ಶುಕ್ರವಾರ, ಮೇ 14, 2021
35 °C

ಬೀಜ, ರಸಗೊಬ್ಬರ ಪೂರೈಕೆಗೆ ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: “ಜಿಲ್ಲೆಯ ಭೀಕರ ಬರ ಪರಿಸ್ಥಿತಿ ಎದುರಿಸುತ್ತಿರುವ ಹಿನ್ನೆಲೆ ಯಲ್ಲಿ ಮುಂಬರುವ ಮುಂಗಾರು ಹಂಗಾಮಿನಲ್ಲಿ ಮಳೆ ಉತ್ತಮವಾದ ಬಿತ್ತನೆ ಕಾರ್ಯ ಚುರುಕುಗೊಳ್ಳಲಿದೆ. ಹೀಗಾಗಿ ಅಧಿಕಾರಿಗಳು ಈಗಿನಿಂದಲೇ ಸನ್ನದ್ಧಗೊಂಡು ಸಕಾಲಕ್ಕೆ ರೈತರಿಗೆ ಬೀಜ ಹಾಗೂ ರಸಗೊಬ್ಬರವನ್ನು ವಿತರಿಸಲು ಕ್ರಮಕೈಗೊಳ್ಳಬೇಕು” ಜಿಲ್ಲಾಧಿಕಾರಿ ವಿ. ಅನ್ಬುಕುಮಾರ ಅಧಿಕಾರಿಗಳಿಗೆ ಸೂಚಿಸಿದರು.ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಕೃಷಿ ಇಲಾಖೆ ಅಧಿಕಾರಿಗಳು, ಕರ್ನಾಟಕ ಸಹಕಾರಿ ಮಹಾಮಂಡಳ ಅಧಿಕಾರಿ ಗಳು, ಬೀಜ ಮತ್ತು ರಸಗೊಬ್ಬರ ಪೂರೈಕೆದಾರರೊಂದಿಗೆ ಸಭೆ ನಡೆಸಿದ ಅವರು, ರೈತರಿಗೆ ಯಾವುದೇ ರೀತಿಯ ಅನಾನುಕೂಲವಾ ಗದಂತೆ ಸಕಾಲಕ್ಕೆ ಬೀಜ ಹಾಗೂ ರಸಗೊಬ್ಬರ ಪೂರೈಕೆಯಾಗುವಂತೆ ನೋಡಿಕೊಳ್ಳ ಬೇಕು. ಅದರಂತೆ ಬೀಜ, ರಸಗೊಬ್ಬರದ ಸಮರ್ಪಕವಾದ ದಾಸ್ತಾನು ಇಟ್ಟುಕೊಳ್ಳುವಂತೆ ಸೂಚಿಸಿದರು.ಕೃಷಿ ಅಧಿಕಾರಿಗಳು ತಾಲ್ಲೂಕು ಮಟ್ಟದಲ್ಲಿ ಆಯಾ ಗ್ರಾಮಗಳಲ್ಲಿ ರೈತರಿಗೆ ಅವಶ್ಯಕತೆ ಇರುವ ಬೀಜ ಪ್ರಮಾಣ ಹಾಗೂ ರಸಗೊಬ್ಬರದ ಪ್ರಮಾಣದ ಬಗ್ಗೆ ಮುಂಚೆಯೇ ಸಮೀಕ್ಷೆ ನಡೆಸಿಕೊಂಡು ಅವಶ್ಯಕ ಕ್ರಮಗಳನ್ನು ಕೈಗೊಳ್ಳಬೇಕು. ಆಯಾ ಬೀಜ ಹಾಗೂ ರಸಗೊಬ್ಬರ ಪೂರೈಕೆದಾರರಿಂದ ಆಗು ತ್ತಿರುವ ಬೀಜ ಮತ್ತು ರಸಗೊಬ್ಬರ ಪ್ರಮಾಣದ ಬಗ್ಗೆ ಮತ್ತು ಯಾವ ಸಾರಿಗೆ ವಾಹನ ಮೂಲಕ ರವಾನಿಸ ಲಾಗಿದೆ.ಯಾವ ಸಮಯಕ್ಕೆ ಇದನ್ನು ರವಾನಿಸಲಾಗಿದೆ, ಎಲ್ಲಿ ಪಡೆಯಲಾ ಗಿದೆ. ಬೀಜ ರಸಗೊಬ್ಬರದ ಗುಣಮ ಟ್ಟದ ಕುರಿತು ಪ್ರತಿದಿನ ಮಾಹಿತಿ ನೀಡುವಂತೆ ಜಿಲ್ಲಾಧಿಕಾರಿಗಳು ಸೂಚಿಸಿ ದರು. ಬೀಜ ಹಾಗೂ ರಸಗೊಬ್ಬರದ ಗುಣಮಟ್ಟ ಪರಿಶೀಲನೆಗೆ, ಅಕ್ರಮ ಸರಬರಾಜು ಮತ್ತು ನಿರ್ವಹಣೆಗಾಗಿ ತಹಶೀಲ್ದಾರರ ನೇತೃತ್ವದಲ್ಲಿ ತಂಡಗ ಳನ್ನು ರಚಿಸಲಾಗುವುದು.ಬೀಜದ ಕೊರತೆಯಾಗದಂತೆ ನೋಡಿಕೊಳ್ಳಲು ಶೇ. 5ರಿಂದ 10ರಷ್ಟು ಬೀಜ ಪ್ರಮಾಣ ವನ್ನು ದಾಸ್ತಾನು ಇಟ್ಟುಕೊಂಡಿರ ಬೇಕು. ಬಫರ್‌ಸ್ಟಾಕ್ ಇರುವ 48 ಸಾವಿರ ಟನ್ ರಸಗೊಬ್ಬರ ಸಮರ್ಪಕವಾಗಿ ದಾಸ್ತಾನು ಇಟ್ಟುಕೊಳ್ಳಬೇಕು~ ಎಂದು ತಿಳಿಸಿದರು.ಅಧಿಕಾರಿಗಳು ಬೀಜ ಮತ್ತು ರಸಗೊಬ್ಬರ ಪೂರೈಕೆದಾರರ ಮಧ್ಯೆ ಸಮನ್ವಯತೆ ಇರಬೇಕು. ಕೃಷಿ ಇಲಾಖೆ ಅಧಿಕಾರಿಗಳು ಸಹ ರೈತರ ಸಮಸ್ಯೆ ಯನ್ನು ಅರಿತು ಕಾಲ ಕಾಲಕ್ಕೆ ಬೀಜ- ರಸಗೊಬ್ಬರ ಪೂರೈಕೆದಾರ ರೊಂದಿಗೆ ಸಭೆ ನಡೆಸಬೇಕು ಎಂದು ಸೂಚಿಸಿದರು.ಕೃಷಿ ಇಲಾಖೆ ಜಂಟಿ ನಿರ್ದೇಶಕ ಲೋಕಪ್ರಕಾಶ, ಜಿಲ್ಲೆಯಲ್ಲಿ 2012- 13ನೇ ಸಾಲಿನ ಮುಂಗಾರು ಹಂಗಾಮಿ ನಲ್ಲಿ ಒಟ್ಟು 70,138 ಕ್ವಿಂಟಲ್ ಬೀಜದ ಬೇಡಿಕೆ ಇದೆ. 88,706 ಕ್ವಿಂಟಲ್ ಬೀಜವನ್ನು ಪೂರೈಸುವುದಾಗಿ ಬೀಜ ಪೂರೈಕೆದಾರರು ತಿಳಿಸಿದ್ದಾರೆ.ಸೆಪ್ಟೆಂಬರ್ ತಿಂಗಳ ವರೆಗೆ 22,330 ಟನ್ ರಸಗೊಬ್ಬರದ ಬೇಡಿಕೆ ಇದೆ. 10,699 ಟನ್ ರಸ ಗೊಬ್ಬರ ಪೂರೈಕೆಯಾಗಿದೆ. ಸದ್ಯ 48 ಸಾವಿರ ಟನ್ ರಸಗೊಬ್ಬರ ಸ್ಟಾಕ್ ಇದೆ” ಎಂದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.