ಮಂಡ್ಯ: ರೇಷ್ಮೆ ಗೂಡಿಗೆ ಬೆಂಬಲ ಬೆಲೆಯನ್ನು ಘೋಷಿಸುವ ಮೂಲಕ ಬೆಳೆಗಾರರ ರಕ್ಷಣೆಗೆ ಸರ್ಕಾರ ಧಾವಿಸ ಬೇಕು ಎಂದು ಆಗ್ರಹ ಪಡಿಸಿ ರೇಷ್ಮೆ ಬೆಳೆಗಾರರು ಸೋಮವಾರ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ನಗರದಲ್ಲಿ ಭಾರಿ ಪ್ರತಿಭಟನೆ ನಡೆಸಿದರು. ಸಿಲ್ವರ್ ಜ್ಯೂಬಿಲಿ ಪಾರ್ಕ್ನಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೂ ಮೆರವಣಿಗೆಯಲ್ಲಿ ರೇಷ್ಮೆ ಗೂಡು ಮೂಟೆ ಹಿಡಿದು ಹೊರಟ ಬೆಳೆ ಗಾರರು ಸರ್ಕಾರ ಕೂಡಲೇ ಬೆಂಬಲ ಬೆಲೆ ಘೋಷಿಸಬೇಕು ಹಾಗೂ ಬೆಳೆ ಗಾರರ ಹಿತದೃಷ್ಟಿಯಿಂದ ರೇಷ್ಮೆ ಆಮದು ತಡೆಗಟ್ಟಬೇಕು ಎಂದು ಆಗ್ರಹಿಸಿದರು.

ರೈತ ಸಂಘ, ಪ್ರಾಂತ ಕೃಷಿ ಕೂಲಿ ಕಾರ್ಮಿಕರ ಸಂಘ, ಜನವಾದಿ ಮಹಿಳಾ ಸಂಘಟನೆ, ಕರ್ನಾಟಕ ರಕ್ಷಣಾ ವೇದಿಕೆ ಮತ್ತಿತರ ಸಂಘಟನೆ ಗಳು ಪ್ರತಿಭಟನೆಯಲ್ಲಿ ಭಾಗವಹಿ ಸಿದ್ದು, ರೇಷ್ಮೆ ಗೂಡಿನ ಬೆಲೆ ದಿಢೀರನೇ ಕುಸಿದಿದ್ದು, ಬೆಳೆಗಾರರು ಆತಂಕದಲ್ಲಿ ್ದಇದ್ದಾರೆ ಎಂದರು. ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಸಲ್ಲಿಸಿರುವ ಮನವಿಯಲ್ಲಿ ಬೆಳೆಗಾರರು, ಕಳೆದ ಎರಡು-ಮೂರು ದಿನಗಳ ಹಿಂದೆ ಕೆ.ಜಿ. ರೇಷ್ಮೆ ಗೂಡಿಗೆ ಸರಾಸರಿ ಧಾರಣೆ 250 ರಿಂದ 250 ರೂಪಾಯಿ ಇದ್ದು, ಈಗ ದಿಢೀರನೇ 100 ರಿಂದ 140 ರೂಪಾಯಿಗೆ ಕುಸಿದಿದ್ದು ಇಂದು ರೇಷ್ಮೆ ಬೆಳೆಯು ವುದೇ ದುಬಾರಿಯಾಗಿದೆ. ಬೆಲೆಯೂ ಕುಸಿದರೆ ಬೆಳೆಗಾರ ಸಂಕಷ್ಟಕ್ಕೆ ಸಿಲುಕಲಿದ್ದು, ಶೀಘ್ರವೇ ಬೆಂಬಲ ಬೆಲೆ ಘೋಷಿಸ ಬೇಕು.ಅಲ್ಲದೆ, ರೇಷ್ಮೆ ಮಾರಾಟ ಮಂಡಳಿ ಯು ಕಚ್ಚಾ ನೂಲನ್ನು ಶೇ 50ರಷ್ಟು ಖರೀದಿಸುವ ಮೂಲಕ ರೈತರಿಗೆ ಬೆಲೆ ಏರಿಕೆ ಮತ್ತು ಇಳಿಕೆಯ ಸರಾಸರಿ ಅಂತರ ಕಾಯ್ದು ಕೊಳ್ಳಬೇಕು ಎಂದು ಅವರು ಆಗ್ರಹ ಪಡಿಸಿದ್ದಾರೆ.

ರಾಮನಗರದಲ್ಲಿ ಪ್ರತಿಭಟನೆ ನಡೆ ಸಿದ ಕೃಷಿಕರ ಮೇಲೆ ಲಾಠಿ ಪ್ರಹಾರ ನಡೆಸಿರುವ ಕ್ರಮವನ್ನು ಬೆಳೆಗಾರರು ಖಂಡಿಸಿದರು. ಜಿಲ್ಲಾಧಿಕಾರಿಗಳ ಕಚೇರಿ ಬಳಿಕ ನಡೆದ ಪ್ರತಿಭಟನೆಯಲ್ಲಿ ಬೆಳೆಗಾರರನ್ನು ಉದ್ದೇಶಿಸಿ ಮಾತ ನಾಡಿದ ಪುಟ್ಟಣ್ಣಯ್ಯ ಅವರು, ಸರ್ಕಾರ ಕೂಡಲೇ ಇತ್ತ ಗಮನಹರಿಸಿ ರೇಷ್ಮೆ ಬೆಳೆಗಾರರ ನೆರವಿಗೆ ಧಾವಿಸ ಬೇಕು. ಇಲ್ಲದಿದ್ದರೆ ಪ್ರತಿಭಟನೆ ತೀವ್ರಗೊಳಿಸ ಲಾಗುವುದು ಎಂದು ಎಚ್ಚರಿಸಿದರು.

ಜನವಾದಿ ಮಹಿಳಾ ಸಂಘಟನೆ ಮುಖಂಡೆ ಸಿ. ಕುಮಾರಿ, ಪ್ರಾಂತ ಕೃಷಿ ಕೂಲಿ ಕಾರ್ಮಿಕರ ಸಂಘದ ರಾಮ ಕೃಷ್ಣ, ಕೆ.ಎಸ್.ಪುಟ್ಟಸ್ವಾಮಿ, ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಕೋಣಸಾಲೆ ನರಸರಾಜು, ಬೊಮ್ಮ ಯ್ಯ, ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕದ ಅಧ್ಯಕ್ಷ ಉಮಾ ಶಂಕರ್, ಮುಖಂಡರಾದ ಎಂ.ಎಸ್. ಚಿದಂಬರ್, ಪಿಗ್ಮಿಬಾಬು, ಪುನೀತಾ, ಮಹದೇವು, ಕನ್ನಡ ಪರ ಸಂಘಟನೆ ಗಳ ಒಕ್ಕೂಟ, ಸಮರಸೇನೆ ಸಂಘಟನೆ ಗಳ ಮುಖಂಡರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.