ಬುಧವಾರ, ಮಾರ್ಚ್ 29, 2023
32 °C

ಬೆಂಗಳೂರು ತಂಡಕ್ಕೆ ಪ್ರಶಸ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು ತಂಡಕ್ಕೆ ಪ್ರಶಸ್ತಿ

ದಾವಣಗೆರೆ: ದಾವಣಗೆರೆ ನೆಟ್‌ಬಾಲ್ ಅಸೋಸಿಯೇಷನ್ ವತಿಯಿಂದ ಹಮ್ಮಿಕೊಂಡಿದ್ದ ಹೊನಲು ಬೆಳಕಿನ ರಾಜ್ಯಮಟ್ಟದ ಪುರುಷ ಮತ್ತು ಮಹಿಳೆಯರ ನೆಟ್‌ಬಾಲ್ ಪಂದ್ಯಾವಳಿಯ ಅಂತಿಮ ಹಣಾಹಣಿಯಲ್ಲಿ ಬೆಂಗಳೂರಿನ ಡ್ಯಾಜ್‌ಲಿಂಗ್ ಸ್ಪೋರ್ಟ್ಸ್ ಕ್ಲಬ್‌ನ ತಂಡ ಪುರುಷ ವಿಭಾಗದಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಂಡಿತು.



ಪಂದ್ಯದ ಆರಂಭದಲ್ಲಿ ಹಿಡಿತ ಸಾಧಿಸಿದ್ದ ಬೆಂಗಳೂರಿನ ರೇಂಜರ್ಸ್‌ ಸ್ಪೋರ್ಟ್ಸ್ ಕ್ಲಬ್ ತಂಡ, ಅಂತಿಮ ಕ್ಷಣದಲ್ಲಿ ಹೊಂದಾಣಿಕೆ ಕೊರತೆಯಿಂದ ಪಂದ್ಯವನ್ನು ಕೈಚೆಲ್ಲಿತು. ಅಂತಿಮವಾಗಿ ಡ್ಯಾಜ್‌ಲಿಂಗ್ ತಂಡ 27-23 ಅಂತರದಲ್ಲಿ ಜಯ ಸಾಧಿಸಿತು. ಡ್ಯಾಜ್‌ಲಿಂಗ್ ತಂಡದ ಪರ ರಂಗ ಅತ್ಯಧಿಕ 21 ಅಂಕಗಳಿಸಿದರು.



ಡ್ಯಾಜ್‌ಲಿಂಗ್ ತಂಡದ ಆಟಗಾರರು ಸಮಯೋಚಿತ ಪ್ರದರ್ಶನ ತೋರಿದ ಪರಿಣಾಮ ಗೆಲುವು ಒಲಿಯಿತು. ಮಹಿಳೆಯರ ವಿಭಾಗದ ಪ್ರಶಸ್ತಿ ಗಾಗಿ ನಡೆದ ರೋಚಕ ಹಣಾಹಣಿ ಯಲ್ಲಿ ಬೆಂಗಳೂರಿನ ರಾಜಾಜಿನಗರ ಸ್ಪೋರ್ಟ್ಸ್ ಅಸೋಸಿಯೇಷನ್ ತಂಡವು ಬೆಂಗಳೂರು ಬಿಎಂಎಸ್ ಕಾಲೇಜಿನ ತಂಡವನ್ನು 21-19 ಅಂತರದಲ್ಲಿ ಮಣಿಸಿತು. ಆರ್‌ಎಸ್‌ಎ ತಂಡದ ಪರ ಪ್ರಮೀಳಾ ಅತ್ಯಧಿಕ 19 ಅಂಕಗಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.