ಭಾನುವಾರ, ಜೂನ್ 20, 2021
25 °C

ಬಿಡಿಎಫ್‌ಎ ಇಲೆವೆನ್‌ಗೆ ಪ್ರಶಸ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಹೊಂದಾಣಿಕೆಯ ಆಟ ತೋರಿದ ಬೆಂಗಳೂರು ಜಿಲ್ಲಾ ಫುಟ್‌ಬಾಲ್‌ ಸಂಸ್ಥೆ (ಬಿಡಿಎಫ್‌ಎ) ತಂಡದವರು ಪಾಟ್ನಾದಲ್ಲಿ ನಡೆದ ‘ಬಿಹಾರ ಕಪ್‌’ ಅಖಿಲ ಭಾರತ ಫುಟ್‌ಬಾಲ್‌ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದುಕೊಂಡರು.



ಭಾನುವಾರ ನಡೆದ ಫೈನಲ್‌ ನಲ್ಲಿ ಬಿಡಿಎಫ್‌ಎ 3-0 ಗೋಲು ಗಳಿಂದ ಬೆಂಗಳೂರಿನ ಆರ್ಮಿ ಇಲೆ ವೆನ್‌ ಗ್ರೀನ್‌ ತಂಡವನ್ನು ಮಣಿಸಿತು.



ಗೋಪಿ ಎಂಟನೇ ನಿಮಿಷದಲ್ಲಿ ಗೋಲು ಗಳಿಸಿ ಬಿಡಿಎಫ್ಎಗೆ ಮೇಲುಗೈ ತಂದಿತ್ತರು. ಅರುಣ್‌ ಪಾಂಡೆ 20ನೇ ನಿಮಿಷದಲ್ಲಿ ಚೆಂಡನ್ನು ಗುರಿ ಸೇರಿಸಿ ಮುನ್ನಡೆ ಯನ್ನು 2-0ಗೆ ಹೆಚ್ಚಿಸಿದರು. ಅನೂಪ್‌ ರಾಜ್‌ 88ನೇ ನಿಮಿಷ ದಲ್ಲಿ ಗೋಲು ಗಳಿಸಿ ಬಿಡಿಎಫ್‌ಎ ಗೆಲುವನ್ನು ಖಚಿತಪಡಿಸಿಕೊಂಡರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.