ಭಾನುವಾರ, ಜೂನ್ 20, 2021
23 °C

ಬುಡಕಟ್ಟು ನೃತ್ಯ ಸಂಸ್ಕೃತಿಗಳ ಅನಾವರಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾಂಡೇಲಿ: ನಗರದ ಹಳೆ ದಾಂಡೇಲಿ ಯಲ್ಲಿ ನಡೆಯುತ್ತಿರುವ ರಾಜ್ಯಮಟ್ಟದ ಬುಡಕಟ್ಟು ನೃತ್ಯ ಮತ್ತು ಪ್ರದರ್ಶನ ಕಲೆಗಳ ಕಮ್ಮಟ ಕಾರ್ಯಕ್ರಮದ ಮೂರನೇ ದಿನ ಮೂಡಿಬಂದ ಹಸಲರ ಅಂಟಿಗೆ ಪಂಟಿಕೆ ಮತ್ತು ಕೋಲಾಟ, ಜೇನುಕುರುಬರ ಕೋಲಾಟ, ಬೇಟೆ ನೃತ್ಯ ಜನರ ಆಸಕ್ತಿಯನ್ನು ಇಮ್ಮಡಿಗೊಳಿಸಿತು.ಅವಂಟಿಗ ್ಯೊ-ಪವಂಟಿಗ್ಯೊ, ಅಡೀಪೀಡಿ, ಅಂಟಿ ಸುಂಟಿ, ಅವಟಿಗೊ-ಪವಟಿಗೊ, ಔಂಟಗ್ಯೋ-ಸುಂಟಿಗ್ಯೋ ಇತ್ಯಾದಿ ಹೆಸರುಗಳಿಂದ ಕರೆಯಲ್ಪಡುವ ಅಂಟಿಗೆ-ಪಂಟಿಗೆಯು ಚಿಕ್ಕಮಗಳೂರು, ಶಿವಮೊಗ್ಗ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿಯ ಕೆಲವು ಭಾಗಗಳಲ್ಲಿ ಪ್ರಚಲಿತವಿರುವ ಕಲೆಯಾಗಿದೆ. ಈ ಕುರಿತು ಸುಧಾಕರ್ ಪಿ. ಮತ್ತು ಡಾ.ಮೋಹನ್ ಚಂದ್ರಗುತ್ತಿ ವಿವರ ನೀಡಿದರು. ಬುಡಕಟ್ಟು ನೃತ್ಯ ಕಮ್ಮಟದಲ್ಲಿ ಹಸಲರ ಅಂಟಿಗೆ ಪಂಟಿಕೆ ಮತ್ತು ಕೋಲಾಟವು ಅತ್ಯುತ್ತಮವಾಗಿ ಮೂಡಿಬಂದಿತು.ಮೈಸೂರಿನ ಹೆಗಡೆದೇವನ ಕೋಟೆಯ ಜೇನುಕುರುಬ ಸಮು ದಾಯದ ಕಲಾವಿದರಿಂದ ಜೇನು ಕುರುಬರ ಕೋಲಾಟ ಕಾರ್ಯಕ್ರಮವು ಅಂದ ಚೆಂದದಿ ನಡೆಯಿತು.ತಾಳ ಮತ್ತು ಲಯ ಬದ್ಧವಾದ ಕೋಲಾಟ ನೆರೆದಿದ್ದ ಅಪಾರ ಜನಸ್ತೋಮವನ್ನು ಮಂತ್ರಮುಗ್ದರನ್ನಾಗಿಸಿತ್ತು.ಜೇನು ಕುರುಬರ ಕೋಲಾಟ ಮತ್ತವರ ಸಂಸ್ಕೃತಿಯ ಬಗ್ಗೆ ಬುಡಕಟ್ಟು ಮುಖಂಡ ಸೋಮಣ್ಣ ಅವರು ವಿವರಿಸಿ ಜೇನುಕುರುಬರ ಪ್ರಸಕ್ತ ಜೀವನ ಸ್ಥಿತಿಯ ಬಗ್ಗೆ ಸಮಗ್ರ ಚಿತ್ರಣ ನೀಡಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.