ಶನಿವಾರ, ಜೂನ್ 19, 2021
26 °C

ಬೆಂಬಲ: ಶೀಘ್ರ ನಿರ್ಧಾರ – ಶಾಸಕ ರಾಜೀವ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕೋಡಿ: ‘ಸದ್ಯಕ್ಕೆ ಬೇರೆ ಯಾವುದೇ ಪಕ್ಷವನ್ನು ಸೇರಬೇಕು ಎಂಬ ಪ್ರಸ್ತಾವ ತಮ್ಮ ಮುಂದಿಲ್ಲ. ಆದರೆ, ಲೋಕಸಭೆ ಚುನಾವಣೆಯಲ್ಲಿ ಯಾವ ಪಕ್ಷವನ್ನು ಬೆಂಬಲಿಸಬೇಕು ಎಂಬುದರ ಕುರಿತು ಕ್ಷೇತ್ರದ ಕಾರ್ಯಕರ್ತರು, ಮತದಾರರು ಮತ್ತು ಹಿರಿಯ­ರೊಂದಿಗೆ ಚರ್ಚಿಸಿ ಬರುವ ಒಂದು ವಾರದಲ್ಲಿ ತೀರ್ಮಾನ ಕೈಗೊಳ್ಳುತ್ತೇನೆ ’ ಎಂದು ಕುಡಚಿ ಕ್ಷೇತ್ರದ ಬಿಎಸ್‌ಆರ್‌ ಕಾಂಗ್ರೆಸ್ಸಿನ ಶಾಸಕ ಪಿ.ರಾಜೀವ್‌ ಇಂದಿಲ್ಲಿ ಸ್ಪಷ್ಟಪಡಿಸಿದರು.ಸೋಮವಾರ ಪಟ್ಟಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಧ್ಯಮಗಳಲ್ಲಿ ಪ್ರಕಟವಾಗಿರುವ ಕುಡಚಿ ಶಾಸಕ ಪಿ.ರಾಜೀವ ಬಿಜೆಪಿ ಸೇರ್ಪಡೆ­ಯಾ­ಗ­ಲಿದ್ದಾರೆ ಎಂಬ ವರದಿಗೆ ಅವರು ಸ್ಪಷ್ಟನೆ ನೀಡಿದರು.‘ಸದನದ ಒಳಗೆ ಮತ್ತು ಹೊರಗೆ ಸಮಾಜದ ತಳಮಟ್ಟದ ಜನರ ಧ್ವನಿಯಾಗಿ ಜನಸೇವೆ ಮಾಡುವ ಆಕಾಂಕ್ಷೆಯೊಂದಿಗೆ ರಾಜಕೀಯ ಪ್ರವೇಶ ಮಾಡಿರುವ ತಮಗೆ ಶ್ರೀರಾಮುಲು ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದಾರೆ. ಆದರೆ, ಹೈಕಮಾಂಡ್‌ ಸಂಸ್ಕೃತಿಯಲ್ಲಿ ಆ ಧ್ವನಿಯನ್ನು ಉಳಿಸಿಕೊಳ್ಳಲು ಸಾಧ್ಯವೇ?’ ಎಂಬ ಅಳಕು ವ್ಯಕ್ತಪಡಿಸಿದರು.ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ‘ಬಿಎಸ್‌ಆರ್‌ ಕಾಂಗ್ರೆಸ್‌ನ ಸಂಸ್ಥಾಪಕ ಶ್ರೀರಾಮುಲು ಅವರು ತಮಗೆ ಗುರುವಿದ್ದಂತೆ. ಅವರು ಬಿಜೆಪಿಯಿಂದ ಸ್ಪರ್ಧಿಸುತ್ತಿದ್ದು, ಚುನಾವಣೆಯಲ್ಲಿ ಅವರಿಗೆ ಜಯ ಸಿಗಲಿ’ ಎಂದು ಆಶಿಸಿದರು.‘ತಾವು ಬಿಜೆಪಿ ಸೇರದೇ ಇರುವುದು ಪಕ್ಷ ದ್ರೋಹ ಮಾಡಿದಂತೆಯೂ ಅಲ್ಲ. ಬಿಎಸ್‌ಆರ್‌ ಕಾಂಗ್ರೆಸ್‌ನ ನಾಯಕತ್ವ ವಹಿಸಿಕೊಳ್ಳುವ ಆಸಕ್ತಿಯೂ ತಮಗಿಲ್ಲ. ಮೊಳಕಾಲ್ಮೂರು ಶಾಸಕ ತಿಪ್ಪೇಸ್ವಾಮಿ ಅವರು ಹಿರಿಯರಾಗಿದ್ದಾರೆ, ಅವರು ಪಕ್ಷದ ನಾಯಕತ್ವ ವಹಿಸಿಕೊಳ್ಳಲಿ’ ಎಂದು ಹೇಳಿದರು.ಉದಯಕುಮಾರ ಮೂಳೆ, ಕಾಂತು ಬಾಡಗಿ, ಹಣಮಂತ ಪೂಜಾರ, ರತಿಕಾಂತ ಕೋಹಿನೂರ ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.