ಭಾನುವಾರ, ಏಪ್ರಿಲ್ 11, 2021
32 °C

ಬೆಂಗಳೂರು - 79 ಶೀಘ್ರ ಆರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಿರ್ಮಾಪಕ ಹೇಮಂತ್ ಸುವರ್ಣ ಅವರ ‘ಬೆಂಗಳೂರು - 79’ ಹೆಸರಿನ ಚಿತ್ರ ಆರಂಭವಾಗಲಿದೆ. ‘ಬೆಂಗಳೂರು - 79’ ಅಂದಾಕ್ಷಣ ನೆನಪಿಗೆ ಬರುವುದು ಕಾಮಾಕ್ಷಿ ಪಾಳ್ಯ. ಆ ಜನನಿಬಿಡ ಪ್ರದೇಶದಲ್ಲಿ ನಡೆದ ಘಟನೆಯೊಂದನ್ನು ಆಧರಿಸಿ ಎಚ್.ಎಸ್. ಸಹನಾ ನಿರ್ದೇಶಿಸುತ್ತಿರುವ ಚಿತ್ರ ಇದು. ಅನೀಶ್ ತೇಜೇಶ್ವರ್ ಹಾಗೂ ಅಭಿನಯ ಮುಖ್ಯ ತಾರಾಗಣದಲ್ಲಿ ಇರುವ ಈ ಚಿತ್ರದಲ್ಲಿ ರವಿಕಾಳೆ, ಅಜಯ್, ರವಿರಾಜ್, ಸಾಧುಕೋಕಿಲ, ಜಗದೀಶ್, ರಮೇಶ್, ಸಂಪತ್ ಹಾಗೂ ಇನ್ನಿತರರು ಇದ್ದಾರೆ.ಗುರುಪ್ರಶಾಂತ್ ರೈ ಛಾಯಾಗ್ರಹಣ, ವಿಜಯಕುಮಾರ್ ಭದ್ರಾವತಿ ಸಹ ನಿರ್ದೇಶನ, ದೇವಿಕೃಪಾ ಸಂಗೀತ, ಕೆ.ಎಂ. ಪ್ರಕಾಶ್ ಸಂಕಲನ, ರವಿವರ್ಮ ಹಾಗೂ ಕೌರವ ವೆಂಕಟೇಶ್ ಸಾಹಸ ನಿರ್ದೇಶನ, ಪ್ರಕಾಶ್ ಮೇಕಪ್, ಗಣೇಶ್ ವಸ್ತ್ರ ವಿನ್ಯಾಸ ಗಂಡಸಿ ರಾಜು ನಿರ್ಮಾಣ ನಿರ್ವಹಣೆ ಇದೆ.ಡಬಿಂಗ್ ಮುಗಿಸಿದ ‘...ಡೂಪ್ಲಿಕೇಟ್’

ಕಶ್ಯಪ್ ಡಕೊಜು ನಿರ್ಮಿಸುತ್ತಿರುವ ‘ಮಿಸ್ಟರ್ ಡೂಪ್ಲಿಕೇಟ್’ ಚಿತ್ರಕ್ಕೆ ಮಾತಿನ ಜೋಡಣೆ ಮುಗಿದಿದೆ. ಮಂಗಳೂರಿನಲ್ಲಿ ಆರಂಭವಾದ ಈ ಚಿತ್ರದ ಚಿತ್ರೀಕರಣ ಬೆಂಗಳೂರು ಸೇರಿದಂತೆ ಕರ್ನಾಟಕದ ಹಲವು ಭಾಗಗಳಲ್ಲಿ ನಡೆದಿದೆ. ಚಿತ್ರದ ಕೆಲವು ಹಾಡುಗಳನ್ನು ಬ್ಯಾಂಕಾಕ್ ಸುತ್ತಮುತ್ತ ಚಿತ್ರೀಕರಿಸಲಾಗಿದೆ. ಕೋಡ್ಲು ರಾಮಕೃಷ್ಣ ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ರಾಘವ್‌ದ್ವಾರ್ಕಿ ಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ. ನವೀನ್ ಸುವರ್ಣ ಛಾಯಾಗ್ರಹಣ, ಮನೋಮೂರ್ತಿ ಸಂಗೀತ, ಶಿವು ಸಂಕಲನ ಹಾಗೂ ಡಿಫರೆಂಟ್ ಡ್ಯಾನಿ ಸಾಹಸ ನಿರ್ದೇಶನ ಇದೆ. ತಾರಾಬಳಗದಲ್ಲಿ ದಿಗಂತ್, ಪ್ರಜ್ವಲ್, ಶೀತಲ್, ದೇವರಾಜ್, ರಮೇಶ್‌ಭಟ್, ಸುಧಾ ಬೆಳವಾಡಿ, ಶಂಕರಣ್ಣ, ತುಳಸಿ ಶಿವಮಣಿ, ಆನಂದ್, ಸುಷ್ಮಾ, ಶಾಂತಿ  ಮುಂತಾದವರಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.