ಗುರುವಾರ , ಜನವರಿ 23, 2020
29 °C

ಬುಧವಾರ, 25-1-1962

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕ್ಷೀರಪ್ರಿಯ ಕೆನಡಿ

ವಾಷಿಂಗ್‌ಟನ್, ಜ. 24
- ಅಮೆರಿಕದಲ್ಲಿ ಹಾಲಿನ ಬಳಕೆ 1960 ರಿಂದ ಕಡಿಮೆಯಾಗಿ ಹೋಗಿದೆ ಎಂಬುದನ್ನು ಕೇಳಿ ಮನಃಕ್ಷೋಭೆಗೊಂಡ ಅಧ್ಯಕ್ಷ ಕೆನೆಡಿಯವರು ಶ್ವೇತಭವನದ ಎಲ್ಲ ಭೋಜನ ಸಮಾರಂಭಗಳಲ್ಲಿ ಹಾಲನ್ನು ಬಡಿಸುವಂತೆ ತಾವು ಆಜ್ಞೆ ಮಾಡಿರುವುದಾಗಿ ನಿನ್ನೆ ತಿಳಿಸಿದರು.ಆಹಾರ ಮತ್ತು ಹಾಲು ಉತ್ಪಾದಕರ ಸಮ್ಮೇಳನವನ್ನುದ್ದೇಶಿಸಿ ಮಾತನಾಡುತ್ತಿದ್ದ ಅವರು ನೀರಿನ ಬದಲು ಒಂದು ಲೋಟ ಹಾಲನ್ನು ಕುಡಿದರು.ಪಾಕಿಸ್ತಾನ ಮೇಲೆ ಬಿದ್ದರೆ ಎದುರಿಸಲು ಸಿದ್ಧ

ಫಿರೋಜ್‌ಪುರ, ಜ. 24
- `ಭಾರತವು ಪಾಕಿಸ್ತಾನದೊಡನೆ ಯುದ್ಧಕ್ಕೆ ಹೋಗುವುದಿಲ್ಲ. ಆದರೆ ಪಾಕಿಸ್ತಾನವು ಯುದ್ಧ ಪ್ರಾರಂಭಿಸುವುದಾದರೆ ಆಗ ಭಾರತವು ಅದನ್ನು ಪೂರ್ಣವಾಗಿ ಎದುರಿಸುವುದು~ ಎಂದು ಪ್ರಧಾನಮಂತ್ರಿ ಶ್ರೀ ನೆಹರೂ ಅವರು ಇಂದು ಇಲ್ಲಿ ಘೋಷಿಸಿದರು.

ಪ್ರತಿಕ್ರಿಯಿಸಿ (+)