ಮಾಗಡಿ:  `ಜನಪದ ಕಲೆಗಳ ಕಣಜದಂತಿದ್ದು, ಕಡೆಗಣಿಸಲ್ಪಟ್ಟಿರುವ ಅಲೆಮಾರಿ ಬುಡಕಟ್ಟು ಕಾಡು ಗೊಲ್ಲರ ಮಕ್ಕಳ ವಿದ್ಯಾಭ್ಯಾಸಕ್ಕೆ ಹೆಚ್ಚಿನ ನೆರವು ನೀಡಲಾಗುವುದು~ ಎಂದು ಬೆಂಗಳೂರಿನ ದಾನಿಗಳಾದ ಸುಮುಖ್ ನುಡಿದರು.

ಅವರು ತಟವಾಳ್ ದಾಖ್ಲೆ ಕಾಡು ಗೊಲ್ಲರಹಟ್ಟಿಯ ಸರ್ಕಾರಿ ಶಾಲೆಯನ್ನು ದತ್ತುಸ್ವೀಕರಿಸಿ ಮಕ್ಕಳಿಗೆ ಉಚಿತ ನೋಟ್ಸ್ ಪುಸ್ತಕ ವಿತರಿಸಿ ಮಾತನಾಡಿದರು.

ಗೊಲ್ಲರಹಟ್ಟಿಯ ಸರ್ಕಾರಿ ಶಾಲೆಗಳು ಮೂಢ ನಂಬಿಕೆಗಳನ್ನು ದೂರಮಾಡಿ ಮಕ್ಕಳಲ್ಲಿ ಸಾಕ್ಷರತೆಯನ್ನು ಹರಡುವ ಕೆಂದ್ರವಾಗಬೇಕು. ಕಡೆಗಣಿಸಲ್ಪಟ್ಟಿರುವ ಸಮುದಾಯಗಳು ಇನ್ನಿತರೆ ಸಮುದಾಯಗಳ ಜೊತೆಗೆ ಸೇರಬೇಕಿದೆ. ಈ ಸಮುದಾಯದವರು ತಮ್ಮ ಮಕ್ಕಳಿಗೆ ಸೂಕ್ತ ಶಿಕ್ಷಣ ಕೊಡಿಸಲು ಮುಂದಾಗ ಬೇಕು ಎಂದರು. ಬಡತನ ನಿರ್ಮೂಲನೆ ಇರುವ ಏಕೈಕ ಮಾರ್ಗವೆಂದರೆ ಅಕ್ಷರದ ಅರಿವು ಮೂಡಿಸುವುದು.

ಜನಪದ ಕಲೆಗಳನ್ನು ತಮ್ಮ ತಲೆಮಾರಿಗೆ ನಾಶವಾಗದಂತೆ ತಮ್ಮ ಮುಂದಿನ ಪೀಳಿಗೆಗೆ ಕಾಪಿಡಲು, ಶಾಲಾ ಮಕ್ಕಳಿಗೆ ಜನಪದ ವೀರಗೀತೆಗಳನ್ನು, ಗಾದೆ, ಒಗಟು,ಲಾವಣಿ, ಕಥನಗೀತೆಗಳನ್ನು ಕಲಿಸಿ ಕೊಡಬೇಕಿದೆ ಎಂದರು.

ಸರ್ಕಾರ ನೀಡುವ ಸವಲತ್ತುಗಳನ್ನು ಬಳಸಿಕೊಂಡು ತಮ್ಮ ಮಕ್ಕಳಿಗೆ ವಿದ್ಯಾಭ್ಯಾಸ ಮಾಡಿಸಬೇಕು. ದನಕುರಿ ಕಾಯುವುದಕ್ಕೆ ಕಳುಹಿಸದೇ ಶಾಲೆಗೆ ಕಳಿಸಿ. ಶಾಲೆಗೆ ಬೇಕಾದ ಪಾಠೋಪಕರಣಗಳು ಮತ್ತು ಪೀಠೋಪಕರಣಗಳ ಜೊತೆಗೆ ಪ್ರತಿಭಾವಂತ ಮಕ್ಕಳಿಗೆ ನಗದು ಬಹುಮಾನ ನೀಡುವುದಾಗಿ ದಾನಿ ಸುಮುಖ್ ತಿಳಿಸಿದರು. ಮುಖ್ಯಶಿಕ್ಷಕ ಬೋರಯ್ಯ, ಶಿಕ್ಷಕಿ ಸುನಿತ ಹಾಗೂ ಗೊಲ್ಲರಹಟ್ಟಿಯ ನಿವಾಸಿಗಳು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.