ಬಾದಾಮಿ ತಿನಿಸು ಮಾರುಕಟ್ಟೆಗೆ

7

ಬಾದಾಮಿ ತಿನಿಸು ಮಾರುಕಟ್ಟೆಗೆ

Published:
Updated:
ಬಾದಾಮಿ ತಿನಿಸು ಮಾರುಕಟ್ಟೆಗೆ

ವಂಡರ್‌ಫುಲ್ ಪಿಸ್ತಾಶಿಯೊಸ್ ಉತ್ಪಾದಕ ಸಂಸ್ಥೆ ಎರಡು ಸ್ವಾದಭರಿತ ಬಾದಾಮಿ ತಿನಿಸುಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಉಪ್ಪು ಮತ್ತು ಮೆಣಸು ಮಿಶ್ರಿತ ಬಾದಾಮಿ ತಿನಿಸು ಹಾಗೂ ವಂಡರ್‌ಫುಲ್ ಬಾದಾಮಿ ನ್ಯಾಚುರಲ್ ರಾ ಎಂಬ ಹೆಸರಿನಲ್ಲಿ ಹೊರತಂದಿದೆ.ಸದಾ ಹೊಸ ಸ್ವಾದ ಮತ್ತು ಆರೋಗ್ಯಯುತ ತಿನಿಸುಗಳನ್ನು  ಪರಿಚಯಿಸುತ್ತಾ ಬಂದಿದ್ದೇವೆ. ನಮ್ಮ ಈ ಹೊಸ ತಿನಿಸು ನಿಮ್ಮ ರುಚಿಯ ನಿರೀಕ್ಷೆಯನ್ನು ತಣಿಸುತ್ತದೆ ಎಂದರು ಪ್ಯಾರಾಮೌಂಟ್ ಫಾರ್ಮ್‌ನ ಮಾರುಕಟ್ಟೆ ವ್ಯವಸ್ಥಾಪಕ ಮಿಲಿನ್ ಚಟರ್ಜಿ.ವಂಡರ್‌ಫುಲ್ ಬಾದಾಮಿ 23 ಬೀಜಗಳನ್ನು ಹೊಂದಿದ್ದು, 160 ಕ್ಯಾಲೊರಿ ಇದರಲ್ಲಿದೆ. 6ಗ್ರಾಂ ಪ್ರೊಟೀನ್ ಮತ್ತು 3 ಗ್ರಾಂ ಫೈಬರ್ ಹೊಂದಿದ್ದು, ಆರೋಗ್ಯಯುತ ತಿನಿಸಾಗಿದೆ. ವಂಡರ್‌ಫುಲ್ ಬಾದಾಮಿ ನ್ಯಾಚುರಲ್ ರಾ 200 ಗ್ರಾಂ ಪ್ಯಾಕ್‌ಗೆ 170ರೂ. ಎಲ್ಲಾ ಪ್ರಮುಖ ಮಳಿಗೆಗಳಲ್ಲೂ ಇದು ಲಭ್ಯ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry