ಶುಕ್ರವಾರ, ಜನವರಿ 24, 2020
20 °C

ಬುದ್ಧಿ ವಿಕಾಸದ ಶಿಕ್ಷಣ ಅಗತ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನೆಲಮಂಗಲ:   ಮನಃಶಕ್ತಿ ವೃದ್ಧಿಯಾಗುವ ಮತ್ತು ಬುದ್ಧಿವಿಕಾಸಗೊಳ್ಳುವ ವಿದ್ಯಾಭ್ಯಾಸ ನಮ್ಮದಾಗಬೇಕು ಎಂದು ಅಂಕಣಕಾರ ಸೂಲಿಬೆಲೆ ಚಕ್ರವರ್ತಿ ಅಭಿಪ್ರಾಯಪಟ್ಟರು.ಸ್ಥಳೀಯ ಪವಾಡ ಬಸವಣ್ಣದೇವರ ಮಠದಲ್ಲಿ ಸ್ವಾಮಿ ವಿವೇಕಾನಂದರ 150ನೇ ಜಯಂತಿ ಆಚರಣೆ ಅಂಗವಾಗಿ ಏರ್ಪಡಿಸಿದ್ದ ಬೃಹತ್ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ದೇಶದ ದೀನ, ದಲಿತ ಅಶಕ್ತ ಜನ ಸಾಮಾನ್ಯರನ್ನು ಕಡೆಗಣಿಸುವುದು ಅತಿದೊಡ್ಡ ಪಾಪ ಎಂಬದು ವಿವೇಕರ ವಾಣಿಯಾಗಿತ್ತು ಎಂದರು.

ಬೀದರ್‌ನಿಂದ ಆರಂಭವಾದ ವಿವೇಕ ಜ್ಯೋತಿ ಯಾತ್ರೆಯನ್ನು ಶನಿವಾರ ಬೆಳಗ್ಗೆ ತಾಲ್ಲೂಕಿನ ಯುವಕರು ಪ್ರಮುಖರು ಕುಣಿಗಲ್ ವೃತ್ತದ ಬಳಿ ಸಕಲ ಗೌರವಗಳೊಂದಿಗೆ ಬರಮಾಡಿಕೊಂಡರು.ಕೆಂಗೇರಿ ರಾಮಕೃಷ್ಣ ಆಶ್ರಮದ ಅಧ್ಯಕ್ಷರಾದ ಶ್ರೀ ಶಾರದಾತ್ಮಾನಂದ ಸ್ವಾಮೀಜಿ ನೇತೃತ್ವದಲ್ಲಿ ಸಾಮೂಹಿಕ ಭಜನೆ ನಡೆಯಿತು. ಬಸವಣ್ಣ ದೇವರ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ  ಅಧ್ಯಕ್ಷತೆ ವಹಿಸಿದ್ದರು. ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕೆ.ಪಿ.ಆನಂದ್, ಬಾಳೇಕಾಯಿ ನಾಗರಾಜು , ಹನುಮಂತು, ಕೇಬಲ್ ಸುರೇಶ್, ನಿಸರ್ಗಭಾರತೀಯ ಸಿ.ಎಲ್.ಜಗದೀಶ್ ಪ್ರಸಾದ್, ಪ್ರಾಂಶುಪಾಲರಾದ ಎ.ಎಸ್.ರಾಮಾನಂದ್, ಎಚ್.ಬಿ.ಪ್ರಾಕಾಶ್, ವಕೀಲ ವಸಂತ್‌ಕುಮಾರ್, ಎ.ಜಿ. ಸಂತೋಷ್ ಕುಮಾರ್, ವಿವಿಧ ಆಶ್ರಮಗಳ ಅನೇಕ ಯಾತ್ರಿಗಳು, ಪಟ್ಟಣದ ಎಲ್ಲ ಕಾಲೇಜುಗಳ ವಿದ್ಯಾರ್ಥಿಗಳು, ಪ್ರಾಂಶುಪಾಲರು, ಉಪನ್ಯಾಸಕರು ಭಾಗವಹಿಸಿದ್ದರು ವಿವೇಕಾನಂದ ಕಿರುಹೊತ್ತಿಗೆಯನ್ನು, ಪ್ರಸಾದವನ್ನು ಎಲ್ಲ ವಿದ್ಯಾರ್ಥಿಗಳಿಗು ವಿತರಿಸಲಾಯಿತು.

 

ಪ್ರತಿಕ್ರಿಯಿಸಿ (+)