ಬೀಜ ಕಾಯಿದೆ ಜಾರಿಗೆ ವಿರೋಧ: ಮಾ.9 ರಂದು ದೆಹಲಿ ಚಲೋ

7

ಬೀಜ ಕಾಯಿದೆ ಜಾರಿಗೆ ವಿರೋಧ: ಮಾ.9 ರಂದು ದೆಹಲಿ ಚಲೋ

Published:
Updated:

ಮೈಸೂರು: ‘ರೈತ ವಿರೋಧಿ ಹಾಗೂ ವಿದೇಶಿ ಕಂಪೆನಿಗಳಿಗೆ ಲಾಭದಾಯಕವಾಗಿರುವ ‘ಬೀಜ ಕಾಯಿದೆ’ ನೀತಿ ಜಾರಿ ಹಾಗೂ ರೈತರ ಕೃಷಿ ಭೂ-ಕಬಳಿಕೆ ವಿರೋಧಿಸಿ ಮಾ. 9ರಂದು ರೈತ ಸಂಘಟನೆಗಳ ಮುಖಂಡರೊಂದಿಗೆ ದೆಹಲಿ ಚಲೋ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ’ ಎಂದು ರೈತ ಪರ ಹೋರಾಟಗಾರ್ತಿ ಚುಕ್ಕಿ ನಂಜುಂಡಸ್ವಾಮಿ ಹೇಳಿದರು.‘ದೇಶದಾದ್ಯಂತ ಎಲ್ಲಾ ಪ್ರಮುಖ ರೈತ ಸಂಘಟನೆಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು, ಕರ್ನಾಟಕದಿಂದ ಸುಮಾರು 5 ಸಾವಿರ ರೈತರು ಪಾಲ್ಗೊಳ್ಳಲಿದ್ದಾರೆ. ಅಖಿಲ ಭಾರತ ರೈತ ಸಂಘಟನೆಗಳ ಒಕ್ಕೂಟದಿಂದ ದೆಹಲಿ ಸುತ್ತಮುತ್ತಲಿನ ರಸ್ತೆಗಳನ್ನು ಬಂದ್ ಮಾಡುವ ಮೂಲಕ ಪ್ರತಿಭಟಿಸಲಾಗುವುದು’ ಎಂದು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry