ಢಾಕಾ (ಬಾಂಗ್ಲಾದೇಶ), (ಐಎಎನ್ಎಸ್): ಇಲ್ಲಿನ ಮೇಘನಾ ನದಿಯಲ್ಲಿ 200 ಪ್ರಯಾಣಿಕರನ್ನು ಸಾಗಿಸುತ್ತಿದ್ದ ಚಿಕ್ಕ ನೌಕೆಯೊಂದು ಮಂಗಳವಾರ ನಸುಕಿನ 2.30ರ ಸುಮಾರು ಸರಕು ಸಾಗಾಣಿಕೆಯ ನೌಕೆಗೆ ಡಿಕ್ಕಿ ಹೊಡೆದು ಮಗುಚಿ ಮುಳುಗಿದ ದಾರುಣ ಘಟನೆ ಮುನ್ಷಿಗಂಜ್ ಜಿಲ್ಲೆಯ ಗಜಾರಿಯಾ ಉಪಜಿಲಾದ ಚಾರ ಕಿಶೋರಿ ಎಂಬಲ್ಲಿ ನಡೆದಿದೆ.

ಈ ದುರ್ಘಟನೆಯಲ್ಲಿ ನೀರುಪಾಲಾದವರ ಪೈಕಿ ಮೂವತ್ತು ಪ್ರಯಾಣಿಕರು ಈಜಿ ದಡ ಸೇರಿದ್ದರೆ, ಉಳಿದವರು ನಾಪತ್ತೆಯಾಗಿದ್ದಾರೆ. ಮಧ್ಯಾಹ್ನದವರೆಗೆ 26 ಪ್ರಯಾಣಿಕರ ಶವ ಪತ್ತೆಯಾಗಿವೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಎರಡಂತಿಸ್ತಿನ ಪ್ರಯಾಣಿಕರ ಈ ಚಿಕ್ಕ ನೌಕೆಯು ಪ್ರಯಾಣಿಕರನ್ನು ಷರಷ್ಟಿಪುರದಿಂದ ಡಾಕಾಗೆ ಸಾಗಿಸುತ್ತಿತ್ತು . ಘಟನೆಯ ಕುರಿತು ತನಿಖೆ ನಡೆಸಲು ಸರ್ಕಾರ ಐವರು ಸದಸ್ಯರ ಸಮಿತಿಯೊಂದನ್ನು ರಚಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.