ಮಂಗಳವಾರ, ಜೂನ್ 22, 2021
29 °C

ಬಿಜೆಪಿ 2ನೇ ಪಟ್ಟಿ: ಯಡಿಯೂರಪ್ಪ, ಚಂದನ್ ಮಿಶ್ರಾ ಕಣಕ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಐಎಎನ್ಎಸ್): ರಾಜ್ಯದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಶಿವಮೊಗ್ಗ  ಲೋಕಸಭಾ ಕ್ಷೇತ್ರದಿಂದ ಕಣಕ್ಕೆ ಇಳಿಸುವುದರೊಂದಿಗೆ ಲೋಕಸಭಾ ಚುನಾವಣೇ ಅಭ್ಯರ್ಥಿಗಳ ತನ್ನ ಎರಡನೇ ಪಟ್ಟಿಯನ್ನು ಬಿಜೆಪಿ ಶನಿವಾರ ಬಿಡುಗಡೆ ಮಾಡಿತು.28 ಲೋಕಸಭಾ ಸ್ಥಾನಗಳು ಇರುವ ಕರ್ನಾಟಕದ 20 ಅಭ್ಯರ್ಥಿಗಳ ಹೆಸರನ್ನು ಪಕ್ಷವು ಪ್ರಕಟಿಸಿತು.ಪಶ್ಚಿಮ ಬಂಗಾಳಕ್ಕೆ ಒಂಬತ್ತು ಅಭ್ಯರ್ಥಿಗಳನ್ನು ಹೆಸರಿಸಲಾಗಿದೆ. ಇವರ ಪೈಕಿ ರಾಜಕಾರಣಿಯಾದ ಪತ್ರಕರ್ತ ಚಂದನ್ ಮಿಶ್ರಾ ಅವರ ಹೆಸರೂ ಸೇರಿದ್ದು ಅವರನ್ನು ಹೂಗ್ಲಿಯಿಂದ ಕಣಕ್ಕಿಳಿಸಲಾಗಿದೆ.ಮಿಶ್ರಾ ಅವರು ಪ್ರಸ್ತುತ ರಾಜ್ಯ ಸಭಾ ಸದಸ್ಯರಾಗಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.