ಶನಿವಾರ, ಮೇ 15, 2021
22 °C

ಬಿಜೆಡಿ ಶಾಸಕನ ಹತ್ಯೆ: ನಕ್ಸಲ್ ಕೃತ್ಯದ ಶಂಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭುವನೇಶ್ವರ/ಒಡಿಶಾ, (ಪಿಟಿಐ):  ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಿದ್ದ ಆಡಳಿತಾರೂಢ ಬಿಜೆಡಿಯ ಉಮರಕೋಟ್ ಕ್ಷೇತ್ರದ ಶಾಸಕ ಜಗಬಂಧು ಮಜ್ಹಿ ಹಾಗೂ ಅವರ ಭದ್ರತಾ ಸಿಬ್ಬಂದಿಯನ್ನು ಶಂಕಿತ ಮಾವೊವಾದಿ ಉಗ್ರರು ಶನಿವಾರ ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.ನಕ್ಸಲೀಯರ ಪ್ರಭಾವಿರುವ ರಾಯಗಡದ ನವರಂಗಪುರ ಜಿಲ್ಲೆಯ ಬೋಲಾ ಗ್ರಾಮದಲ್ಲಿ ನಡೆಯುತ್ತಿದ್ದ ಪಟ್ಟಾ ವಿತರಣೆ ಸಮಾರಂಭದಲ್ಲಿ ಭಾಗವಹಿಸಿದ್ದಾಗ ಈ ಘಟನೆ ನಡೆದಿದೆ.39 ವರ್ಷದ ಜಗಬಂಧು ಅವರ ಮೇಲೆ ನಾಲ್ವರು ಅಪರಿಚಿತರ ಗುಂಪು ಹಠಾತ್ ಗುಂಡಿನ ದಾಳಿ ನಡೆಸಿತು.  ದಾಳಿಯಲ್ಲಿ ಶಾಸಕ ಮತ್ತು ಅವರ ಭದ್ರತಾ ಸಿಬ್ಬಂದಿ ಪಿ.ಕೆ. ಪತ್ರೊ ಎಂಬುವವರು ಸಾವನ್ನಪ್ಪಿದರು.2004ರಲ್ಲಿ ಅಪರಿಚಿತರು ನಡೆಸಿದ ದಾಳಿಯಲ್ಲಿ ಬದುಕುಳಿದಿದ್ದ ಅವರು ಗಾಲಿಕುರ್ಚಿಯನ್ನು ಬಳಸುತ್ತಿದ್ದರು. ಉಮರ್‌ಕೋಟ್ ಕ್ಷೇತ್ರದಿಂದ ಇದೇ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದರು. ಇದು ಮಾವೊವಾದಿಗಳ ಕೃತ್ಯವಿರಬಹುದು ಎಂದು ಡಿಜಿಪಿ ಮನಮೋಹನ್ ಅವರು ಶಂಕಿಸಿದ್ದಾರೆ.         

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.