ಬಿರುಗಾಳಿ ಮಳೆ: ಲಕ್ಷಾಂತರ ರೂ ಬೆಳೆ ಹಾನಿ

7

ಬಿರುಗಾಳಿ ಮಳೆ: ಲಕ್ಷಾಂತರ ರೂ ಬೆಳೆ ಹಾನಿ

Published:
Updated:

ಹೊಳಲ್ಕೆರೆ:  ತಾಲ್ಲೂಕಿನ ಗೌಡಿಹಳ್ಳಿ ಸಮೀಪದ ಗೊಲ್ಲರಹಳ್ಳಿ ಮತ್ತು ಗೊಲ್ಲರಹಳ್ಳಿ ಕ್ಯಾಂಪ್ ಗ್ರಾಮಗಳ ಸುತ್ತಮುತ್ತ ಭಾನುವಾರ ರಾತ್ರಿ ಬಿರುಗಾಳಿ ಸಹಿತ ಸುರಿದ ಮಳೆಗೆ ಬಾಳೆ, ಅಡಿಕೆ, ತೆಂಗು, ಮೆಕ್ಕೆಜೋಳದ ಬೆಳೆಗಳು ನೆಲಕಚ್ಚಿದ್ದು, ಸುಮಾರು ಲಕ್ಷಾಂತರ ರೂ ನಷ್ಟ ಸಂಭವಿಸಿದೆ.

ರಾತ್ರಿ ಮಳೆಯೊಂದಿಗೆ ಆರಂಭವಾದ ಬಿರುಗಾಳಿಗೆ ಸುಮಾರು 20 ತೆಂಗಿನ ಮರಗಳು, 500 ಅಡಿಕೆ ಮರಗಳು, 25 ಎಕರೆ ಬಾಳೆ, 25 ಎಕರೆ ಮೆಕ್ಕೆಜೋಳದ ಬೆಳೆ ನೆಲ ಕಚ್ಚಿದೆ. ಬಿರುಗಾಳಿಯ ಹೊಡೆತದಿಂದ ಎರಡು ವಿದ್ಯುತ್ ಕಂಬಗಳು ಧರೆಗೆ ಉರುಳಿದ್ದು, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.  ತಾಲ್ಲೂಕಿನಾದ್ಯಂತ ಒಟ್ಟು 48 ಮಿ.ಮೀ. ಮಳೆಯಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry