ನವದೆಹಲಿ/ಪಣಜಿ (ಪಿಟಿಐ/ಐಎಎನ್ಎಸ್): ಮೋದಿ ಪಾತ್ರವೇ ಪ್ರಧಾನವಾಗಿ ಚರ್ಚೆಗೆ ಬರಲಿದೆ ಎಂದು ಹೇಳಲಾಗುತ್ತಿರುವ ಗೋವಾದ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಎಲ್.ಕೆ. ಅಡ್ವಾಣಿ, ಜಸ್ವಂತ್ ಸಿಂಗ್, ಉಮಾಭಾರತಿ ಸೇರಿದಂತೆ ಪಕ್ಷದ ಹಲವು ಹಿರಿಯ ನಾಯಕರು ಗೈರು ಹಾಜರಾಗಿದ್ದಾರೆ.

ಅಡ್ವಾಣಿ, ಉಮಾಭಾರತಿ ಹಾಗೂ ಜಸ್ವಂತ್ ಸಿಂಗ್ ಅವರು ಅನಾರೋಗ್ಯದ ಕಾರಣದಿಂದ ಸಭೆಗೆ ಹಾಜರಾಗಿಲ್ಲ ಎಂದು ಬಿಜೆಪಿ ಮೂಲಗಳು ತಿಳಿಸಿವೆ.

ಹಾಗೆಯೇ ಮತ್ತೊಬ್ಬ ಹಿರಿಯನಾಯಕ ರವಿಶಂಕರ್ ಪ್ರಸಾದ್ ಅವರು ಶ್ರೀಲಂಕಾಕ್ಕೆ ಹೋಗಿರುವುದರಿಂದ ಹಾಗೂ ಯುವ ನಾಯಕ ವರುಣ್ ಗಾಂಧಿ ವಿದೇಶದಲ್ಲಿರುವುದರಿಂದ ಇಂದಿನ ಸಭೆಗೆ ಗೈರು ಹಾಜರಾಗಿದ್ದಾರೆ.

ಅಡ್ವಾಣಿ ಅವರ ಗೈರು ಹಾಜರಿಗೆ ಬೇರೇನೂ ಅರ್ಥ ಕಲ್ಪಿಸುವುದು ಬೇಡ ಎಂದಿರುವ ವೆಂಕಯ್ಯನಾಯ್ಡು ಬರೇ ಆರೋಗ್ಯದ ಕಾರಣಗಳಿಂದಾಗಿ ಮಾತ್ರ ಮೊದಲ ದಿನ ಅಡ್ವಾಣಿ ಅವರು ಗೈರು ಹಾಜರಾಗಿದ್ದಾರೆ. ಆದರೆ ಶನಿವಾರ ಮತ್ತು ಭಾನುವಾರ ಅವರು ಹಾಜರಾಗುವ ಸಾಧ್ಯತೆ ಇದೆ ಎಂದು ಸಮಾಜಾಯಿಷಿ ನೀಡಿದ್ದಾರೆ.

ಕಾಂಗ್ರೆಸ್ ವ್ಯಂಗ್ಯ : ನರೇಂದ್ರ ಮೊದಿ ಅವರಿಂದಾಗಿಯೇ ಬಿಜೆಪಿ ನಾಯಕರು ಅನಾರೋಗ್ಯಪೀಡಿತರಾಗಿ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಭಾಗವಹಿಸಲಾಗಿಲ್ಲ ಎಂದು ಕಾಂಗ್ರೆಸ್ ವ್ಯಂಗ್ಯವಾಡಿದೆ. ಕೇವಲ ಒಬ್ಬ ವ್ಯಕ್ತಿಯಿಂದಾಗಿ ಬಿಜೆಪಿ ಪಕ್ಷದ ಹಿರಿಯರು ಅನಾರೋಗ್ಯಪೀಡಿತರಾಗಿದ್ದಾರೆ. ಈ ಬಗ್ಗೆ ಬಿಜೆಪಿ ಪಕ್ಷ ಯೋಚಿಸಬೇಕಾಗಿದೆ ಎಂದು ರಷೀದ್ ಅಲ್ವಿ ಅವರು ಹೇಳಿದ್ದಾರೆ.

ಕಾಂಗ್ರೆಸ್ ವಕ್ತಾರ ಶಕೀಲ್ ಅಹಮದ್ ಅವರು ಬಿಜೆಪಿಯಲ್ಲಿ ಮೋದಿ ಬಣವು ಅಡ್ವಾಣಿ ಬಣವನ್ನು ಅಟ್ಟಿಸಿಕೊಂಡು ಹೋಗುತ್ತಿದೆ ಎಂದು ಲೇವಡಿ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.