ರಟ್ಟೀಹಳ್ಳಿ : ಸಮೀಪದ ಕಡೂರ ಗ್ರಾಮದ ಹೊರವಲಯದ ಪೈಪ್ ಒಂದರ ಒಳಗೆ ಸೇರಿಕೊಂಡಿರುವ ಮೂರು ಚಿರತೆ ಮರಿಗಳು ಸೋಮವಾರವೂ ಹೊರ ಬಾರದ ಕಾರಣ ಅರಣ್ಯ ಇಲಾಖೆ ಸಿಬ್ಬಂದಿ ಕಾಯುವ ಕೆಲಸವನ್ನು ಇನ್ನೂ ಮುಂದುವರೆಸಿದ್ದಾರೆ.

ಭಾನುವಾರ ರಾತ್ರಿ ಇಲಾಖೆಯ ಸಿಬ್ಬಂದಿ ಸ್ಥಳದಲ್ಲಿಯೇ ಬೀಡು ಬಿಟ್ಟಿದ್ದರೂ ತಾಯಿ ಚಿರತೆ ಗೋಚರಿಸಿಲ್ಲ. ಸೋಮವಾರ ಬೆಳಗಿನಿಂದ ಚಿರತೆ ಮರಿಗಳನ್ನು ನೋಡಲು ಜನರು ತಂಡೋಪ ತಂಡವಾಗಿ ಆಗಮಿಸುತ್ತಿದ್ದು ಸಿಬ್ಬಂದಿಗೆ ತಲೆ ನೋವಾಗಿ ಪರಿಣಮಿಸಿದೆ.

ಮರಿಗಳು ಸಿಲುಕಿರುವ ಪೈಪ್ ರಸ್ತೆ ಮಧ್ಯೆ ಇರುವುದರಿಂದ ವಾಹನಗಳ ಭರಾಟೆಯ ಸದ್ದಿನಿಂದ ಹೆದರಿ ಮರಿಗಳು ಹೊರಗಡೆ ಬಂದಿಲ್ಲ. ಸೋಮವಾರ ಸಂಜೆಯಾದರೂ ಆಹಾರಕ್ಕಾಗಿ ಹೊರ ಬಂದಿಲ್ಲ. ಹೀಗಾಗಿ ಇಲಾಖೆಯ ಸಿಬ್ಬಂದಿ ಸೋಮವಾರ ರಾತ್ರಿ ಕೂಡ ಸ್ಥಳದಲ್ಲಿಯೇ ಮತ್ತೆ ಬೀಡು ಬಿಡುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.