ಭಾನುವಾರ, ಜೂನ್ 20, 2021
25 °C

ಬಾಲಕಿ ಮೇಲೆ ಕಾನ್‌ಸ್ಟೆಬಲ್‌ ಅತ್ಯಾಚಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಇಟಾವಾ/ಉತ್ತರಪ್ರದೇಶ(ಪಿಟಿಐ): ಪೊಲೀಸ್‌ ವಶದಲ್ಲಿದ್ದ ಬಾಲಕಿ ಮೇಲೆ ಕಾನ್‌ಸ್ಟೆಬಲ್‌ ಅತ್ಯಾಚಾರ ಎಸಗಿ­ರುವ ಅಮಾನವೀಯ ಘಟನೆ ಇಲ್ಲಿನ ಸೊರೊನ್‌ ಪ್ರದೇಶದಲ್ಲಿ ಮಂಗಳವಾರ ನಡೆದಿದೆ.ಸಂತ್ರಸ್ತೆ ಫೆ.27ರಂದು ತನ್ನ ಗೆಳೆಯನೊಂದಿಗೆ ಮನೆ­ಯಿಂದ ಓಡಿ­ಹೋಗಿ­ದ್ದಳು. ಮಾ.4ಕ್ಕೆ ಅವರಿ­ಬ್ಬರು ಮದುವೆ­ಯಾ­ಗಲು  ಬಯಸಿ ಕೋರ್ಟ್‌ಗೆ ಶರಣಾಗಿದ್ದರು.ವಯಸ್ಸಿನ ದೃಢೀಕರಣಕ್ಕಾಗಿ ಕೋರ್ಟ್‌ ಹುಡುಗಿ­ಯನ್ನು ಮಹಿಳಾ ಪೊಲೀಸ್‌ ಠಾಣೆಯಲ್ಲಿ ಇರಿಸಲು ಕೃಷ್ಣಾ ಎಂಬ ಮಹಿಳಾ ಪೊಲೀಸ್‌ ಕಾನ್‌ಸ್ಟೇಬಲ್‌ ಅವರಿಗೆ ಒಪ್ಪಿಸಿತ್ತು. ಆದರೆ ಕೃಷ್ಣಾ ಹುಡು­ಗಿಯನ್ನು ತನ್ನ ಮನೆಗೆ ಕರೆದೊ­ಯ್ದಿ­ದ್ದಳು. ಅಲ್ಲಿ ಪೊಲೀಸ್‌ ಕಾನ್‌­ಸ್ಟೆಬಲ್‌ ಕೂಡ ಆಗಿರುವ ಅವಳ ಪತಿ ಸತ್ಯ­ಪ್ರಕಾಶ್‌ ಹುಡುಗಿಯ ಮೇಲೆ ಅತ್ಯಾ­ಚಾರ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.‘ಹುಡುಗಿಯನ್ನು ಕೋರ್ಟ್‌ಗೆ ಸೋಮ­ವಾರ ಕೋರ್ಟ್‌ಗೆ ಹಾಜರು­ಪಡಿಸಿ­ದಾಗ ಅವಳು ಈ ಸಂಗತಿಯನ್ನು ತನ್ನ ತಾಯಿಯ ಮುಂದೆ ಹೇಳಿಕೊಂಡಿ­ದ್ದಾಳೆ. ಈ ಕುರಿತು ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಅವರು ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.