ಗಂಗಾವತಿ: ಸ್ವಂತ ಉದ್ಯಮ, ವ್ಯವಹಾರಕ್ಕಾಗಿ ಬಡ ಕುಟುಂಬವನ್ನು ರಾತ್ರೋರಾತ್ರಿ ಬೀದಿಗೆ ತಳ್ಳಿ, ಅಧಿಕಾರ ದುರುಪಯೋಗ ಮಾಡಿಕೊಂಡ ಬಿ.ಎಸ್. ಯಡಿಯೂರಪ್ಪರ ಬಗ್ಗೆ ಇನ್ನೂ ಕನಿಕರವಿದೆಯೇ? ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ವೀರಶೈವ ಸಮುದಾಯವನ್ನು ಪ್ರಶ್ನಿಸಿದರು.

ನಗರದ ಸರ್ಕಾರಿ ಜ್ಯೂನಿಯರ್ ಕಾಲೇಜು ಮೈದಾನದಲ್ಲಿ ಭಾನುವಾರ ಆಯೋಜಿಸಿದ್ದ ಜೆಡಿಎಸ್ನ ಬೃಹತ್ ಸಮಾವೇಶದಲ್ಲಿ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಅವರನ್ನು ಪಕ್ಷಕ್ಕೆ ಅಧಿಕೃತವಾಗಿ ಸೇರಿಸಿಕೊಂಡ ಬಳಿಕ ಮಾತನಾಡಿದರು.

ಸಮಾನತೆ, ಸಹಬಾಳ್ವೆಯಂಥ, ಶರಣರ ತತ್ವಾಧಾರ ಮೇಲೆ ಬೆಳೆದು ಬಂದಿರುವ ವೀರಶೈವ ಸಮಾಜದಲ್ಲಿ ಆ ತತ್ವ, ಆದರ್ಶಕ್ಕೆ ತದ್ವಿರುದ್ಧದಂತಿರುವ ಯಡಿಯೂರಪ್ಪ ಅಮಾನವೀಯತೆ ಮೈಗೂಡಿಸಿಕೊಂಡಿದ್ದಾರೆ. ಮುಖ್ಯಮಂತ್ರಿಯಾದ ಬಳಿಕ ಶಿವಮೊಗ್ಗದಲ್ಲಿ ಸಾಕಷ್ಟು ಆಸ್ತಿ ಮಾಡುವ ಮೂಲಕ ಅಭಿವೃದ್ಧಿಯಾಗಿದ್ದಾರೆ. ರೂ, 300 ಕೋಟಿ ಮೊತ್ತದಲ್ಲಿ ಎಂಜಿನಿಯರಿಂಗ್ ಕಾಲೇಜು ಸ್ಥಾಪಿಸಿದ್ದಾರೆ. ಜನರನ್ನು ಹೆದರಿಸಿ ಬೆದರಿಸಿ ಜಮೀನು ಸ್ವಾಧೀನ ಪಡಿಸಿಕೊಂಡಿದ್ದಾರೆ.

ಇದ್ದೊಂದು ಮನೆ ನೀಡಲು ನಿರಾಕರಿಸಿದ ಬಡ ಕುಟುಂಬವನ್ನು ಬೆಳ್ಳಂಬೆಳಗ್ಗೆ ಅಧಿಕಾರ ದುರುಪಯೋಗ ಮಾಡಿಕೊಂಡು ಆ ಮನೆಯ ಯಜಮಾನ, ಹೆಣ್ಣು ಮಕ್ಕಳನ್ನು ಚಳಿಯಲ್ಲಿ ಬೀದಿ ಪಾಲು ಮಾಡಿ ಬುಲ್ಡೋಜರ್ ಸಹಾಯದಿಂದ ಮನೆ ನೆಲಸಮ ಮಾಡಿದ್ದಾರೆ ಎಂದರು.

ಅಧಿಕಾರ, ಸ್ವಾರ್ಥ, ಸ್ವಜನ ಪಕ್ಷಪಾತಿಯಂತಿರುವ ಹಾಗೂ ಅಮಾನವೀಯತೆಯೇ ಮೈತಳೆದಂತಿರುವ ಯಡಿಯೂರಪ್ಪ ಬಗ್ಗೆ ವಿಶಾಲ ಹೃದಯ ಹೊಂದಿರುವ ವೀರಶೈವ ಸಮಾಜ ಇನ್ನೂ ಯಾವ ಆಧಾರದಲ್ಲಿ ಕನಿಕರ ವ್ಯಕ್ತಪಡಿಸುತ್ತಿದೆ ಎಂದು ಎಚ್ಡಿಕೆ ಪ್ರಶ್ನಿಸಿದರು.

ಮಾಜಿ ಸಚಿವರಾದ ಬಸವರಾಜ ಹೊರಟ್ಟಿ, ಜಮೀರ ಅಹಮ್ಮದ್, ಬಂಡೆಪ್ಪ ಕಾಂಶಪೂರ, ಕೇಂದ್ರದ ಮಾಜಿ ಸಚಿವ ಬಸನಗೌಡ ಯತ್ನಾಳ, ಪ್ರಮುಖರಾದ, ಮಧು ಬಂಗಾರಪ್ಪ, ಮಂಜುನಾಥ ವಿಶ್ವಬ್ರಾಹ್ಮಣ, ಶರಣಪ್ಪ ಐವಡಿ, ಸುರೇಶ ಬಳಿಗೇರಮಠ ಮೊದಲಾದವರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.