ಮಂಗಳವಾರ, ಏಪ್ರಿಲ್ 13, 2021
30 °C

ಬಿಕ್ಕಟ್ಟು ಬಗೆಹರಿಸಲು ಯತ್ನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಭಾರತ ಒಲಿಂಪಿಕ್ ಸಂಸ್ಥೆಯು (ಐಒಎ) ಮುಂಬರುವ ಚುನಾವಣೆಗೆ ಸಂಬಂಧಿಸಿದಂತೆ ಉಂಟಾಗಿರುವ ಬಿಕ್ಕಟ್ಟನ್ನು ಬಗೆಹರಿಸಲು ಕೊನೆಯ ಪ್ರಯತ್ನ ಆರಂಭಿಸಿದೆ. ಇದಕ್ಕಾಗಿ ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿ (ಐಒಸಿ) ಜೊತೆ ಮಾತುಕತೆ ನಡೆಸಲು ಮುಂದಾಗಿದೆ.

ಡಿಸೆಂಬರ್ 5 ರಂದು ನಡೆಯುವ ಚುನಾವಣೆ ಸರ್ಕಾರದ ನಿಯಮದಡಿ ನಡೆದರೆ ಸಂಸ್ಥೆಯ ಮಾನ್ಯತೆಯನ್ನು ರದ್ದುಪಡಿಸಲಾಗುವುದು ಎಂದು ಐಒಸಿ ಎಚ್ಚರಿಸಿದೆ. ಇದರಿಂದ ಇಕ್ಕಟ್ಟಿಗೆ ಸಿಲುಕಿರುವ ಐಒಎ ತನ್ನ ಪ್ರತಿನಿಧಿಗಳನ್ನು ಐಒಸಿ ಅಧಿಕಾರಿಗಳ ಬಳಿಕ ಕಳುಹಿಸಲು ನಿರ್ಧರಿಸಿದೆ.ಬಿಕ್ಕಟ್ಟಿನಿಂದ ಪಾರಾಗಲು ಹೊಸ ಹಾದಿ ಕಂಡುಕೊಳ್ಳುವ ನಿಟ್ಟಿನಲ್ಲಿ ಐಒಎ ಅಧಿಕಾರಿಗಳು ಗುರುವಾರ ದಿನವಿಡೀ ಗಂಭೀರ ಚರ್ಚೆ ನಡೆಸಿದ್ದಾರೆ. ಕೊನೆಗೆ ಹಾಕಿ ಇಂಡಿಯಾ ಕಾರ್ಯದರ್ಶಿ ನರೀಂದರ್ ಬಾತ್ರಾ ಮತ್ತು ವಕೀಲರಾದ ಆರ್.ಕೆ. ಆನಂದ್ ಅವರನ್ನು ಲೂಸಾನ್‌ಗೆ ಕಳುಹಿಸಲು ನಿರ್ಧರಿಸಲಾಯಿತು. ಇವರಿಬ್ಬರು ಚುನಾವಣೆಗೆ ಸಂಬಂಧಿಸಿದಂತೆ ಐಒಎಯ ನಿಲುವನ್ನು ಐಒಸಿ ಅಧಿಕಾರಿಗಳಿಗೆ ವಿವರಿಸಲಿದ್ದಾರೆ.`ಐಒಎಯು ಐಒಸಿಯ ಪತ್ರಕ್ಕೆ ಶುಕ್ರವಾರ ಪ್ರತಿಕ್ರಿಯೆ ನೀಡಲಿದೆ' ಎಂದು ಸಂಸ್ಥೆಯ ಹಂಗಾಮಿ ಅಧ್ಯಕ್ಷ ವಿಜಯ್ ಕುಮಾರ್ ಮಲ್ಹೋತ್ರ ಗುರುವಾರ ತಿಳಿಸಿದರು. ನವೆಂಬರ್ 30ರ ಒಳಗಾಗಿ ನಿಲುವ ಪ್ರಕಟಿಸುವಂತೆ ಐಒಸಿ ತನ್ನ ಪತ್ರದಲ್ಲಿ ಐಒಎಗೆ ಸೂಚಿಸಿತ್ತು.ಚುನಾವಣೆ ಸರ್ಕಾರದ ನಿಯಮದಡಿ ನಡೆದ ಐಒಸಿಯ ಮಾನ್ಯತೆ ರದ್ದಾಗಲಿದೆ ಎಂದು ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿ ಎರಡು ಸಲ ಎಚ್ಚರಿಕೆ ನೀಡಿದೆ. ಮಾತ್ರವಲ್ಲ ಡಿಸೆಂಬರ್ ಮೊದಲ ವಾರದಲ್ಲಿ ನಡೆಯುವ ಕಾರ್ಯಕಾರಿ ಮಂಡಳಿ ಸಭೆಯಲ್ಲಿ ಈ ಬಗ್ಗೆ ಪ್ರಸ್ತಾಪ ಮುಂದಿಡಲಾಗುವುದು ಎಂದು ಸ್ಪಷ್ಟಪಡಿಸಿದೆ.ಚೌತಾಲ ಆಯ್ಕೆ ಖಚಿತ: ನಿಗದಿತ ವೇಳಾಪಟ್ಟಿಯಂತೆ ಡಿಸೆಂಬರ್ 5 ರಂದು ಚುನಾವಣೆ ನಡೆದರೆ ಅಭಯ್ ಸಿಂಗ್ ಚೌತಾಲ ಅವರು ಐಒಎಯ ಅಧ್ಯಕ್ಷರಾಗಿ ಆಯ್ಕೆಯಾಗುವುದು ಖಚಿತವಾಗಿದೆ.ರಣಧೀರ್ ಸಿಂಗ್ ಕೆಲದಿನಗಳ ಹಿಂದೆ ಸ್ಪರ್ಧೆಯಿಂದ ಹಿಂದೆ ಸರಿದ ಸಂದರ್ಭದಲ್ಲೇ ಚೌತಾಲ ಹಾದಿ ಸುಗಮವಾಗಿತ್ತು. ನಾಮಪತ್ರ ಹಿಂದೆಗೆದುಕೊಳ್ಳಲು ಗುರುವಾರ ಸಂಜೆ 5.00 ಗಂಟೆಯವರೆಗೆ ಅವಕಾಶ ನೀಡಲಾಗಿತ್ತು. ಆದ್ದರಿಂದ ಇದೀಗ ಚೌತಾಲ ನೂತನ ಅಧ್ಯಕ್ಷರಾಗಿ ಆಯ್ಕೆಯಾಗುವುದು ಅಧಿಕೃತವಾಗಿ ಖಚಿತವಾಗಿದೆ.ಮೂವರು ಸದಸ್ಯರ ಐಒಎ ಚುನಾವಣಾ ಸಮಿತಿ ಅಂತಿಮ ಸ್ಪರ್ಧಿಗಳ ಪಟ್ಟಿಯನ್ನು ಶುಕ್ರವಾರ ಪ್ರಕಟಗೊಳಿಸುವ ಸಾಧ್ಯತೆಯಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.