ಗುರುವಾರ , ಮಾರ್ಚ್ 4, 2021
18 °C
ವಿದ್ಯಾರ್ಥಿ– ಕಟ್ಟಡದ ಭವಿಷ್ಯ ಆತಂಕದಲ್ಲಿ–ಅತಿಥಿ ಉಪನ್ಯಾಸಕರಿಗೆ ಅವಲಂಬನೆ

ಬೀರೂರು- ಪ್ರಥಮ ದರ್ಜೆ ಕಾಲೇಜು ಕಟ್ಟಡ ಕಳಪೆ

ಪ್ರಜಾವಾಣಿ ವಾರ್ತೆ/ ಎನ್.ಸೋಮಶೇಖರ್ Updated:

ಅಕ್ಷರ ಗಾತ್ರ : | |

ಬೀರೂರು- ಪ್ರಥಮ ದರ್ಜೆ ಕಾಲೇಜು ಕಟ್ಟಡ ಕಳಪೆ

ಬೀರೂರು: ಕಾಲೇಜು ಶಿಕ್ಷಣ ಇಲಾಖೆಯ ಅನುದಾನದಲ್ಲಿ ನಿರ್ಮಿಸುತ್ತಿರುವ ಪ್ರಥಮದರ್ಜೆ ಕಾಲೇಜು ಕಟ್ಟಡದ ವಿಸ್ತರಣಾ ವಿಭಾಗ ಕಳಪೆ ಕಾಮಗಾರಿ ಯಿಂದ ಬಿರುಕು ಬಿಟ್ಟು ಹಸ್ತಾಂತರಕ್ಕೆ ಮುನ್ನವೇ ಭೀತಿ ಮೂಡಿಸಿದ್ದರೆ, ಬಹು ಪಾಲು ಅತಿಥಿ ಉಪನ್ಯಾಸಕರ ಬಲದಿಂದ ನಡೆಯುತ್ತಿರುವ ಪಾಠ-ಪ್ರವಚನಗಳು ಉಪನ್ಯಾಸಕರ ಮುಷ್ಕರದ ಹಿನ್ನೆಲೆಯಲ್ಲಿ ಹಿನ್ನಡೆ ಅನುಭವಿಸಿ ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಆತಂಕದ ಕರಿನೆರಳು ಮೂಡಿಸಿದೆ.ಹಲವರ ಹೋರಾಟ ಮತ್ತು ಆಸಕ್ತಿಯ ಫಲವಾಗಿ ಈ ಹಿಂದೆ ಪಿಜೆಎನ್‍ಎಂ ಕಾಲೇಜು ಕಟ್ಟಡದಲ್ಲಿ ನಡೆಯುತ್ತಿದ್ದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕೇವಲ 4 ವರ್ಷಗಳ ಹಿಂದೆ ಸ್ವಂತ ಕಟ್ಟಡ ಹೊಂದಿ ಒಂದು ತೂಗುಗತ್ತಿಯ ಅಪಾಯದಿಂದ ಪಾರಾ ಗಿತ್ತು. ನಂತರ ಕೆಲವೇ ದಿನಗಳಲ್ಲಿ ಕಾಲೇಜು ಶಿಕ್ಷಣ ಇಲಾಖೆಯ ಕೃಪೆ ಯಿಂದ ಒಂದು ವಾಚನಾಲಯ (ಗ್ರಂಥಾಲಯ), ಎರಡು ಪ್ರಾಯೋಗಿಕ ತರಗತಿಯ ಕೊಠಡಿಗಳು ಮತ್ತು ವಿದ್ಯಾರ್ಥಿನಿಯರ ಶೌಚಾಲಯಕ್ಕೆ ಅನುದಾನ ಪಡೆದು ವಿಸ್ತರಣೆಯ ಭಾಗ್ಯ ವನ್ನೂ ಪಡೆದಿತ್ತು. ಸುಮಾರು ಮೂರು ವರ್ಷಗಳ ಹಿಂದೆ ಆರಂಭಗೊಂಡ ಕಟ್ಟಡ ವಿಸ್ತರಣೆ ಅಥವಾ ನಿರ್ಮಾಣ ಕಾಮಗಾರಿ ಈಗ ನಿರಾಕ್ಷೇಪಣಾ ಪತ್ರ(ಎನ್‍ಒಸಿ) ಪಡೆಯುವ ಹಂತಕ್ಕೆ ಬಂದು ತಲುಪಿದೆ.ಕಾಲೇಜು ಶಿಕ್ಷಣ ಇಲಾಖೆಯ ಆಯುಕ್ತರ ಕಚೇರಿ ಈ ಕಾಲೇಜಿಗೆ ಸುಮಾರು ₹75 ಲಕ್ಷ  ಅನುದಾನ ನಿಗದಿಪಡಿಸಿದ್ದರೆ, ಬೆಂಗಳೂರಿನ ರೈಟ್ಸ್ ಕಂಪೆನಿ ₹67 ಲಕ್ಷಗಳಿಗೆ ಟೆಂಡರ್ ಬರೆದು ಕಾಮಗಾರಿಯನ್ನು ತನ್ನದಾಗಿಸಿ ಕೊಂಡಿದೆ.(ಈ ಸಂಸ್ಥೆ ರಾಜ್ಯದ ಒಟ್ಟು 56 ಕಾಲೇಜುಗಳ ವಿಸ್ತರಣಾ ಟೆಂಡರ್ ಪಡೆದುಕೊಂಡಿದೆ). ಆದರೆ ಈ ಸಂಸ್ಥೆ ಇಲ್ಲಿ ನಿರ್ಮಿಸಿರುವ ಕಟ್ಟಡ ಹಲವೆಡೆ ಬಿರುಕುಬಿಟ್ಟು ಬಾಳಿಕೆ ಮತ್ತು ಕಾಮ ಗಾರಿಯ ಗುಣಮಟ್ಟದ ಬಗ್ಗೆ ಶಂಕೆ ಮೂಡಿಸಿದೆ. ವಿದ್ಯಾರ್ಥಿನಿಯರಿಗೆ ನಿರ್ಮಿ ಸಿದ ಶೌಚಾಲಯಕ್ಕೆ ಪ್ರತ್ಯೇಕ ಸೆಪ್ಟಿಕ್ ಟ್ಯಾಂಕ್ ನಿರ್ಮಿಸದೆ, ಈ ಹಿಂದೆ ಕಾಲೇಜಿನಲ್ಲಿ ಇದ್ದ ಶೌಚಾಲಯದ ಸೆಪ್ಟಿಕ್ ಟ್ಯಾಂಕ್‌ಗೆ ಸಂಪರ್ಕ ನೀಡಲಾಗಿದೆ.ಕಾಲೇಜಿನ ಹಳೆಯ ಕಟ್ಟಡ ಕೇವಲ ನಾಲ್ಕು ವರ್ಷಗಳ ಹಿಂದೆ ಉದ್ಘಾಟನೆಯಾಗಿದ್ದರೂ ದಶಕಗಳ ಹಿಂದಿನ ಕಟ್ಟಡವೇನೋ ಎನ್ನುವ ಸ್ಥಿತಿ ತಲುಪಿದ್ದು ಇದಕ್ಕೆ ಪ್ರತ್ಯೇಕ ಕಾರಣ ವಿವರಿಸಬೇಕಿಲ್ಲ.ವಿದ್ಯಾರ್ಥಿಗಳಿಗೆ ಶುದ್ಧ ಕುಡಿಯುವ ನೀರು ಪೂರೈಸಲು ಕಾಲೇಜು ಆರಂಭಗೊಂಡ ಹೊಸತರಲ್ಲಿ ಒಂದು ಶುದ್ಧ ಕುಡಿಯುವ ನೀರು ಘಟಕ ತಂದಿದ್ದು ನೀರಿನ ಸಂಪರ್ಕ ಇಲ್ಲದ ಕಾರಣ ಆ ಯಂತ್ರ ಧೂಳು ತಿನ್ನುತ್ತಾ ಬಿದ್ದಿದೆ, ಕಟ್ಟಡದ ಹಲವು ಕಿಟಕಿಯ ಗಾಜುಗಳು ಪುಂಡರ ಹೊಡೆತಕ್ಕೆ ಮಣ್ಣು ಪಾಲಾಗಿದೆ. ಕಟ್ಟಡದ ಹಲವು ಗೋಡೆ ಗಳು ಬಿರುಕುಬಿಟ್ಟು ದುಸ್ಥಿತಿಯ ದಿನಗಳ ಬರುವಿಕೆಗಾಗಿ ಕಾದು ಕುಳಿತಿದೆ.ಕಾಲೇಜಿನಲ್ಲಿ ಸುಮಾರು 550ಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡು ತ್ತಿದ್ದು ಇಲ್ಲಿ ಪ್ರಾಂಶುಪಾಲರೂ ಸೇರಿ 8ಮಂದಿ ಕಾಯಂ ಉಪನ್ಯಾಸಕರಿದ್ದರೆ, 33 ಮಂದಿ ಅತಿಥಿ ಉಪನ್ಯಾಸಕರಿದ್ದಾರೆ.ಬಿ.ಎ., ಬಿ.ಕಾಂ., ಬಿ.ಬಿ.ಎಂ., ಬಿ.ಎಸ್‍ಸಿ. ತರಗತಿಗಳು ನಡೆಯುತ್ತಿದ್ದು, ಸೇವೆ ಕಾಯಂ ಮತ್ತಿತರ ಬೇಡಿಕೆಗಳಿಗೆ ಆಗ್ರಹಿಸಿ ಅತಿಥಿ ಉಪನ್ಯಾಸಕರು ತರಗತಿ ಬಹಿಷ್ಕರಿಸಿ ಮುಷ್ಕರದಲ್ಲಿ             ತೊಡಗಿದ್ದಾರೆ.ಫೆಬ್ರುವರಿ ಮೊದಲ ವಾರದಲ್ಲಿ ಇಂಟರ್ನಲ್ಸ್ ಆರಂಭವಾಗಲಿದ್ದು ವಿದ್ಯಾರ್ಥಿಗಳ ಭವಿಷ್ಯಕ್ಕೆ ಮುಷ್ಕರದ ಬಿಸಿ ತಟ್ಟಲಿದೆ. ಈ ಅತಿಥಿ ಉಪನ್ಯಾಸಕರ ಮುಷ್ಕರ ಕೇವಲ ಇಲ್ಲಿಗೆ ಮಾತ್ರ ಸೀಮಿತವಾಗದೆ ರಾಜ್ಯದಾದ್ಯಂತ ಸುಮಾರು 14,500 ಅತಿಥಿ ಉಪನ್ಯಾಸ ಕರು ಮುಷ್ಕರದಲ್ಲಿ ತೊಡಗಿದ್ದು ಇಡೀ ಕಾಲೇಜುಶಿಕ್ಷಣ ವ್ಯವಸ್ಥೆ ಮೇಲೆ ಪರಿ ಣಾಮ ಬೀರಲಿದೆ.ವಿದ್ಯಾರ್ಥಿಗಳು ಭವ್ಯಭಾರತದ ಮುಂದಿನ ಪ್ರಜೆಗಳು ಎಂದು ಸರ್ಕಾರ ಮತ್ತು ಆಡಳಿತ ನಡೆಸುವವರೇನೋ ಹೇಳುತ್ತಾರೆ, ಆದರೆ ಇಂತಹ ವ್ಯವಸ್ಥೆ ಹಾಗೂ ಪಾಠ-ಪ್ರವಚನಗಳ ಕೊರತೆ ವಿದ್ಯಾರ್ಥಿಗಳ ಭವಿಷ್ಯಕ್ಕೇ ಕೊಡಲಿಪೆಟ್ಟು ನೀಡುತ್ತಿದೆ.ಇದೇ ವ್ಯವಸ್ಥೆ ನಂಬಿ ಕೊಂಡು ಬದುಕುವ ಅತಿಥಿ ಉಪನ್ಯಾಸ ಕರು ಹಾಗೂ ಸರ್ಕಾರಿ ಶಿಕ್ಷಣವನ್ನೇ ನೆಚ್ಚಿ ಬದುಕುವ ಬಡವರ್ಗದ ವಿದ್ಯಾರ್ಥಿಗಳ ಭವಿಷ್ಯವೂ ಆತಂಕ ಎದುರಿಸುವಂತಾ ಗಿದೆ ಎಂದು ಹಲವು ವಿದ್ಯಾರ್ಥಿಗಳು ದೂರುತ್ತಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.