ಕೃಷ್ಣರಾಜಪುರ: ಚಿಕ್ಕದೇವಸಂದ್ರ ಗ್ರಾಮದ ಸಮುದಾಯ ಭವನದಲ್ಲಿ `ಬೆಂಗಳೂರು ಒನ್' ಕೇಂದ್ರಕ್ಕೆ ಬೀಗ ಹಾಕಿ ಎರಡು ವರ್ಷಗಳಾದರೂ ಪರ್ಯಾಯ ವ್ಯವಸ್ಥೆ ಮಾಡಿಲ್ಲ ಎಂದು ಸ್ಥಳೀಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

`ಬಿಬಿಎಂಪಿ ವ್ಯಾಪ್ತಿಯ ವಾರ್ಡ್ 53ಕ್ಕೆ ಸೇರಿದ ಚಿಕ್ಕದೇವಸಂದ್ರ ಸಮುದಾಯ ಭವನದಲ್ಲಿ `ಬೆಂಗಳೂರು ಒನ್' ಕೇಂದ್ರ ನಿರ್ಮಿಸಲು ಸರ್ಕಾರ ಮುಂದಾಗಿತ್ತು. ಆದರೆ, ಅದು ಗೊಂದಲದ ಗೂಡಾಗಿ ಪರಿಣಮಿಸಿ ಎರಡು ಪಕ್ಷಗಳ ಜಟಾಪಟಿಯಿಂದ ಬೀಗಮುದ್ರೆ ಹಾಕಲಾಗಿದೆ' ಎಂದು ನಿವಾಸಿ ರಮೇಶ್ ದೂರಿದರು.

ಬಿಬಿಎಂಪಿ ಸದಸ್ಯೆ ಕೆ.ಪೂರ್ಣಿಮಾ ಅವರು 2011ರ ಜೂನ್ 11ರಂದು `ಬೆಂಗಳೂರು ಒನ್' ಕೇಂದ್ರವನ್ನು ಉದ್ಘಾಟಿಸಿದ್ದರು. ಆಗಿನ ಶಾಸಕ ಎನ್.ಎಸ್.ನಂದೀಶ ರೆಡ್ಡಿ ಅನುಪಸ್ಥಿತಿಯಲ್ಲಿ ಕಾರ್ಯಕ್ರಮ ಉದ್ಘಾಟನೆಯಾಗಿದೆ ಎಂದು ಬಿಜೆಪಿ ಕಾರ್ಯಕರ್ತರು ಬೀಗ ಹಾಕಿಸಿದ್ದರು. ಜೂನ್ 22ರಂದು ಎನ್.ಎಸ್.ನಂದೀಶ ರೆಡ್ಡಿ ಕೇಂದ್ರಕ್ಕೆ ಚಾಲನೆ ನೀಡಿದ್ದರು.

ಸಮದಾಯ ಭವನಕ್ಕೆ ಮೀಸಲಿರಿಸಿದ ಜಾಗವನ್ನು `ಬೆಂಗಳೂರು ಒನ್' ಕೇಂದ್ರಕ್ಕೆ ಬಳಸಲಾಗಿದೆ ಎಂದು ದೂರಿ ದಲಿತ ಮುಖಂಡರು ಪ್ರತಿಭಟಿಸಿದ್ದರು. ಕೇಂದ್ರಕ್ಕೆ ಬೀಗ ಹಾಕಿ ಚಟುವಟಿಕೆ ಸ್ಥಗಿತಗೊಳಿಸಲಾಗಿತ್ತು.

`ಇದುವರೆಗೂ ಸಮುದಾಯ ಭವನದಲ್ಲಿ ಚಟುವಟಿಕೆಗಳು ನಡೆದಿಲ್ಲ. ಇನ್ನೊಂದೆಡೆ `ಬೆಂಗಳೂರು ಒನ್' ಕೇಂದ್ರ ಕಾರ್ಯಾರಂಭ ಮಾಡದೆ ಸ್ಥಗಿತಗೊಂಡಿದೆ' ಎಂದು ಅಂಗಡಿ ಮಾಲೀಕ ವೆಂಕಟೇಶಪ್ಪ ಬೇಸರ ವ್ಯಕ್ತಪಡಿಸಿದರು.`ನೂತನ ಶಾಸಕರು ಮತ್ತು ಬಿಬಿಎಂಪಿ ಸದಸ್ಯೆ ಈಗ ಒಂದೇ ಪಕ್ಷದವರು. ಅವರು ಈ ಸಮಸ್ಯೆ ಪರಿಹರಿಸಲು ಕಾರ್ಯೋನ್ಮುಖರಾಗಬೇಕು' ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.