ಬೆಂಗಳೂರು (ಪಿಟಿಐ): ತಮ್ಮ ವಿರುದ್ಧ ಲಂಚ ಪ್ರಕರೆಣ ದಾಖಲಿಸಲಾಗಿರುವ ತಮ್ಮ ಆಡಳಿತಾವಧಿಯ ಸಿವಿಲ್ ಗುತ್ತಿಗೆಗೆ ನೀಡಲಾಗಿದ್ದ ಮಂಜೂರಾತಿಯನ್ನು ಹಿಂದೆಯೇ ವಿಭಾಗೀಯ ಪೀಠವೊಂದು ಎತ್ತಿ ಹಿಡಿದಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಶುಕ್ರವಾರ ಹೈಕೋರ್ಟಿಗೆ ತಿಳಿಸಿದರು. ಇದರೊಂದಿಗೆ ಈ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ.

~ನ್ಯಾಯಬದ್ಧವಾಗಿಯೇ ಗುತ್ತಿಗೆ ನೀಡಲಾಗಿದೆ ಎಂದು ವಿಭಾಗೀಯ ಪೀಠವು ಹೇಳಿದೆ ಎಂದು ನ್ಯಾಯಮೂರ್ತಿ ಎಲ್. ನಾರಾಯಣಸ್ವಾಮಿ ನೇತೃತ್ವದ ಪೀಠಕ್ಕೆ ಯಡಿಯೂರಪ್ಪ ಅವರ ವಕೀಲರು ತಿಳಿಸಿದರು.

ಭ್ರಷ್ಟಾಚಾರ ಆಪಾದನೆ ಸಂಬಂಧ ಜನತಾದಳ (ಎಸ್) ಶಾಸಕ ವೈ.ಎಸ್. ದತ್ತ ಅವರು ದಾಖಲಿಸಿದ್ದ ಖಾಸಗಿ ದೂರಿನ ಸಂಬಂಧ ಯಡಿಯೂರಪ್ಪ ಅವರು ಯಡಿಯೂರಪ್ಪ ಅವರು ನಿರೀಕ್ಷಣಾ ಜಾಮೀನು ಕೋರಿ ಸಲ್ಲಿಸಿದ ಅರ್ಜಿಯ ಮೇಲಿನ ವಿಚಾರಣೆಯನ್ನು ನ್ಯಾಯಮೂರ್ತಿಗಳು ಬಳಿಕ ಸೆಪ್ಟೆಂಬರ್ 15ಕ್ಕೆ ಮುಂದೂಡಿದರು.

ದೂರಿನ ಪ್ರಕಾರ ಯಡಿಯೂರಪ್ಪ ಅವರ ಇಬ್ಬರು ಪುತ್ರರು ಮತ್ತು ಅಳಿಯ ಸಿವಿಲ್ ಗುತ್ತಿಗೆ ನೀಡುವ ಸಲುವಾಗಿ ಕಂಪೆನಿಯೊಂದರಿಂದ 13 ಕೋಟಿ ರೂಪಾಯಿಗಳ ಲಂಚ ಪಡೆದಿದ್ದರು ಎಂದು ಹೇಳಲಾಗಿತ್ತು. ಯಡಿಯೂರಪ್ಪ ಅವರ ಆಡಳಿತಾವಧಿಯಲ್ಲಿ ಭದ್ರಾ ನೀರಾವರಿ ಯೋಜನೆಯ ಎರಡನೇ ಹಂತದ ಯೋಜನೆಗಾಗಿ ನೀಡಲಾದ ಗುತ್ತಿಗೆಗೆ ಸಂಬಂಧಿಸಿ ಪ್ರಕರಣ ಇದು.

ಕಾಮಗಾರಿಗೆ ಹೆಚ್ಚಿನ ಮೊತ್ತದ ಹಣವನ್ನು ತೋರಿಸಿದ್ದರೂ ಕಂಪೆನಿಗೆ ಈ ಕಂಪೆನಿಗೆ ಕಾಮಗಾರಿ ವಹಿಸಲಾಗಿತ್ತು. ಕಡಿಮೆ ಮೊತ್ತ ತೋರಿಸಿದವರಿಗೆ ಗುತ್ತಿಗೆ ನೀಡಬೇಕೆಂಬ ಟೆಂಡರ್ ನಿಯಮಾವಳಿಗಳಿಗೆ ವಿರುದ್ಧವಾಗಿ ಈ ಕಂಪೆನಿಗೆ ಅನುಕೂಲ ಮಾಡಿಕೊಡಲಾಗಿದೆ ಎಂದು ದತ್ತ ದೂರಿದ್ದರು.

ಆರ್. ಎನ್ ಶೆಟ್ಟಿ ಮತ್ತು ಜ್ಯೋತಿ ಲಿಮಿಟೆಡ್ ಕಂಪೆನಿಗೆ ~ಅನುಕೂಲ~ ಮಾಡಿಕೊಟ್ಟ ಆರೋಪದಲ್ಲಿ ಲೋಕಾಯುಕ್ತ ಪೊಲೀಸರು ಯಡಿಯೂರಪ್ಪ ವಿರುದ್ಧ ಭ್ರಷ್ಟಾಚಾರ ನಿಗ್ರಹ ಕಾಯ್ದೆಯ ಅಡಿಯಲ್ಲಿ ಪ್ರಥಮ ಮಾಹಿತಿ ವರದಿ (ಎಫ್ ಐ ಆರ್) ದಾಖಲಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.