ಭಾನುವಾರ, ಮಾರ್ಚ್ 7, 2021
32 °C

ಬೆಂಗಳೂರಿನಲ್ಲಿ ಎಸ್‌ಪಿಆರ್‌ಇ ‘ವೆಸ್ಟ್‌ಪಾರ್ಕ್‌’

ಜೆ.ಕೆ.ವಿ Updated:

ಅಕ್ಷರ ಗಾತ್ರ : | |

ಬೆಂಗಳೂರಿನಲ್ಲಿ ಎಸ್‌ಪಿಆರ್‌ಇ ‘ವೆಸ್ಟ್‌ಪಾರ್ಕ್‌’

ಭಾರತೀಯ ವಾಣಿಜ್ಯೋದ್ಯಮ ಮಹಾಸಂಘದ (ಅಸೋಚಾಂ) ಇತ್ತೀ­ಚಿನ ವರದಿಯಂತೆ, ಬಂಡವಾಳ ಹೂಡಿಕೆ ಆಕರ್ಷಿಸುವಲ್ಲಿ ಕರ್ನಾಟಕವು ಗುಜ­ರಾತ್ ನಂತರದ ಎರಡನೇ ಸ್ಥಾನದಲ್ಲಿ ಇದೆ. ಸದ್ಯ ಗುಜರಾತ್‌ನಲ್ಲಿ ₨13 ಲಕ್ಷ ಕೋಟಿ ಮೊತ್ತದ 1,455 ಯೋಜ­ನೆಗಳು ಜಾರಿಯಲ್ಲಿದ್ದರೆ, ಕರ್ನಾಟಕದಲ್ಲಿ ₨9 ಲಕ್ಷ ಕೋಟಿ ಮೊತ್ತದ 1,528 ಯೋಜನೆಗಳು ಜಾರಿ ಹಂತದಲ್ಲಿವೆ. ಇದರಲ್ಲಿ ರಾಜ್ಯದಲ್ಲಿ ಜಾರಿಯಲ್ಲಿರುವ ಶೇ 14ರಷ್ಟು ಯೋಜನೆಗಳು ರಿಯಲ್‌ ಎಸ್ಟೇಟ್‌ ವಲಯಕ್ಕೆ ಸಂಬಂಧಿಸಿದವು ಎನ್ನುವುದು ವಿಶೇಷ.



‘ಕರ್ನಾಟಕ ಅದರಲ್ಲೂ ಬೆಂಗಳೂರು ದಕ್ಷಿಣ ಭಾರತದ ಪ್ರಮುಖ ರಿಯಲ್‌ ಎಸ್ಟೇಟ್‌ ಮಾರುಕಟ್ಟೆಯಾಗಿ ಬೆಳೆ­ಯುತ್ತಿದೆ. ಅದರಲ್ಲೂ ನಿರ್ಮಾಣ ಕ್ಷೇತ್ರದಲ್ಲಿ ಅನಿವಾಸಿ ಭಾರತೀ­ಯರ ಬಂಡವಾಳ ಹೂಡಿಕೆ (ಎನ್‌­ಆರ್‌ಐ)  ಆಕರ್ಷಣೆಯಲ್ಲಿ ಬೆಂಗಳೂರು ಮುಂ­ಚೂಣಿಯಲ್ಲಿದೆ’ ಎನ್ನುತ್ತಾರೆ  ದೇಶದ ಪ್ರಮುಖ ರಿಯಲ್‌ ಎಸ್ಟೇಟ್‌ ಕಂಪೆನಿ ‘ಶಾರ್ಪೊಜಿ ಪಲ್ಲೋಂಜಿ ರಿಯಲ್‌ ಎಸ್ಟೇಟ್‌’ನ  (ಎಸ್‌ಪಿಆರ್‌ಇ) ‘ಸಿಇಒ’ ಕೆಕೂ ಕೊಲಹ್‌.



‘ವೆಸ್ಟ್‌ಪಾರ್ಕ್‌’

ದೇಶದ ರಿಯಲ್‌ ಎಸ್ಟೇಟ್‌ ಉದ್ಯಮದಲ್ಲಿ ಸುಮಾರು 148 ವರ್ಷಗಳಷ್ಟು ಇತಿಹಾಸ ಹೊಂದಿರುವ ‘ಎಸ್‌ಪಿಆರ್‌ಇ’ ಇದೇ ಮೊದಲ ಬಾರಿಗೆ  ಕರ್ನಾಟಕದಲ್ಲಿ ವಸತಿ ಯೋಜನೆ ಪ್ರಾರಂಭಿಸಿದೆ. ‘ವೆಸ್ಟ್‌ಪಾರ್ಕ್‌’ ಹೆಸರಿನ ಈ ಯೋಜನೆ ಬೆಂಗಳೂರಿನ ಮೈಸೂರು ರಸ್ತೆಗೆ ಸಮೀಪದಲ್ಲಿರುವ ಬಿನ್ನಿಪೇಟೆ­ಯಲ್ಲಿ ಅಸ್ತಿತ್ವಕ್ಕೆ ಬರಲಿದೆ.  ‘ಉದ್ಯಾನ ನಗರಿ’ ಕಲ್ಪನೆಯನ್ನು ಮತ್ತೆ ಮರಳಿ ತರುವ ಆಶಯದೊಂದಿಗೆ ಈ ಯೋಜನೆ ಕೈಗೆತ್ತಿಕೊಂಡಿದ್ದೇವೆ.



ಹೀಗಾಗಿ ನಿರ್ಮಾ­ಣ ಕ್ಷೇತ್ರದ ಶೇ 80ರಷ್ಟು ಸ್ಥಳವನ್ನು ಖಾಲಿಯಾಗಿ ಬಿಡಲಾಗಿದೆ. ಇದರಿಂದ ನೈಸರ್ಗಿಕ ಗಾಳಿ, ಬೆಳಕಿನ ಜತೆಗೆ  ಹಸಿರು ಪರಿಸರದ ಅನುಭವ ಸಹ ಲಭಿಸಲಿದೆ.  ಮಳೆ ನೀರು ಇಂಗಿಸುವುದು, ಸೌರಶಕ್ತಿ ಬಳಕೆ ಸೇರಿದಂತೆ ಇಲ್ಲಿ ಜಾರಿಗೊಳಿ­ಸಿರುವ ಪರಿಸರ ಸ್ನೇಹಿ ಕ್ರಮಗಳಿಗೆ ಇಂಡಿ­ಯನ್‌ ಗ್ರೀನ್‌ ಬಿಲ್ಡಿಂಗ್‌ ಕೌನ್ಸಿಲ್‌ನ (ಐಜಿಬಿಸಿ) ಮಾನ್ಯತೆ ಸಹ ಲಭಿಸಿದೆ’ ಎನ್ನುತ್ತಾರೆ ಕೆಕೂ.



‘ವೆಸ್ಟ್‌ಪಾರ್ಕ್‌’ ಯೋಜನೆ 47 ಏಕರೆ ಪ್ರದೇಶದಲ್ಲಿ ವಿಸ್ತರಿಸಿಕೊಂಡಿದೆ. 2, 3, 4 ಬೆಡ್‌ರೂಂ ಮನೆಗಳ ಜತೆಗೆ ಡ್ಯೂಪ್ಲೆಕ್ಸ್‌ ಮನೆಗಳೂ ಲಭ್ಯವಿದೆ. ಆರಂಭ ಕೊಡು­ಗೆಯಾಗಿ ಕಂಪೆನಿ ಪ್ರತಿ ಚದರ ಅಡಿಗೆ ₨6000 ಮೂಲ ಬೆಲೆ ನಿಗದಿ­ಪಡಿಸಿತ್ತು. ಮೇ 9ರಿಂದ ಬುಕ್ಕಿಂಗ್‌ ಪ್ರಾರಂ­ಭವಾ­ಗಿದ್ದು, ದರದಲ್ಲಿ ಅಲ್ಪ ವ್ಯತ್ಯಾಸವಾಗಿದೆ. 700 ಅಪಾರ್ಟ್‌­ಮೆಂಟ್‌­ಗಳು ಮೊದಲ ಹಂತದ ಯೋಜನೆಯಲ್ಲಿ ಸೇರಿವೆ. ಒಂದೇ ಸೂರಿನಡಿ  ಎಲ್ಲ ವರ್ಗದ ಗ್ರಾಹ­ಕರಿಗೆ, ಅವರವರ ಜೇಬಿಗೆ ಹೊಂದು­ವಂತೆ ಅವಕಾಶ ಕಲ್ಪಿಸಲಾಗುವುದು ಎಂದು ಅವರು ಹೇಳಿದರು.



ಐ.ಟಿ ಪಾರ್ಕ್‌, ಕಾರ್ಪೊರೇಟ್‌ ಕಚೇರಿಗಳು, ಕ್ರೀಡಾಂಗಣಗಳು, ಭಾರ­ತೀಯ ರಿಸರ್ವ್ ಬ್ಯಾಂಕಿನ (ಆರ್‌ಬಿಐ) ಕಚೇರಿ ಸೇರಿದಂತೆ ಮುಂಬೈ, ಪುಣೆ, ನವದೆಹಲಿ ಹಾಗೂ ದುಬೈನಲ್ಲೂ ‘ಎಸ್‌ಪಿಆರ್‌ಇ’ ನಿರ್ಮಾಣ ಕ್ಷೇತ್ರದಲ್ಲಿ ಹಲವು ಮೈಲಿಗಲ್ಲುಗಳನ್ನು ಸ್ಥಾಪಿಸಿದೆ. ಇದೀಗ ಮೊದಲ ಬಾರಿಗೆ ಬೆಂಗಳೂರಿಗೆ ಪ್ರವೇಶಿಸಿದ್ದೇವೆ. ಮೈಸೂರಿನಲ್ಲೂ ಕಂಪೆನಿ ಒಡೆತನಕ್ಕೆ ಸೇರಿದ ಭೂಮಿ (ಭೂ ಬ್ಯಾಂಕ್‌) ಇದೆ. ಕೋಲ್ಕತ್ತದಲ್ಲಿ ‘ಸುಖೋ­ಬೃಷ್ಟಿ’ ಹೆಸರಿನಲ್ಲಿ ಪ್ರಾರಂ­ಭಿಸಿದ್ದ ಅಗ್ಗದ ದರದ ‘ಸಮೂಹ ಮನೆಗಳು’ ಸಾಕಷ್ಟು ಜನಪ್ರಿಯತೆ ಗಳಿಸಿವೆ. 150 ಏಕರೆ ವಿಸ್ತೀರ್ಣದ ಟೌನ್‌ಶಿಪ್‌ ಯೋಜನೆಯಲ್ಲಿ ಸುಮಾರು 20 ಸಾವಿರ ಕುಟುಂಬಗಳಿಗೆ ಸೂರು ಒದಗಿಸಲಾಗಿದೆ. ಇದೇ ಮಾದರಿಯಲ್ಲಿ ಕರ್ನಾಟಕದಲ್ಲೂ ನಿಧಾನವಾಗಿ ಎರಡು ಮತ್ತು ಮೂರನೇ ಹಂತದ ನಗರ­ಗಳಲ್ಲಿ ಹೂಡಿಕೆ ವಿಸ್ತರಿಸುವ ಯೋಜನೆ ಇದೆ ಎಂದು ಕೆಕೂ ಹೇಳಿದರು.



ಬೆಂಗಳೂರು ಹೂಡಿಕೆ ತಾಣ

ಬೆಂಗಳೂರಿನಲ್ಲಿ ಹೆಚ್ಚುತ್ತಲೇ ಇರುವ ಉದ್ಯೋ­ಗಾವಕಾಶ, ಉತ್ತಮ ಹವಾ­ಮಾನ, ವೈವಿಧ್ಯಮಯ ಜೀವನಶೈಲಿ ಮೊದ­ಲಾದ ಕಾರಣಗಳಿಂದಾಗಿ ಜನರ ವಲಸೆ ಹೆಚ್ಚುತ್ತಲೇ ಇದೆ. ಇದು ಇಲ್ಲಿನ ‘ರಿಯಲ್‌ ಎಸ್ಟೇಟ್’ ಉದ್ಯಮಕ್ಕೆ ಉತ್ತೇ­ಜನಕಾ­ರಿಯಾ­ಗಿದೆ. ಆದರೆ, ಕಳೆದ 2ವರ್ಷಗಳಲ್ಲಿ ಇಲ್ಲಿನ ವಸತಿ ನಿರ್ಮಾಣ ಭೂಮಿ ಬೆಲೆಯಲ್ಲಿ ಶೇ 26.1ರಷ್ಟು ಏರಿಕೆ ಕಂಡುಬಂದಿದೆ.  ಇನ್ನೊಂದೆಡೆ ಐ.ಟಿ ಕ್ಷೇತ್ರದ ಪ್ರಗತಿ ವಾಣಿಜ್ಯ ಬಳಕೆ ಕಟ್ಟಡಗಳಿಗೆ ಬೇಡಿಕೆ ಹೆಚ್ಚುವಂತೆ ಮಾಡಿದೆ. ಈ ಎಲ್ಲ ಅಂಶಗಳು ಬೆಂಗಳೂ­ರನ್ನು ಹೂಡಿಕೆ ತಾಣವಾಗಿ ಆಯ್ದು­ಕೊಳ್ಳಲು ಪ್ರಮುಖ ಕಾರಣ ಎನ್ನುತ್ತಾರೆ ಕೆಕೊ.  

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.