ಗುರುವಾರ , ಜನವರಿ 23, 2020
29 °C

`ಬಿಎಂಟಿಸಿ ದರ ಏರಿಕೆ ಅವೈಜ್ಞಾನಿಕ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೃಷ್ಣರಾಜಪುರ: `ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಹಿರಿಯ ಪ್ರಯಾಣಿಕರ ಬಸ್‌ಪಾಸಿನ ದರ ಏರಿಸುವ ಮೂಲಕ ಕೆಳ-ಮಧ್ಯಮ ಹಾಗೂ ಹಿರಿಯ ನಾಗರಿಕರ ಮೇಲೆ ಗದಾಪ್ರಹಾರ ಎಸಗಿದೆ. ದರ ಏರಿಕೆಯನ್ನು ಸರ್ಕಾರ ಪುನರ್ ಪರಿಶೀಲಿಸಬೇಕು' ಎಂದು ಹಿರಿಯ ನಾಗರಿಕರ ಸಂಘಟನೆ ಒತ್ತಾಯಿಸಿದೆ.`ಮಾಸಿಕ ದರವನ್ನು ಒಂದು ನೂರು ರೂಪಾಯಿಗೆ, ಹಿರಿಯರ ಪಾಸಿನ ದರವನ್ನು 90 ರೂಪಾಯಿಗೆ ಏರಿಸಲಾಗಿದೆ. ದಿನದ ಪಾಸುಗಳ ದರದಲ್ಲೂ ಗಣನೀಯ ಏರಿಕೆಯಾಗಿದೆ' ಎಂದು ಸಂಘಟನಾ ಕಾರ್ಯದರ್ಶಿ ಸೋಮಶೇಖರ್ ದೂರಿದರು.`ಹೊಸ ಬಸ್‌ಗಳನ್ನು ಗುತ್ತಿಗೆ ಆಧಾರದಲ್ಲಿ ಖಾಸಗಿಯವರಿಗೆ ವಹಿಸಲಾಗಿದೆ. ಸಮರ್ಪಕ ಆಸನ ವ್ಯವಸ್ಥೆ ಇಲ್ಲದ, ಬಾಗಿಲು ಸರಿಯಿರದ, ಬಣ್ಣ ಬಳಿದ ಹಳೆಯ ಬಸ್‌ಗಳನ್ನು ಹೊರವಲಯಕ್ಕೆ ಓಡಿಸುತ್ತಿದ್ದಾರೆ. ವ್ಯವಸ್ಥೆಯನ್ನು ಸರಿಪಡಿಸುವ ಬದಲು ಪ್ರಯಾಣಿಕರ ಮೇಲೆ ಹೊರೆ ಹಸ್ತಾಂತರಿಸಲಾಗುತ್ತಿದೆ' ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರತಿಕ್ರಿಯಿಸಿ (+)