ಮಂಗಳವಾರ, ಏಪ್ರಿಲ್ 20, 2021
24 °C

ಬಿಜೆಪಿ ಅಭ್ಯರ್ಥಿ ಯೋಗೇಶ್ವರ್ ಬಳಿ 7.69 ಕೋಟಿ ಆಸ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಮನಗರ:  ಚನ್ನಪಟ್ಟಣ ಕ್ಷೆತ್ರದ ಬಿಜೆಪಿ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ಅವರು ಸುಮಾರು 7.69 ಕೋಟಿ ರೂಪಾಯಿ ಮೌಲ್ಯದ ಸ್ಥಿರ ಮತ್ತು ಚರ ಆಸ್ತಿಗಳನ್ನು ಹೊಂದಿದ್ದಾರೆ.ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಸೋಮವಾರ ನಾಮಪತ್ರ ಸಲ್ಲಿಸಿದ ಸಂದರ್ಭದಲ್ಲಿ ಚುನಾವಣಾ ಅಧಿಕಾರಿಗೆ ನೀಡಿರುವ ಪ್ರಮಾಣ ಪತ್ರದಲ್ಲಿ ಅವರು ತಮ್ಮ ಆಸ್ತಿ ವಿವರವನ್ನು ಘೋಷಿಸಿದ್ದಾರೆ.ನಗದು: ಯೋಗೇಶ್ವರ್ ಅವರ ಬಳಿ 9 ಲಕ್ಷ ರೂಪಾಯಿ ನಗದು ಹಾಗೂ ಅವರ ಪತ್ನಿ ಪಿ.ವಿ.ಶೀಲಾ ಅವರ ಬಳಿ 1.80 ಲಕ್ಷ ರೂಪಾಯಿ ನಗದು ಇದೆ. ವಿವಿಧ ಬ್ಯಾಂಕ್‌ಗಳಲ್ಲಿ ಸಿಪಿವೈ ಹೆಸರಿನಲ್ಲಿ 1.13 ಲಕ್ಷ ರೂಪಾಯಿ ಠೇವಣಿ ಇದೆ.ಪತ್ನಿ ಹೆಸರಿನಲ್ಲಿ 4799 ರೂಪಾಯಿ ಹಾಗೂ ಮಗಳು ನಿಶಾ ಹೆಸರಿನಲ್ಲಿ 42 ಸಾವಿರ ರೂಪಾಯಿ ಠೇವಣಿ ಇದೆ ಎಂದು ಮಾಹಿತಿ ನೀಡಿದ್ದಾರೆ. ಅಲ್ಲದೆ ಎಲ್‌ಐಸಿಯಲ್ಲಿ 25 ಲಕ್ಷ ರೂಪಾಯಿಯ ಜೀವ ವಿಮೆ ಹೊಂದಿದ್ದಾರೆ. ಚಿನ್ನ: ಸಿಪಿವೈ ಬಳಿ 5.20 ಲಕ್ಷ ಮೌಲ್ಯದ 250 ಗ್ರಾಂ ಚಿನ್ನ ಇದ್ದರೆ, ಅವರ ಪತ್ನಿ ಶೀಲಾ ಅವರ ಬಳಿ 31 ಲಕ್ಷ ಮೌಲ್ಯದ 1.5 ಕೆ.ಜಿ ಚಿನ್ನ ಇದೆ. ಅಲ್ಲದೆ 10.80 ಲಕ್ಷ ಮೌಲ್ಯದ 20 ಕೆ.ಜಿ ಬೆಳ್ಳಿ ಇರುವುದಾಗಿ ಅವರು ತಿಳಿಸಿದ್ದಾರೆ.ಯೋಗೇಶ್ವರ್ 1.38 ಲಕ್ಷ ರೂಪಾಯಿಯ ಚರಾಸ್ತಿ ಒಡೆಯರಾಗಿದ್ದರೆ ಪತ್ನಿ ಶೀಲಾ ಅವರು 44.14 ಲಕ್ಷ ರೂಪಾಯಿ ಮೌಲ್ಯದ ಚರಾಸ್ತಿಯ ಒಡೆತಿಯಾಗಿದ್ದಾರೆ. ಮನೆಗಳು: ಯೋಗೇಶ್ವರ್‌ಗೆ ಬೆಂಗಳೂರಿನ ಬನಶಂಕರಿಯಲ್ಲಿ 2400 ಚ.ಅಡಿಯ ಮನೆ (ರೂ 64 ಲಕ್ಷ), ಚನ್ನಪಟ್ಟಣದ 5ನೇ ಕ್ರಾಸ್‌ನಲ್ಲಿ 1881 ಚ.ಅಡಿಯ ಮನೆ (50 ಲಕ್ಷ), ಚನ್ನಪಟ್ಟಣದ 6ನೇ ಕ್ರಾಸ್‌ನಲ್ಲಿ 750 ಚ.ಅಡಿಯ ಮನೆ (15 ಲಕ್ಷ) ಹಾಗೂ ಬೆಂಗಳೂರಿನ ಎಚ್‌ಎಸ್‌ಆರ್ ಬಡಾವಣೆಯಲ್ಲಿ 4 ಸಾವಿರ ಚ.ಅಡಿಯ ನಿವೇಶನ (ರೂ 8.79 ಲಕ್ಷ) ಹೊಂದಿದ್ದಾರೆ.ಇವರ ಪತ್ನಿ ಹೆಸರಿನಲ್ಲಿ ಬೆಂಗಳೂರಿನ ಬನಶಂಕರಿ ಮೂರನೇ ಹಂತದಲ್ಲಿ 2,400 ಚ.ಅಡಿಯ ಮನೆ (25 ಲಕ್ಷ), ಬನಶಂಕರಿ 6ನೇ ಹಂತದಲ್ಲಿ 1,400 ಚ.ಅಡಿಯ ಮನೆ (20 ಲಕ್ಷ) ಇದೆ. ಅಲ್ಲದೆ ಬಿಡದಿ ಹೋಬಳಿಯಲ್ಲಿ 6 ಕೋಟಿ ಮೌಲ್ಯದ ಜಮೀನು ಹೊಂದಿದ್ದಾರೆ. ಅಲ್ಲದೆ ಫ್ಯಾಷನ್ ಫೋರಂ ಗಾರ್ಮೆಂಟ್ಸ್‌ನಲ್ಲಿ 3.50 ಕೋಟಿ ಬಂಡವಾಳ ಹೊಂದಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.