ಶನಿವಾರ, ಜನವರಿ 18, 2020
20 °C

ಬುಧವಾರ, 18–12–1963

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉಪರಾಷ್ಟ್ರಪತಿಯಿಂದ 20 ರಂದು ಗೋವಾ ಹೊಸ ಸರ್ಕಾರದ ಉದ್ಘಾಟನೆ

ನವದೆಹಲಿ, ಡಿ. 17 – ಉಪರಾಷ್ಟ್ರಪತಿ ಡಾ. ಜಕೀರ್‌ ಹುಸೇನ್‌ರವರು ಇದೇ 20 ರಂದು ಶುಕ್ರವಾರ ಪಂಜಿಂನಲ್ಲಿ ಗೋವಾದ ನೂತನ ಸರ್ಕಾರವನ್ನು ಉದ್ಘಾಟಿಸಲಿರುವರೆಂದು ಇಂದು ಇಲ್ಲಿ ತಿಳಿದುಬಂದಿದೆ. ಗೋವಾದ ಲೆಫ್ಟಿನೆಂಟ್‌ ಗೌರ್ನರ್‌ರವರು, ಗೋವಾದ ನೂತನ ಸರ್ಕಾರದ ರೂಪರೇಖೆಗಳ ಬಗೆಗೆ ವಿದೇಶ ವ್ಯವಹಾರ ಸಚಿವ ಖಾತೆ ಅಧಿಕಾರಿಗಳೊಡನೆ ಇದೀಗ ಮಾತುಕತೆಗಳನ್ನು ಮುಗಿಸುತ್ತಿರುವರು.ಇಂದು ‘ಕುಟುಂಬ ಯೋಜನೆ ದಿನ’

ನವದೆಹಲಿ, ಡಿ. 17 –
ಕುಟುಂಬ ಯೋಜನೆ ಕಾರ್ಯಕ್ರಮಕ್ಕೆ ಉತ್ತೇಜನ ನೀಡುವ ಸಲುವಾಗಿ ಡಿಸೆಂಬರ್‌ 18 ರಂದು ಇಡೀ ರಾಷ್ಟ್ರದಲ್ಲಿ ‘ಕುಟುಂಬ ಯೋಜನೆ ದಿನ’ವನ್ನು ಆಚರಿಸಲಾಗುವುದು.

ಪ್ರತಿಕ್ರಿಯಿಸಿ (+)