ಭಾನುವಾರ, ಏಪ್ರಿಲ್ 11, 2021
26 °C

ಬಾಂದಾರ, ಸೇತುವೆ ನಿರ್ಮಾಣಕ್ಕೆ ಚಾಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಯಬಾಗ: `ತಾಲ್ಲೂಕಿನಲ್ಲಿನ ಎಲ್ಲ ರಸ್ತೆಗಳನ್ನು ಸಂಪೂರ್ಣವಾಗಿ ನವೀಕರಿಸ ಲಾಗುವುದು. ಈ ನಿಟ್ಟಿನಲ್ಲಿ ರೂ. 50 ಲಕ್ಷ ವೆಚ್ಚದಲ್ಲಿ ರಾಯಬಾಗ -ಬೆಕ್ಕೇರಿ ರಸ್ತೆ  ಸುಧಾರಣೆ ಕಾಮಗಾರಿ ಪ್ರಾರಂಭ ವಾಗಿದೆ. ತೋಟದ ರಸ್ತೆಗಳಿಗೂ ಸಹ ಆದ್ಯತೆ ನೀಡಲಾಗುವುದು. ಈ ರಸ್ತೆಯ ಹಳ್ಳಕ್ಕೆ ಸಂತುಬಾಯಿ ದೇವಸ್ಥಾನದ ಬಳಿ ಬಾಂದಾರ ಹಾಗೂ  ಸೇತುವೆ ನಿರ್ಮಿಸಲಾಗುವುದು ಎಂದು ಶಾಸಕ ದುರ್ಯೋಧನ ಐಹೊಳೆ ಹೇಳಿದರು.ಚಿಕ್ಕ ನೀರಾವರಿ ಇಲಾಖೆಯಿಂದ ನಬಾರ್ಡ ಯೋಜನೆಯಡಿ 40 ಲಕ್ಷ ವೆಚ್ಚದಲ್ಲಿ ಸಂತುಬಾಯಿ ದೇವಸ್ಥಾನದ ಬಳಿ ರಾಯಬಾಗ- ಬೆಕ್ಕೇರಿ ರಸ್ತೆಗೆ ಭಾನುವಾರ ಬಾಂದಾರ ಮತ್ತು ರಸ್ತೆ ಸೇತುವೆ ಕಾಮಗಾರಿಗೆ ಶಾಸಕ ದುರ್ಯೋಧನ ಐಹೊಳೆ ಭೂಮಿ ಪೂಜೆ ನೆರವೇರಿಸಿ  ಮಾತನಾಡಿದರು.ಚಿಕ್ಕ ನೀರಾವರಿ ಎಂಜಿನಿಯರ ಐ.ಎಸ್. ಹತ್ತಿ, ಈ ಬಾಂದಾರದಿಂದ ಸುತ್ತಮುತ್ತಲಿನ ರೈತರ 100 ಎಕರೆ ಜಮೀನಿಗೆ ನೀರಾವರಿ ಸೌಲಭ್ಯ ದೊರೆಯಲಿದೆ ಎಂದರು.ರಾಯಬಾಗ-ಹಾರೂಗೇರಿಯ ಮುಖ್ಯ ರಸ್ತೆ ಸುಧಾರಣೆ ಹಾಗೂ ಡಾಂಬರೀಕರಣಕ್ಕಾಗಿ ಒಂದು ಕೋಟಿ ಮಂಜೂರಾಗಿದ್ದು ಕಾಮಗಾರಿ ಶೀಘ್ರ ಪ್ರಾರಂಭವಾಗಲಿದೆ ಎಂದು ತಿಳಿಸಿದರು.ಜನರಿಗೆ ಕುಡಿಯುವ ನೀರಿಗೆ ತೊಂದರೆಯಾಗದಂತೆ ಕೊಳವೆ ಬಾವಿ ಗಳ ಆಳ ಮಾಡಲು ಮತ್ತು ಮೋಟರ್‌ಗಳನ್ನು ಅಳವಡಿಸಲು ಮತ್ತೆ ರೂ. 25ಲಕ್ಷ ಬಿಡುಗಡೆಯಾಗಿವೆ ಎಂದರು.ತಾ.ಪಂ. ಅಧ್ಯಕ್ಷ ಲಕ್ಷ್ಮಣ ಗವಾನಿ, ಸದಾಶಿವ ಘೋರ್ಪಡೆ, ಅಣ್ಣಾಸಾಬ ಖೇಮಲಾಪುರೆ, ಸುರೇಶ ಮಾಳಿ, ಸದಾ ಹಳಿಂಗಳಿ, ಶಿವಲಿಂಗ ಕುಲಗೋಡ, ಮಾರುತಿ ಕುಲಗೋಡ, ಶಂಕರ ಗೋಕಾಕ, ದುಂಡಪ್ಪ ಮೇತ್ರಿ, ಅಜ್ಜಪ್ಪ ಕುಲಗೋಡ, ಬಾಬು ಮೇತ್ರಿ ಮತ್ತಿತರರು ಉಪಸ್ಥಿತರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.