯದ ಬಳಿ ಮಂಗಳವಾರ ಬೆಳಗ್ಗಿನ ಜಾವ 2.45ರ ಸುಮಾರಿಗೆ ಅಪಘಾತ ಸಂಭವಿಸಿದೆ. ರಾಷ್ಟ್ರೀಯ ಹೆದ್ದಾರಿ 206ರ ಸಮೀಪದ ಆಲದ ಮರಕ್ಕೆ ಬಸ್ ಡಿಕ್ಕಿಯಾಗಿ ಮಹಿಳೆಯೊಬ್ಬಳು ಸೇರಿದಂತೆ ಬಸ್‌ನಲ್ಲಿದ್ದ ಐವರು ಸ್ಥಳದಲ್ಲೇ ಮೃತಪಟ್ಟರು. 28ಕ್ಕೂ ಅಧಿಕ ಪ್ರಯಾಣಿಕರು ಗಾಯಗೊಂಡಿದ್ದಾರೆ.ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ಮೈಸೂರಿಗೆ ತೆರಳುತ್ತಿದ್ದ ಅರಸೀಕೆರೆ ಡಿಪೊದ ವಿಶೇಷ ಬಸ್‌ನಲ್ಲಿದ್ದ ಶಿಕಾರಿಪುರದ ಸುಧೀರ್‌ಕುಮಾರ್ ಕೆ.ಎಸ್. (28), ಬ್ರಹ್ಮಾವರ ಸಮೀಪ ಬೆಣ್ಣಾರಿನ ಮಂಜುನಾಥ ನಾಯ್ಕ (45), ತಮಿಳುನಾಡು ಕೃಷ್ಣಗಿರಿ ಜಿಲ್ಲೆ ಬನ್ನೆರಿಪುದುರಿನ ಕುಬೇಂದ್ರ (28), ಭದ್ರಾವತಿ ಸಮೀಪ ಸಿದ್ದಾಪುರದ ಸಂಗೀತಾ (22) ಮತ್ತು ಕಾರವಾರ ಜಿಲ್ಲೆ ಸಿದ್ದಾಪುರದ ನಾಗೇಂದ್ರ (24) ಮೃತಪಟ್ಟವರು. ಬೀರೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.