ಮಂಗಳವಾರ, ಮೇ 18, 2021
22 °C

ಬಿತ್ತನೆ ಬೀಜ ವಿತರಣೆಗೆ ಚಾಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜನವಾಡ: ಮುಂಗಾರು ಹಂಗಾಮಿಗೆ ಶೇ 50 ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ ಹಾಗೂ ಲಘು ಪೋಷಕಾಂಶಗಳ ವಿತರಣೆಗೆ ಬೀದರ್ ತಾಲ್ಲೂಕಿನ ಜನವಾಡ ರೈತ ಸಂಪರ್ಕ ಕೇಂದ್ರದಲ್ಲಿ ಗುರುವಾರ ಚಾಲನೆ ನೀಡಲಾಯಿತು.ಜಿಲ್ಲಾ ಪಂಚಾಯಿತಿ ಸದಸ್ಯ ಕುಶಾಲ್ ಪಾಟೀಲ್ ಗಾದಗಿ ರೈತರೊಬ್ಬರಿಗೆ ಸಾಂಕೇತಿಕವಾಗಿ ಬೀಜ ವಿತರಿಸುವ ಮೂಲಕ ಚಾಲನೆ ನೀಡಿದರು. ಬಿತ್ತನೆ ಬೀಜ ಹಾಗೂ ಲಘು ಪೋಷಕಾಂಶ ಸಾಕಷ್ಟು ಪ್ರಮಾಣದಲ್ಲಿ ದಾಸ್ತಾನು ಇದ್ದು, ರೈತರು ಆತಂಕ ಪಡುವ ಅಗತ್ಯ ಇಲ್ಲ ಎಂದು ಹೇಳಿದರು.ಉದ್ದು, ಹೆಸರು, ತೊಗರಿ ಹಾಗೂ ಜೋಳದ ಬೀಜಗಳಿಗೆ ಶೇ 50ರಷ್ಟು ರಿಯಾಯಿತಿ ನೀಡಲಾಗುತ್ತಿದೆ. ಮಾರುಕಟ್ಟೆಯಲ್ಲಿ ಸೋಯಾಬಿನ್ ಬೆಲೆ ಕೆ.ಜಿ.ಗೆ. 57 ರೂಪಾಯಿ ಇದ್ದು, ರಿಯಾಯಿತಿ ಬೆಲೆಯಲ್ಲಿ ಕೆ.ಜಿ.ಗೆ 42 ರೂಪಾಯಿಯಂತೆ ವಿತರಿಸಲಾಗುತ್ತಿದೆ ಎಂದು ಕೃಷಿ ಅಧಿಕಾರಿ ಆರತಿ ಪಾಟೀಲ್ ತಿಳಿಸಿದರು.ರೈತರ ಅನುಕೂಲಕ್ಕಾಗಿ ಅಲಿಯಂಬರ್‌ನಲ್ಲೂ ಹೆಚ್ಚುವರಿ ಬೀಜ ವಿತರಣೆ ಕೇಂದ್ರ ಆರಂಭಿಸಲಾಗಿದೆ. ಜನವಾಡದಲ್ಲಿ ಜನವಾಡ, ಮರಕಲ್ ಹಾಗೂ ಚಾಂಬೋಳ್ ಗ್ರಾಮ ಪಂಚಾಯಿತಿ, ಅಲಿಯಂಬರ್‌ನಲ್ಲಿ ಅಲಿಯಂಬರ್ ಹಾಗೂ ಯರನಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರೈತರಿಗೆ ಬೀಜ ವಿತರಿಸಲಾಗುತ್ತಿದೆ. ಶ್ರೀಮಂಡಲ್ ಹಾಗೂ ನವಲಸಪುರ ಗ್ರಾಮಗಳ ರೈತರು ಗಾದಗಿಯಲ್ಲಿಯೂ ಬೀಜ ಪಡೆಯಬಹುದಾಗಿದೆ ಎಂದು ಹೇಳಿದರು.ಬಿತ್ತನೆ ಬೀಜ, ಲಘು ಪೋಷಕಾಂಶಗಳ ಅಗತ್ಯ ದಾಸ್ತಾನು ಮಾಡಿಕೊಳ್ಳಲಾಗಿದೆ. ಜಿಂಕ್, ಬೋರಾನ್ ಹಾಗೂ ಡ್ರೈಕೋಡರ್ಮ ಲಘು ಪೋಷಕಾಂಶಗಳನ್ನು ಸಹ ಶೇ 50 ರಿಯಾಯಿತಿ ಬೆಲೆಯಲ್ಲಿ ನೀಡಲಾಗುತ್ತಿದೆ. ಭೂಮಿಯ ಫಲವತ್ತತೆ ಹೆಚ್ಚಿಸಿ ಅಧಿಕ ಇಳುವರಿ ಪಡೆಯಲು ಲಘು ಪೋಷಕಾಂಶಗಳನ್ನು ಬಳಸಬೇಕು ಎಂದು ಸಲಹೆ ನೀಡಿದರು.ಗ್ರಾಮ ಪಂಚಾಯಿತಿ ಅಧ್ಯಕ್ಷ ಚಂದ್ರಕಾಂತ್ ಮನೋಹರ, ಬಸವರಾಜ ಬುಯ್ಯಾ ರೈತ ಸಂಪರ್ಕ ಕೇಂದ್ರದ ಅಲಿಮೊದ್ದೀನ್ ಇದ್ದರು. ಮೊದಲ ದಿನ ಸುಮಾರು 120ಕ್ಕೂ ಹೆಚ್ಚು ರೈತರು ವಿವಿಧ ಬೀಜಗಳನ್ನು ಖರೀದಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.