ಬೆಂಗಳೂರು ಬೆಳಕಿಂಡಿ

7

ಬೆಂಗಳೂರು ಬೆಳಕಿಂಡಿ

Published:
Updated:
ಬೆಂಗಳೂರು ಬೆಳಕಿಂಡಿ

* ಬೆಂಗಳೂರು ಪೇಟೆ ಆಸ್ಪತ್ರೆಯಲ್ಲಿ ವೈದ್ಯರಾಗಿದ್ದ ಜೋಕ್ಸಿ ಅವರ ಮುಂದಾಳತ್ವದಲ್ಲಿ ಬೆಂಗಳೂರು ಮೆಡಿಕಲ್ ಸ್ಕೂಲ್ ಪ್ರಾರಂಭಗೊಂಡಿದ್ದು 1880ರ ನವೆಂಬರ್ 16 ರಂದು. ಅದೇ ಬೆಳೆದು ಬೆಂಗಳೂರು ವೈದ್ಯಕೀಯ ಕಾಲೇಜಾಯಿತು.* ಹೈದರಾಬಾದ್ ನಿಜಾಂ ಸರ್ಕಾರದ ಅಧೀನದಲ್ಲಿದ್ದ ಡೆಕ್ಕನ್ ಏರ್‌ವೇಸ್ 1946 ರಲ್ಲಿ ಹೈದರಾಬಾದ್ - ಬೆಂಗಳೂರು ನಡುವಣ ವಿಮಾನಯಾನ ಸೇವೆ ಶುರು ಮಾಡಿತು.* ಭಾರತೀಯ ಬಾಹ್ಯಾಕಾಶ ಸಂಸ್ಥೆಯು ಪ್ರೊ. ಯು. ಆರ್. ರಾವ್ ಅವರ ನೇತೃತ್ವದಲ್ಲಿ ಕಾರ್ಯಾರಂಭ ಮಾಡಿದ್ದು ಪೀಣ್ಯ ಕೈಗಾರಿಕಾ ಪ್ರದೇಶದ ಕೈಗಾರಿಕಾ ಷೆಡ್‌ಗಳಲ್ಲಿ. ಇಲ್ಲಿಯೇ ದೇಶದ ಮೊದಲ ಬಹೂಪಯೋಗಿ ಸಂಪರ್ಕ ಉಪಗ್ರಹ ‘ಆರ್ಯಭಟ’ ರೂಪುಗೊಂಡಿದ್ದು.* ಬೆಂಗಳೂರಿನಲ್ಲಿ ಮೊದಲ ವಾದ್ಯಗೋಷ್ಠಿ ‘ಸರಸ್ವತಿ ಆರ್ಕೆಸ್ಟ್ರಾ’. ಇದನ್ನು ಪ್ರಾರಂಭಿಸಿದವರು ಎಂ. ಎಸ್. ನಟರಾಜ್. ಇವರ ಪತ್ನಿ ಹೆಸರಾಂತ ನೃತ್ಯಗಾತಿ ಮಾಯಾರಾವ್.* ಕಾವೇರಿ ನದಿ ನೀರು ಬೆಂಗಳೂರಿನಲ್ಲಿ ಮೊಟ್ಟ ಮೊದಲ ಸಲ ಬಳಕೆಗೆ ಬಂದಿದ್ದು ಸೌಥ್ ಎಂಡ್ ವೃತ್ತದ ಬಳಿ (1974).

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry