ಬಿಎಂಟಿಸಿ ಮೆಟ್ರೊ ಫೀಡರ್ ಸೇವೆ
ಬೆಂಗಳೂರು: ಗುರುವಾರದಿಂದ ಎಂ.ಜಿ.ರಸ್ತೆ ಹಾಗೂ ಬೈಯಪ್ಪನ ಹಳ್ಳಿ ನಡುವೆ ಮೊದಲ ಹಂತದ ಮೆಟ್ರೊ ರೈಲು ಸಂಚಾರ ಕಾರ್ಯರಂಭ ಮಾಡಲಿರುವ ಹಿನ್ನೆಲೆಯಲ್ಲಿ ಬಿಎಂಟಿಸಿ ಅಂದು ಮಧ್ಯಾಹ್ನ ದಿಂದಲೇ ಮೆಟ್ರೊ ಫೀಡರ್ ಸೇವೆಗಳನ್ನು ಒದಗಿಸಲು ನಿರ್ಧರಿಸಿದೆ.
ಎಂ.ಜಿ.ರಸ್ತೆ, ಟ್ರಿನಿಟಿ ವೃತ್ತ, ಹಲಸೂರು, ಇಂದಿರಾನಗರ, ಎಸ್. ವಿ.ರಸ್ತೆ ಮತ್ತು ಬೈಯಪ್ಪನಹಳ್ಳಿ ಮೆಟ್ರೊ ರೈಲು ನಿಲ್ದಾಣಗಳ ಸುತ್ತಲಿನ ಪ್ರದೇಶಗಳಿಂದ ರೈಲು ನಿಲ್ದಾಣಗಳಿಗೆ ನೇರ ಸಾರಿಗೆ ಸಂಪರ್ಕ ಕಲ್ಪಿಸಲಾಗುತ್ತಿದೆ. 6 ಮೆಟ್ರೊ ನಿಲ್ದಾಣಗಳಿಗೆ ಒಟ್ಟು 24 ಮೆಟ್ರೊ ಫೀಡರ್ ಮಾರ್ಗಗಳನ್ನು ಒದಗಿಸಲಿದೆ. ಪ್ರತಿ 10 ನಿಮಿಷಗಳ ಅಂತರದಲ್ಲಿ ವಾಹನಗಳು ಸಂಚರಿಸಲಿವೆ.
ಸಂಚಾರ ಪೊಲೀಸ್ ಅಧಿಕಾರಿಗಳು ಹಾಗೂ ಬಿಎಂಆರ್ಸಿಎಲ್ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ ಬಿಎಂಟಿಸಿ ಮಾರ್ಗ ಗಳನ್ನು ನಿಗದಿ ಪಡಿಸಿದೆ. ಎರಡು ಮೂರು ವಾರಗಳ ಬಳಿಕ ಸಾರ್ವ ಜನಿಕರಿಂದ ಮಾಹಿತಿ ಪಡೆದು ಸೇವೆ ಪರಿಷ್ಕರಿಸಲು ಚಿಂತಿಸಲಾಗಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.