ಶನಿವಾರ, ಜನವರಿ 18, 2020
21 °C

ಬಿಗಿ ತಪ್ಪಿದ ಗೃಹ ಇಲಾಖೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಮೇಲೆ ಎಸ್ ಪಿ ಹಲ್ಲೆ ನಡೆಸಿದ ವರದಿ (ಜ.3) ಓದಿ ಛೀ ಎನಿಸಿತು.  ಜನರನ್ನು ರಕ್ಷಿಸುವವರೇ ಕಾದಾಟ ಮಾಡಿದರೆ ದೇಶ, ರಾಜ್ಯ ಹೇಗೆ ಸುಭದ್ರವಾದೀತು? ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ವರಿಷ್ಠರ ಹಲ್ಲೆ ಕೆಟ್ಟ ಕೆಲಸವೇ ಸರಿ.ವಿಜಾಪುರ ಜಿಲ್ಲೆಯ ಸಿಂದಗಿ ತಾಲೂಕಿನ ಮಿನಿ ವಿಧಾನಸೌಧದ ಮುಂದೆ ದೇಶದ್ರೋಹಿಗಳು ಪಾಕಿಸ್ತಾನ ಧ್ವಜರೋಹಣ ಮಾಡಿದರು. ಇದು ನಮ್ಮ ದೇಶಕ್ಕೆ ಮಾಡಿದ ಅವಮಾನ.

 

ಹೊಸ ವರ್ಷದ ದಿನವನ್ನು ಜನ ಕುಣಿದು ಕುಪ್ಪಳಿಸಿ ಆಚರಿಸುತ್ತಾರೆಂಬುದು ಗೊತ್ತಿರುವ ವಿಷಯ. ಅಲ್ಲಿನ ಪೊಲೀಸ್ ಇಲಾಖೆಯವರು ನಿರ್ಲಕ್ಷ್ಯ ವಹಿಸಿದ್ದೇ ಈ ಕೃತ್ಯಕ್ಕೆ ಕಾರಣ. ಇವನ್ನೆಲ್ಲ ನೋಡಿದರೆ ರಾಜ್ಯ ಗೃಹ ಇಲಾಖೆ ಹಿಡಿತ ಸಡಿಲವಾಗಿದೆ. ಇಂತಹ ಘಟನೆಗಳು ನಡೆಯದಂತೆ ಗೃಹ ಸಚಿವ ಆರ್.ಅಶೋಕ ಎಚ್ಚರಿಕೆವಹಿಸಲಿ. 

ಪ್ರತಿಕ್ರಿಯಿಸಿ (+)