ಬಿಜೆಪಿ ಬಿಕ್ಕಟ್ಟು ಸಧ್ಯಕ್ಕೆ ಶಮನ, ಶೀಘ್ರದಲ್ಲೇ ವರಿಷ್ಠರಿಂದ ಸೂಕ್ತ ಕ್ರಮ
ನವದೆಹಲಿ (ಪಿಟಿಐ): ಕರ್ನಾಟಕ ಬಿಜೆಪಿ ರಾಜಕೀಯ ಬಿಕ್ಕಟ್ಟು ಸಧ್ಯಕ್ಕೆ ಶಮನಗೊಂಡಿದ್ದು, ~ ಬೇಡಿಕೆ ಬಗ್ಗೆ ವರಿಷ್ಠ ಮಂಡಳಿಯು ಸೂಕ್ತ ಸಮಯದಲ್ಲಿ ಸೂಕ್ತ ಕ್ರಮ ಕೈಗೊಳ್ಳುವುದು~ ಎಂದು ಪಕ್ಷವು ಬಂಡುಕೋರರಿಗೆ ಸುಳಿವು ನೀಡಿದೆ.
~ಸಚಿವರು ತಮ್ಮ ರಾಜೀನಾಮೆಗಳನ್ನು ಭೇಷತ್ತಾಗಿ ಹಿಂದಕ್ಕೆ ಪಡೆದುಕೊಂಡಿದ್ದು, ಕೆಲಸಕ್ಕೆ ಮರಳಿದ್ದಾರೆ. ಕರ್ನಾಟಕದಲ್ಲಿ ರಾಜಕೀಯ ಪರಿಹಾರ ಪಡೆಯುವತ್ತ ನಾವು ಮುನ್ನಡೆದಿದ್ದೇವೆ~ ಎಂದು ಕರ್ನಾಟಕ ಬಿಜೆಪಿ ಘಟಕದ ಉಸ್ತುವಾರಿ ನೋಡಿಕೊಳ್ಳುತ್ತಿರುವ ಧರ್ಮೇಂದ್ರ ಪ್ರಧಾನ್ ಇಲ್ಲಿ ವರದಿಗಾರರಿಗೆ ತಿಳಿಸಿದರು.
ಬಂಡುಕೋರರ ಬೇಡಿಕೆ ಬಗ್ಗೆ ಪರಿಶೀಲಿಸುವ ವಿಚಾರದಲ್ಲಿ ವರಿಷ್ಠ ಮಂಡಳಿಗೆ ಹಿಂಜರಿಕೆ ಏನೂ ಇಲ್ಲ ಎಂಬುದಾಗಿ ಸ್ಪಷ್ಟ ಸುಳಿವು ನೀಡಿದ ಅವರು ~ಸೂಕ್ತ ಕ್ರಮವನ್ನು ಸೂಕ್ತ ಕಾಲದಲ್ಲಿ ಕೈಗೊಳ್ಳಲಾಗುವುದು~ ಎಂದು ಹೇಳಿದರು. ಇದನ್ನು ಎಲ್ಲರಿಗೂ ತಿಳಿಸಲಾಗಿದೆ ಎಂದೂ ಅವರು ನುಡಿದರು.
ಕರ್ನಾಟಕದ ಎಲ್ಲ ಬೆಳವಣಿಗೆಗಳ ಬಗ್ಗೆ ವರಿಷ್ಠ ಮಂಡಳಿಗೆ ಅರಿವಿದೆ. ನಾಯಕತ್ವದ ಜೊತೆಗೆ ಮಾತುಕತೆಯ ಬಳಿಕವೇ ಸಚಿವರು ರಾಜೀನಾಮೆಗಳನ್ನು ಹಿಂದಕ್ಕೆ ಪಡೆದಿದ್ದಾರೆ. ನಾಯಕತ್ವ ಬದಲಾವಣೆಯ ವಿಚಾರವನ್ನು ಎರಡು ಮೂರು ದಿನಗಳಲ್ಲಿ ಇತ್ಯರ್ಥ ಪಡಿಸಲಾಗುವುದು ಎಂಬುದಾಗಿ ವರಿಷ್ಠ ಮಂಡಳಿ ಬಂಡುಕೋರರಿಗೆ ಭರವಸೆ ಕೊಟ್ಟಿದೆ ಎಂದು ವರದಿಗಳು ತಿಳಿಸಿವೆ.
ಈ ಮಧ್ಯೆ ಭಿನ್ನಮತೀಯ ಸಚಿವರು ರಾಜೀನಾಮೆ ಪತ್ರ ಹಿಂದಕ್ಕೆ ಪಡೆದುದನ್ನು ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಸ್ವಾಗತಿಸಿದ್ದಾರೆ.
~ಸಚಿವರ ಬಗ್ಗೆ ನನಗೆ ಕೆಟ್ಟ ಅಭಿಪ್ರಾಯವಿಲ್ಲ. ಇದರಲ್ಲಿ ಸ್ವಂತ ಹಿತಾಸಕ್ತಿಗಳೂ ಇಲ್ಲ. ವರಿಷ್ಠ ಮಂಡಳಿಯು ಬಿಕ್ಕಟ್ಟನ್ನು ಬಗೆಹರಿಸುವುದು~ ಎಂದು ಮುಖ್ಯಮಂತ್ರಿ ಪ್ರತಿಕ್ರಿಯಿಸಿದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.