ಬೆಂಗಳೂರು: ‘ರಾಜ್ಯ ಸರ್ಕಾರವು ನಗರದ ಎಲೆಕ್ಟ್ರಾನಿಕ್ ಸಿಟಿ ಸಮೀಪದಲ್ಲಿ 56 ಎಕರೆ ಭೂಮಿಯನ್ನು ಜೈವಿಕ ತಂತ್ರಜ್ಞಾನ ಪಾರ್ಕ್ (ಬಿಟಿ) ನಿರ್ಮಾಣಕ್ಕೆ ಮೀಸಲಿಟ್ಟಿದ್ದು, ಮೂರು ಹಂತದಲ್ಲಿ ನಿರ್ಮಾಣ ಕಾಮಗಾರಿ ನಡೆಯಲಿದೆ’ ಎಂದು ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಂ.ಎನ್.ವಿದ್ಯಾಶಂಕರ್ ಪ್ರಕಟಿಸಿದರು.

ವಿಷನ್ ಗ್ರೂಪ್ ವತಿಯಿಂದ ನಡೆಯಲಿರುವ ‘ಬೆಂಗಳೂರು ಇಂಡಿಯಾ ಬಯೋ ಮೇಳ’ ಕುರಿತು ನಗರದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು. ‘ಸರ್ಕಾರವು ಈ ಜೈವಿಕ ತಂತ್ರಜ್ಞಾನ ಉದ್ಯಾನ ಕಾಮಗಾರಿಗೆ 5 ಸಾವಿರ ಕೋಟಿ ರೂಪಾಯಿಯನ್ನು ವಿನಿಯೋಗಿಸಲಿದ್ದು, ಖಾಸಗಿ ಮತ್ತು ಸಾರ್ವಜನಿಕ ವಲಯದ ಸಹಭಾಗಿತ್ವದಲ್ಲಿ ನಿರ್ಮಾಣ ಕಾಮಗಾರಿ ನಡೆಯಲಿದೆ’ ಎಂದರು.

ಬಯೋಕಾನ್ ಸಂಸ್ಥೆಯ ಮುಖ್ಯ ವ್ಯವಸ್ಥಾಪಕ ನಿರ್ದೇಶಕಿ ಕಿರಣ್ ಮಜುಂದಾರ್ ಷಾ ಮಾತನಾಡಿ, ‘ವಿಷನ್ ಗ್ರೂಪ್ ಎಂಎಂ ಆ್ಯಕ್ಟಿವ್ಸೈ-ಟೆಕ್ ಕಮ್ಯೂನಿಕೇಷನ್ ಸಹಯೋಗದಲ್ಲಿ ತುಮಕೂರು ರಸ್ತೆಯಲ್ಲಿರುವ ಬೆಂಗಳೂರು ಅಂತರರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ ಮೇ 4 ರಿಂದ 6ರ ವರೆಗೆ ‘ಬೆಂಗಳೂರು ಇಂಡಿಯಾ ಬಯೋ ಮೇಳ’ವನ್ನು ಆಯೋಜಿಸಲಾಗಿದೆ’ ಎಂದು ಹೇಳಿದರು.

‘ಮೂರು ದಿನಗಳ ಕಾಲ ನಡೆಯಲಿರುವ ಮೇಳದಲ್ಲಿ ಅಂತರರಾಷ್ಟ್ರೀಯ ವಸ್ತುಪ್ರದರ್ಶನ, ಕೃಷಿ ಜೈವಿಕ ತಂತ್ರಜ್ಞಾನ, ಜೈವಿಕ ರಸಪ್ರಶ್ನೆ, ಔಷಧಿ ಅನ್ವೇಷಣೆ ಮತ್ತು ಅಭಿವೃದ್ಧಿ, ಜೈವಿಕ ತಂತ್ರಜ್ಞಾನ ವಲಯದಲ್ಲಿನ ಹಣಕಾಸು ಹೂಡಿಕೆ ಕುರಿತು ವಿಚಾರ ವಿನಿಮಯ ನಡೆಯಲಿದೆ. ಆರೋಗ್ಯ ರಕ್ಷಣೆ ಮತ್ತು ಆಹಾರ ಸಂರಕ್ಷಣೆ, ಇಂಧನ ಕ್ಷಮತೆ ಸೇರಿದಂತೆ ಹಲವು ಪ್ರಮುಖ ವಿಚಾರಗಳ ಬಗ್ಗೆ ಮೇಳವು ಬೆಳಕು ಚೆಲ್ಲಲಿದೆ. ಕೆನಡಾ, ಚಿಲಿ, ಜರ್ಮನಿ, ಸ್ಪೇನ್, ಹಾಲೆಂಡ್, ಇಂಗ್ಲೆಡ್, ಆಸ್ಟ್ರೇಲಿಯಾ, ಮಲೇಷ್ಯಾ, ದಕ್ಷಿಣ ಕೊರಿಯಾ, ಸಿಂಗಪುರ ಸೇರಿದಂತೆ 40 ಕ್ಕೂ ಹೆಚ್ಚು ಕಂಪನಿಗಳು ಭಾಗವಹಿಸಲಿವೆ’ ಎಂದರು. ‘ಜೈವಿಕ ಕೃಷಿ, ಜೈವಿಕ ಕೈಗಾರಿಕೆ ಮತ್ತು ಜೈವಿಕ ಮಾಹಿತಿ ಸೇರಿದಂತೆ ವಿವಿಧ ವಿಭಾಗದಲ್ಲಿ ಗಮನಾರ್ಹ ಸಾಧನೆ ಮಾಡಿರುವ ಕಂಪನಿಗಳಿಗೆ ‘ಬಯೋ ಎಕ್ಸ್ಲೆಸ್ಸ್’ ಪ್ರಶಸ್ತಿ ನೀಡಲಾಗುವುದು. ಮೇಳದಲ್ಲಿ ಆಯೋಜಿಸಲಾಗಿರುವ 20 ಗೋಷ್ಠಿಗಳಲ್ಲಿ 110 ಮಂದಿ ಪರಿಣತರು ಉಪನ್ಯಾಸ ನೀಡಲಿದ್ದಾರೆ’ ಎಂದರು.

ಮೇಳವನ್ನು ಮುಖ್ಯಮಂತ್ರಿ ಬಿ.ಎಸ್ಯಡಿಯೂರಪ್ಪ ಅವರು ಉದ್ಘಾಟಿಸಲಿದ್ದು, ಸಚಿವ ಡಾ.ವಿ.ಎಸ್ಆಚಾರ್ಯ, ಫ್ರಾನ್ಸ್ ರಾಯಭಾರಿ ಜೆರೋಮ್ ಬೋನ್ನಾಫಾಂಟ್ ಮತ್ತು ಡೆನ್ಮಾರ್ಕ್ನ ಭಾರತದ ರಾಯಭಾರಿ ಫ್ರೆಡ್ಡಿ ಸವನೆ ಮತ್ತು ಕೇಂದ್ರದ ಕುಟುಂಬ ಕಲ್ಯಾಣ ಇಲಾಖೆಯ ಕಾರ್ಯದರ್ಶಿ ಡಾ. ವಿಶ್ವ ಮೋಹನ್ ಅವರು ಪಾಲ್ಗೊಳ್ಳಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.