ಮಂಗಳವಾರ, ಜನವರಿ 28, 2020
29 °C

ಬಾಂಗ್ಲಾ: ಬಲಿಯಾದವರ ಸಂಖ್ಯೆ 25 ಕ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಢಾಕಾ (ಪಿಟಿಐ): ಜಮಾತೆ ಇಸ್ಲಾಮಿ ಮುಖಂಡ ಅಬ್ದುಲ್‌ ಖಾದರ್‌ ಮುಲ್ಲಾ­ನನ್ನು ಗಲ್ಲಿಗೇರಿಸಿದ್ದನ್ನು ವಿರೋಧಿಸಿ ಬಾಂಗ್ಲಾದಲ್ಲಿ ಭುಗಿಲೆದ್ದ ಹಿಂಸಾಚಾರಕ್ಕೆ ಈವರೆಗೂ 25 ಜನರು ಸಾವನ್ನಪ್ಪಿದ್ದಾರೆ.

ಭಾನುವಾರ ನಡೆದ ದಂಗೆಯಲ್ಲಿ ನಾಲ್ವರು ಸಾವನ್ನಪ್ಪಿದ್ದು, ದಂಗೆ ಎಬ್ಬಿಸುತ್ತಿ­ರುವವರ ಮೇಲೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಪ್ರಧಾನಿ ಶೇಕ್‌ ಹಸೀನಾ ಹೇಳಿ­ದ್ದಾರೆ.

ಅವಾಮಿ ಲೀಗ್‌ ಪಕ್ಷದ ಬೆಂಬಲಿಗನೊಬ್ಬನನ್ನು ಜಮಾತೆ ಪಕ್ಷದ ಕಾರ್ಯ­ಕರ್ತರು ಇರಿದು ಕೊಂದಿದ್ದಾರೆ. ಈ ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಲಲ್‌­ಮೋನಿ­ರ್‌ಹಟ್‌ ಜಿಲ್ಲೆಯಲ್ಲಿ  ಪೊಲೀಸರ ಜತೆ ನಡೆದ ಸಂಘರ್ಷದಲ್ಲಿ ಮೂವರು ಜಮಾತೆ ಪಕ್ಷದ ಕಾರ್ಯಕರ್ತರು ಮೃತಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇದೇ ಜಿಲ್ಲೆಯ ಕಾಫಿರ್‌ ಬಜಾರ್‌ನಲ್ಲಿರುವ ಅಲ್ಪ ಸಂಖ್ಯಾತ ಹಿಂದೂ ಸಮು­ದಾಯದವರ ಮನೆಗಳಿಗೆ ಕಾರ್ಯಕರ್ತರು ಬೆಂಕಿ ಹಚ್ಚಿದ ಪರಿಣಾಮ 10 ಜನರು ಗಾಯಗೊಂಡಿದ್ದಾರೆ.

ಪ್ರತಿಕ್ರಿಯಿಸಿ (+)