ಶುಕ್ರವಾರ, ಮೇ 14, 2021
29 °C

ಬೆಂ.ವಿ.ವಿ. ವಿಭಜನೆ ಅಗತ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು ವಿಶ್ವವಿದ್ಯಾಲಯ ಬಹು ದೊಡ್ಡದಾಗಿ ಬೆಳೆದಿದೆ. ಇದರ ಕಾರ್ಯವ್ಯಾಪ್ತಿಯಲ್ಲಿ 657 ಕಾಲೇಜುಗಳು ಕೆಲಸ ನಿರ್ವಹಿಸುತ್ತಿವೆ. ಇದರ ಭೌಗೋಳಿಕ ವ್ಯಾಪ್ತಿಯು ನಾಲ್ಕು ಜಿಲ್ಲೆಗಳನ್ನು ಆವರಿಸಿಕೊಂಡಿದೆ.ಇವುಗಳ ನಿಯಂತ್ರಣ, ಪರೀಕ್ಷೆ ಕೆಲಸ ಹಾಗೂ ಉತ್ತಮ ಆಡಳಿತ ನಡೆಸುವುದು ಕಷ್ಟ. ಗುಣಮಟ್ಟದ ಶಿಕ್ಷಣ ಕಾಪಾಡಿಕೊಳ್ಳುವುದೂ ಕಷ್ಟವಾಗಿದೆ.ಈ ಕಾರಣಗಳಿಂದ ವಿಶ್ವವಿದ್ಯಾ ಲಯವನ್ನು ಎರಡು ಭಾಗಗಳನ್ನಾಗಿಸಲು ತೀರ್ಮಾನಿಸಲಾಗಿತ್ತು. ಈ ವಿಭಜನೆ ಶಿಕ್ಷಣ ತಜ್ಞರ ಅಭಿಪ್ರಾಯವೂ ಆಗಿದೆ. ಈಗಾಗಲೇ ಈ ಕೆಲಸ ನಿರ್ವಹಿಸಲು ವಿಶೇಷ ಅಧಿಕಾರಿಯನ್ನು ನೇಮಕ ಮಾಡಲಾಗಿದೆ.

ಹೀಗಿರುವಾಗ ಈಗ ಈ ಕೆಲಸದಿಂದ ವಿಮುಖರಾಗುವುದು ಸರಿಯಲ್ಲ.

-ಪ್ರೊ.ಟಿ. ನಾರಾಯಣಪ್ಪ, ಬೆಂಗಳೂರು

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.