ಗುರುವಾರ , ಮೇ 13, 2021
22 °C

ಬೀಳಗಿಗೆ ಇಂದಿನಿಂದ ದಿನ ಬಿಟ್ಟು ದಿನ ನೀರು ಪೂರೈಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೀಳಗಿ: ಶಾಸಕ ಜೆ.ಟಿ. ಪಾಟೀಲ ಸಲಹೆಯಂತೆ ಪಟ್ಟಣದಲ್ಲಿ  ಪಟ್ಟಣ ಪಂಚಾಯ್ತಿಯಿಂದ ಎರಡು ದಿನಕ್ಕೊಮ್ಮೆ (ಒಂದು ದಿನ ಬಿಟ್ಟು ಒಂದು ದಿನ) ನೀರು ಪೂರೈಸಲು ಇಂದಿನಿಂದ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಪಟ್ಟಣ ಪಂಚಾಯ್ತಿ ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ಫಡಿಯಪ್ಪ ಕರಿಗಾರ ತಿಳಿಸಿದರು.ಇಲ್ಲಿನ ಜಿಎಲ್‌ಬಿಸಿ ಪ್ರವಾಸಿ ಮಂದಿರದಲ್ಲಿ ಸೋಮವಾರ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಪಟ್ಟಣದ ನೀರು ಪೂರೈಕೆ ವ್ಯವಸ್ಥೆ ಕುರಿತು ಅವರು ವಿವರಣೆ ನೀಡಿದರು.ಈ ಹಿಂದೆ ನಾಲ್ಕೈದು ದಿನಗಳಿಗೊಮ್ಮೆ ನೀರು ಸರಬರಾಜಾಗುತ್ತಿದ್ದು ನಾಗರಿಕರಿಗೆ ತೊಂದರೆಯಾಗುತ್ತಿತ್ತು. ಈ ತೊಂದರೆ ತಪ್ಪಿಸಲು ನೀರು ಪೂರೈಕೆಯ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಿ ಸರದಿ ಇದ್ದಾಗ 45 ನಿಮಿಷಗಳ ಕಾಲ ನೀರು ಸರಬರಾಜು ಮಾಡಲಾಗುವುದು ಎಂದರು.`ಪಟ್ಟಣಕ್ಕೆ ನೀರು ಸರಬರಾಜು ಮಾಡುತ್ತಿರುವ ಗುಳಬಾಳ ಜಾಕ್‌ವೆಲ್‌ನಲ್ಲಿ ಈಗ 40 ಅಶ್ವ ಶಕ್ತಿಯ ಎರಡು ವಿದ್ಯುತ್ ಮೋಟಾರುಗಳು ಕರ್ತವ್ಯ ನಿರ್ವಹಿಸುತ್ತಿದ್ದು ಸದ್ಯದಲ್ಲಿಯೇ ಅವುಗಳನ್ನು ತೆಗೆದು 75ಅಶ್ವ ಶಕ್ತಿಯ ಎರಡು ವಿದ್ಯುತ್ ಮೋಟಾರ್‌ಗಳನ್ನು ಬಳಸಲಾಗುವುದು.ವಿದ್ಯುತ್ ಮೋಟಾರ್, ಪಂಪುಗಳು, ಏರ್ ವಾಲ್ವ್‌ಗಳಿಗಾಗಿ ರೂ 1ಕೋಟಿ 25ಲಕ್ಷ ವೆಚ್ಚ ತಗುಲಲಿದ್ದು ಕರ್ನಾಟಕ ನೀರು ಸರಬರಾಜು ಮತ್ತು ಒಳ ಚರಂಡಿ ಇಲಾಖೆಗೆ ಆಡಳಿತಾತ್ಮಕ ಮಂಜೂರಿಗಾಗಿ ಕಳಿಸಲಾಗಿದೆ' ಎಂದು ಹೇಳಿದರು.`ಪಟ್ಟಣಕ್ಕೆ ನೀರು ಸರಬರಾಜು ಮಾಡಲು ಪ್ರತಿ ತಿಂಗಳು ಎರಡೂವರೆ ಲಕ್ಷ ರೂಪಾಯಿ ವಿದ್ಯುತ್ ವೆಚ್ಚ ತಗುಲುತ್ತಿದ್ದು ಅಧಿಕೃತವಾಗಿ ನಳದ ಸಂಪರ್ಕ ಪಡೆದುಕೊಂಡ  ನಾಗರಿಕರಿಂದ ಸಂದಾಯವಾಗುತ್ತಿರುವುದು ರೂ1ಲಕ್ಷ 60ಸಾವಿರದಷ್ಟು ಮಾತ್ರ' ಎಂದು ಹೇಳಿದ ಅವರು `ಪಟ್ಟಣದಲ್ಲಿ ಅನಧಿಕೃತವಾದ ನಳದ ಸಂಪರ್ಕಗಳು ಬಹಳಷ್ಟಿದ್ದು ಅನಧಿಕೃತವಾಗಿ  ನಳದ ಸಂಪರ್ಕ ಕಲ್ಪಿಸಿಕೊಂಡ ನಾಗರಿಕರು ಜೂನ್ ಕೊನೆಯೊಳಗಾಗಿ ಪಂಚಾಯ್ತಿಗೆ ಶುಲ್ಕ ಕಟ್ಟಿ ಅಧಿಕೃತಗೊಳಿಸಬೇಕು. ಇಲ್ಲದಿದ್ದಲ್ಲಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು' ಎಂದು ತಿಳಿಸಿದರು.`ನೀರು ಅಮೂಲ್ಯ ಸಂಪತ್ತಾಗಿದ್ದು ನೀರನ್ನು ಬೇಕಾಬಿಟ್ಟಿ ಬಳಸದೇ ನಿಯಮಿತವಾಗಿ, ಅವಶ್ಯಕತೆಗೆ ತಕ್ಕಷ್ಟು ಬಳಸಿಕೊಂಡು ಸಾಧ್ಯವಾದಷ್ಟೂ ಉಳಿತಾಯ ಮಾಡಬೇಕು' ಎಂದು ನಾಗರಿಕರಲ್ಲಿ ಮನವಿ ಮಾಡಿಕೊಂಡ ಅವರು `ಪಟ್ಟಣದ ಅಭಿವೃದ್ಧಿಗಾಗಿ ರೂ 6ಕೋಟಿ ವಿಶೇಷ ಅನುದಾನಕ್ಕೆ ಕೇಳಿಕೊಳ್ಳಲಾಗಿದೆ' ಎಂದು ತಿಳಿಸಿದರು.ಪತ್ರಿಕಾಗೋಷ್ಠಿಯಲ್ಲಿ ಶ್ರೀಶೈಲ ತಳೇವಾಡ, ಬಸನಗೌಡ ಪಾಟೀಲ, ಸಂತೋಷ ಜಂಬಗಿ, ಅಜೀಜಭಾಯಿ ಸರಕಾರ, ಸಿದ್ದು ಮಾದರ, ಬಾಬು ಬೀಳಗಿ, ಬಿ.ಆರ್. ಸೊನ್ನದ, ಶಂಕ್ರಪ್ಪ ಕಡ್ಲಿಮಟ್ಟಿ, ಎಂಜಿನಿಯರ್ ಜಿ.ಎಲ್. ಬಂಡಿವಡ್ಡರ ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.