ಶುಕ್ರವಾರ, ಮೇ 7, 2021
25 °C

ಬೆಂಗಳೂರಿನ ಮೂವರು ಸಮುದ್ರಪಾಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಂಕೋಲಾ (ಉ.ಕ.ಜಿಲ್ಲೆ): ಇಲ್ಲಿಗೆ ಸಮೀಪದ ಹೊನ್ನಿಬೈಲ್ ಕಡಲ ತೀರದ ಹನಿಬೀಚ್ ರೆಸಾರ್ಟ್ ಬಳಿ ಸಮುದ್ರದಲ್ಲಿ ಆಕಸ್ಮಿಕವಾಗಿ ಮುಳುಗಿ ಮೂವರು ನಾಪತ್ತೆಯಾದ ಘಟನೆ ಶುಕ್ರವಾರ ಸಂಭವಿಸಿದೆ.ಇವರನ್ನು ಬೆಂಗಳೂರು ವೈಟ್‌ಫೀಲ್ಡ್ ಮತ್ತು ತಿಪ್ಪಸಂದ್ರದ ಅಮಿತ್ ವಿಷ್ಣುಕುಮಾರ ಮರಾರ್ಕ್ (35), ಪ್ರವೀಣ ನೆವಿತಾ (35) ಮತ್ತು ಇವರ ಪತ್ನಿ ಸಂಜಲಿ (30) ಎಂದು ಗುರುತಿಸಲಾಗಿದೆ.ಇವರು ಕಾರಿನಲ್ಲಿ ಶುಕ್ರವಾರ ಬೆಳಿಗ್ಗೆ ಆಗಮಿಸಿ ರೆಸಾರ್ಟ್‌ನಲ್ಲಿ ತಂಗಿದ್ದರು. ಶುಕ್ರವಾರ ಬೆಳಿಗ್ಗೆ 11 ಗಂಟೆ ಸುಮಾರಿಗೆ ಕಡಲ ತೀರದ ಇಳಿಜಾರಿನಲ್ಲಿರುವ ಬಂಡೆಯ ಮೇಲೆ ನಿಂತುಕೊಂಡಿದ್ದ ಇವರು ಅಲೆಗಳು ಅಪ್ಪಳಿಸಿದ್ದರಿಂದ  ಕೊಚ್ಚಿ ಹೋಗಿರಬಹುದೆಂದು ಶಂಕಿಸಲಾಗಿದೆ. ದುರ್ಘಟನೆಯಲ್ಲಿ ಅಮಿತ್ ಅವರ ಪತ್ನಿ ದಿವ್ಯಾ ಮತ್ತು ಪ್ರವೀಣ-ಸಂಜಲಿ ದಂಪತಿ  ಪುತ್ರಿ ಮೂರು ವರ್ಷದ ಅನುಷ್ಕಾ ಬದುಕುಳಿದಿದ್ದಾರೆ.

ಅಗ್ನಿಶಾಮಕ ದಳ, ಕೋಸ್ಟ್    ಗಾರ್ಡ್  ಸಿಬ್ಬಂದಿ ಶವಗಳ ಪತ್ತೆ ಕಾರ್ಯದಲ್ಲಿ ಸ್ಥಳೀಯ ಪೊಲೀಸರಿಗೆ ನೆರವಾಗುತ್ತಿದ್ದಾರೆ. ಸಂಜೆಯವರೆಗೆ ಶವಗಳು ದೊರೆತಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.