ಮಂಗಳವಾರ, ಏಪ್ರಿಲ್ 20, 2021
27 °C

ಬಿಜೆಪಿಯಿಂದ ಜಾತಿ ಸಂಘರ್ಷ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನರಸಿಂಹರಾಜಪುರ: ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ  ಬಿಜೆಪಿ ನೇತೃತ್ವದ  ಸರ್ಕಾರ ಜಾತಿ ಜಾತಿಗಳ ನಡುವೆ ಸಂಪರ್ಘ ಹುಟ್ಟುಹಾಕುತ್ತಿದೆ ಎಂದು ಸಂಸದ ಕೆ.ಜಯಪ್ರಕಾಶ್ ಹೆಗ್ಡೆ  ಆರೋಪಿಸಿದರು.ಇಲ್ಲಿನ ಕೃಷಿ ಭವನದಲ್ಲಿ ಮಂಗಳವಾರ ನಡೆದ ಜನ ಸಂಪರ್ಕ ಸಭೆ ಹಾಗೂ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.ಹಿಂದೆ ಧರ್ಮ ಧರ್ಮಗಳ ಮಧ್ಯೆ ಕೋಮು ಭಾವನೆ ಕೆರಳಿಸುತ್ತಿದ್ದ ಬಿಜೆಪಿ, ಇಂದು ಜಾತಿ ಸಂಘರ್ಷ ಹುಟ್ಟುಹಾಕುತ್ತಿರುವುದು ಬಹಳ ಆತಂಕ ಕಾರಿಯಾದ ಸಂಗತಿ ಯಾಗಿದೆ ಎಂದು ದೂರಿದರು.ಅಧಿಕಾರಕ್ಕಾಗಿ ಜಾತಿ ಬಳಸಿಕೊಳ್ಳುವ ಹೊಸ ಸಂಪ್ರದಾಯ ಹುಟ್ಟುಹಾಕುತ್ತಿರುವುದನ್ನು ತಡೆಯಲು ರಾಜ್ಯಪಾಲರು ಮಧ್ಯಪ್ರವೇಶ ಮಾಡಬೇಕೆಂದು ಮನವಿ ಮಾಡಿದರು. ರಾಜ್ಯದಲ್ಲಿ ಅಧಿಕಾರಿಗಳ ಸರ್ಕಾರವಿದೆ. ಚುನಾಯಿತ ಸರ್ಕಾರ ಇಲ್ಲವಾಗಿದೆ. ಆಡಳಿತ ಯಂತ್ರ ಸಂಪೂರ್ಣ ಕುಸಿದಿದೆ. ಜನಪರ ಕಾಳಜಿ ಇಲ್ಲವಾಗಿದ್ದು ಆಯ್ಯವ್ಯವನ್ನು ಅಧಿಕಾರಿಗಳೇ ನೋಡುವ ಸ್ಥಿತಿ ಇದೆ ಎಂದು ಆರೋಪಿಸಿದರು.ಚುನಾವಣೆ ಸಂದರ್ಭದಲ್ಲಿ ನೀಡಿದ ಭರವಸೆಯಂತೆ ಗ್ರಾಮ ಪಂಚಾಯಿ ಮಟ್ಟಕ್ಕೆ ಭೇಟಿ ನೀಡಿ ಜನ ಸಾಮಾ ನ್ಯರ ಸಮಸ್ಯೆಯನ್ನು ಆಲಿಸಲಾಗು ತ್ತಿದ್ದು ಅವುಗಳನ್ನು ಹಂತ ಹಂತವಾಗಿ ಬಗೆಹರಿಸಲಾಗುವುದು ಎಂದು ಹೇಳಿದರು. ವಿಧಾನ ಪರಿಷತ್ ಸದಸ್ಯ ಮೋಟಮ್ಮ ಮಾತ ನಾಡಿ, ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಸರ್ಕಾರ ಗ್ರಾಮ ಪಂಚಾಯಿತಿಗಳ ಅಧಿಕಾರವನ್ನು ಕಸಿದು ಕೊಂಡಿದೆ. ಶಾಸಕರು ಸರ್ಕಾರದ ಸವಲತ್ತುಗಳನ್ನು ತಮ್ಮ ಹಿಂಬಾಲಕರಿಗೆ ಹಂಚುತ್ತಿದ್ದಾರೆ ಎಂದು ದೂರಿದರು.

 

ಹಿಂದಿನ ಸರ್ಕಾರಗಳ ಅವಧಿಯಲ್ಲಿ ಅಕ್ರಮ ಸಕ್ರಮಲ್ಲಿ ಜಮೀನು ಮಂಜೂರಾದ ಫಲಾನುಭವಿಗಳ ಹೆಸರನ್ನು ಕಡತದಲ್ಲಿ ತಿದ್ದುಪಡಿ ಮಾಡಿ ತಮ್ಮ ಹಿಂಬಾಲಕರಿಗೆ ಜಮೀನು ಹಂಚುವ ಕೆಲಸ ಬಿಜೆಪಿ ಶಾಸಕರು ಮಾಡುತ್ತಿದ್ದಾರೆ. ಇದೊಂದು ಹಗಲು ದರೋಡೆಯಾಗಿದೆ ಎಂದು ಆರೋಪಿಸಿದರು.ಸರ್ಕಾರ ನಡೆಸುತ್ತಿರುವ ಸ್ವಜನ ಪಕ್ಷಪಾತ, ಭ್ರಷ್ಟಾ ಚಾರದ ಬಗ್ಗೆ ಪ್ರಜ್ಞಾವಂತರು ಮಾತನಾಡದಿರುವುದು ದುರಂತವಾಗಿದೆ. ರಾಜ್ಯದ ಹಿತ ಕಾಪಾಡಲು ಕಾಂಗ್ರೆಸ್ ಕಾರ್ಯಕರ್ತರು ಭಿನ್ನಾಭಿಪ್ರಾಯಬಿಟ್ಟು ಸಂಘಟಿತರಾಗಿ ಬಿಜೆಪಿ ಆಡಳಿತ ಕಿತ್ತೊಗೆಯಲು ಪ್ರಯತ್ನಿಸಬೇಕೆಂದರು. ಕಾರ್ಯಕ್ರ ಮದ ಅಧ್ಯಕ್ಷತೆಯನ್ನು ತಾಲ್ಲೂಕು ಕಾಂಗ್ರೆಸ್ ಘಟಕದ ಅಧ್ಯಕ್ಷ ಡಾ.ಕೆ.ಪಿ.ಅಂಶುಮಂತ್ ವಹಿಸಿದ್ದರು.ಮುಖಂಡರಾದ ಬಿ.ಸಿ.ಗೀತಾ, ವನಮಾಲಮ್ಮ, ವಸಂತಕುಮಾರ್, ಖಲೀಲ್ ಸಾಹೇಬ್, ಸುಕುಮಾರ್, ಲೇಖಾವಸಂತ್, ಅಫ್ರೋಜ್,ಲಕ್ಷ್ಮಣಶೆಟ್ಟಿ, ಅಬುಬಕರ್, ಬಿ.ಎಸ್.ಸುಬ್ರಹ್ಮಣ್ಯ ಮತ್ತಿತರರಿದ್ದರು.

ಗುಬ್ಬಿಗಾ, ಬಾಳೆ, ಹೊನ್ನೆಕೂಡಿಗೆ, ನಾಗಲಾಪುರ, ಮೆಣಸೂರು, ಕಡಹಿನಬೈಲು ಹಾಗೂ ಮುತ್ತಿನಕೊಪ್ಪ ಗ್ರಾಮದಲ್ಲಿ ಸಂಸದರು ಜನಸಂಪರ್ಕ ಸಭೆ ನಡೆಸಿದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.