ಶನಿವಾರ, ಮೇ 15, 2021
29 °C

ಬಿಇಎಂಎಲ್ ವಿರುದ್ಧ ಎಫ್‌ಐಆರ್ ದಾಖಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಸರ್ಕಾರಿ ಒಡೆತನದ ಬಿಇಎಂಎಲ್ ಕಂಪೆನಿಯು ತಾನು ಜೆಕ್ ಕಂಪೆನಿಯ ಅಂಗ ಸಂಸ್ಥೆ ಎಂದು ಸುಳ್ಳು ಹೇಳಿಕೊಂಡು ಬ್ರಿಟನ್‌ನ ಟಟ್ರಾ ಟ್ರಕ್‌ಗಳನ್ನು ಸೇನೆಗೆ ಸರಬರಾಜು ಮಾಡಿದೆ ಎಂದು ಸಿಬಿಐ ಸಲ್ಲಿಸಿರುವ ಪ್ರಥಮ ಮಾಹಿತಿ ವರದಿಯಲ್ಲಿ (ಎಫ್‌ಐಆರ್) ತಿಳಿಸಲಾಗಿದೆ.

ಸೇನೆಗೆ ಟ್ರಕ್ ಮತ್ತು ಬಿಡಿಭಾಗಗಳನ್ನು ಸರಬರಾಜು ಮಾಡಲು 1997ರಲ್ಲಿ ಬಿಇಎಂಎಲ್ ಟಟ್ರಾ ಕಂಪೆನಿಯ ಜತೆ 10 ವರ್ಷಗಳ ಒಪ್ಪಂದ ಮಾಡಿಕೊಂಡು, ಒಪ್ಪಂದದ ಅವಧಿ ಇನ್ನು ನಾಲ್ಕು ವರ್ಷಗಳು ಬಾಕಿ ಇರುವಾಗಲೇ ನವೀಕರಿಸಿಕೊಂಡು  ವ್ಯವಹಾರದ ವ್ಯಾಪ್ತಿಯನ್ನು ಹಿಗ್ಗಿಸಿಕೊಂಡಿದೆ.

ಸೇನೆಯ ಖರೀದಿ ನಿಯಮದ ಪ್ರಕಾರ ಯಾವುದೇ ವಸ್ತುಗಳನ್ನು ಸರಬರಾಜು ಮಾಡುವಾಗ ಮಧ್ಯವರ್ತಿಗಳು ಇರಬಾರದು. ನೇರವಾಗಿ ಉತ್ಪಾದಿಸುವ ಕಂಪೆನಿಯೇ ಸೇನೆಗೆ ವಸ್ತುಗಳನ್ನು ಸರಬರಾಜು ಮಾಡಬೇಕು. ಆದರೆ ಇಲ್ಲಿ ಬಿಇಎಂಎಲ್ ತಾನು ಜೆಕ್ ಕಂಪೆನಿಯ ಅಂಗಸಂಸ್ಥೆ ಎಂದು ಸುಳ್ಳು ಹೇಳಿಕೊಂಡು ಟ್ರಕ್‌ಗಳನ್ನು ಸರಬರಾಜು ಮಾಡಿದೆ.ಎಂದು ಎಫ್‌ಐಆರ್‌ನಲ್ಲಿ ವಿವರಿಸಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.