ಶುಕ್ರವಾರ, ಮಾರ್ಚ್ 5, 2021
21 °C

ಬಿತ್ತನೆಗೆ ಸಣ್ಣ ಯಂತ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಿತ್ತನೆಗೆ ಸಣ್ಣ ಯಂತ್ರ

ಸಾಮಾನ್ಯವಾಗಿ ಹೊಲದಲ್ಲಿ ಕೂರಿಗೆಯಿಂದ ಬಿತ್ತುವ ಪದ್ಧತಿ. ಕ್ರಮೇಣ ಟ್ರಾಕ್ಟರ್, ಟಿಲ್ಲರ್‌ಗಳಿಗೆ ಜೋಡಿಸುವ ಬಿತ್ತನೆ ಯಂತ್ರಗಳು ಬಂದವು. ಕಡಲೇಬೀಜ, ತೊಗರಿ, ಸೂರ್ಯಕಾಂತಿ, ಮುಸುಕಿನ ಜೋಳ, ರಾಗಿಗಳನ್ನು ಇವುಗಳ ಸಹಾಯದಿಂದ ಬಿತ್ತಬಹುದಾಗಿದೆ.ಈ ಮೊದಲು ದೊಡ್ಡ ಯಂತ್ರ ಇತ್ತು. ಇದೇ ರೀತಿಯ ಚಿಕ್ಕ ಯಂತ್ರವನ್ನು ಮಧುಗಿರಿಯ ಕೃಷಿ ಉಪಕರಣ ತಜ್ಞ ಎಂ. ರಾಜೇಂದ್ರಕುಮಾರ್ ಅಭಿವೃದ್ಧಿಪಡಿಸಿದ್ದಾರೆ.ಸಣ್ಣ ಗಾತ್ರದ ಈ ಯಾಂತ್ರೀಕೃತ ಕೂರಿಗೆಯಲ್ಲಿ ಕಡಿಮೆ ಪ್ರಮಾಣದಲ್ಲಿ ಬೀಜಗಳನ್ನು ಬಿತ್ತನೆ ಮಾಡಬಹುದು. ಅಲ್ಲದೆ ಬೀಜದ ಜತೆಜತೆಗೇ ನಿರ್ದಿಷ್ಟ ಪ್ರಮಾಣದ ಗೊಬ್ಬರವನ್ನೂ ಭೂಮಿಗೆ ಸೇರಿಸಬಹುದು.ಈ ಸಾಧನವನ್ನು ಟ್ರಾಕ್ಟರ್‌ಗೆ ಜೋಡಿಸಿದರೆ ಸಾಕು. ಇನ್ನೊಂದು ವಿಶೇಷ ಎಂದರೆ ಬೀಜ ಹಾಕಿದ ನಂತರ ಅದನ್ನು ಮುಚ್ಚಲು ಹರಗುವುದರ ಅವಶ್ಯಕತೆಯಿರುವುದಿಲ್ಲ. ಇದು ಹರಗುವ ಕೆಲಸವನ್ನು ಸಹ ಸ್ವಯಂಚಾಲಿತವಾಗಿ ನಿರ್ವಹಿಸುತ್ತದೆ.ಈಗಾಗಲೆ ತುಮಕೂರು ಜಿಲ್ಲೆಯ ಶಿರಾ, ಮಧುಗಿರಿ, ಆಂಧ್ರದ ಮಡಕಶಿರಾ ತಾಲೂಕುಗಳಲ್ಲಿ ಈ ಯಾಂತ್ರೀಕೃತ ಕೂರಿಗೆಯನ್ನು ಅನೇಕ ರೈತರು ಯಶಸ್ವಿಯಾಗಿ ಬಳಸುತ್ತಿದ್ದಾರೆ. ಇದರಲ್ಲಿ ಸಮಯದ ಉಳಿತಾಯವಾಗುತ್ತದೆ, ಬಿತ್ತನೆ ಆಳುಗಳ ಅವಶ್ಯಕತೆ ಇರುವುದಿಲ್ಲ ಎಂದು ರಾಜೇಂದ್ರ ಕುಮಾರ್ ಹೇಳುತ್ತಾರೆ. ಅವರ ಸಂಪರ್ಕ ಸಂಖ್ಯೆ 91642 34499, 90369 65401.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.